ಸುನೀಲ್ ದೇಸಾಯಿಗೆ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ 05: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವತರ್ಿ ಇಟಗಿ, ಸಾಂಸ್ಕೃತಿಕ ಉತ್ಸವದಲ್ಲಿ ಕೊಡಮಾಡುವ ಪ್ರತಿಷ್ಠಿತ ಚಾಲುಕ್ಯ ವಿಕ್ರಮಾಧಿತ್ಯ ರಾಜ್ಯ ಪ್ರಶಸ್ತಿಯನ್ನ  ಸಂಸದರ ಖಾಸಗಿ ಆಪ್ತ ಸಹಾಯಕರಾದ ಸುನೀಲ್ ದೇಸಾಯಿಗೆ ಉತ್ತಮ ಸಮಾಜ ಸೇವೆಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಕುಕನೂರ ತಾಲೂಕಿನ ಇಟಗಿ ಗ್ರಾಮದ ದೇವಾಲಯಗಳ ಮಹೇಶ್ವರ  ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಏರ್ಪಡಿಸಿದ ಇಟಗಿ ಸಾಂಸ್ಕೃತಿಕ ಉತ್ಸವ ಮಹದೇವ ದಂಡನಾಯಕ ವೇದಿಕೆಯಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು. 

  ಇಟಗಿ ಉತ್ಸವದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಕವಿ ಸಮ್ಮೇಳನ ಅಧ್ಯಕ್ಷೆ ಅನ್ನಪೂರ್ಣಮ್ಮ ಮನ್ನಪುರ ಹಿರಿಯ ನ್ಯಾಯವಾದಿ ಬೆಳಗಾವಿಯ ಕೆ.ಎಲ್. ಕುಂದರಗಿ ಮತ್ತು ಶ್ರೀಗಳು ಸೇರಿದಂತೆ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ಬಾಬು ಸುವರ್ೆ, ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರು, ನಾಗರಿಕ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ತಿರುಳ್ಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಎಂ. ಸಾದಿಕ್ ಅಲಿ, ಪತ್ರಕರ್ತರಾದ ಅಲ್ಲಾವುದ್ದೀನ್ ಎಮ್ಮಿ,  ರುದ್ರಪ್ಪ ಭಂಡಾರಿ, ಮತ್ತಿತರು ಉಪಸ್ಥಿತರಿದ್ದರು.