ಕೆಲಗೇರಿ ಕೆರೆಯ ಸಮಗ್ರ ನಿರ್ವಹಣೆಗೆ ಸೂಕ್ತ ಕ್ರಮ: ಚೋಳನ್

ಧಾರವಾಡ 15:  ಐತಿಹಾಸಿಕತೆ ಹೊಂದಿರುವ ನಗರದ ಮ್ರಮುಖ ಕೆರೆಯಾಗಿರುವ ಕೆಲಗೇರಿ ಕೆರೆಯ ನಿರ್ವಹಣೆಗೆ ಪಾಲಿಕೆ ಹಾಗೂ ಕೆಲಗೇರಿ ನಿವಾಸಿಗಳು ಮತ್ತು ಸಾರ್ವಜನಿಕರ ಸಹಕಾರ ಪಡೆದು ಸಮಗ್ರ ನಿರ್ವಹಣೆಗೆ ಸೂಕ್ತಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಅವರು ಇಂದು ಬೆಳಿಗ್ಗೆ ವಿವಿಧ ಶಾಲಾ ಕಾಲೇಜು ವಿದ್ಯಾಥರ್ಿಗಳು, ಅಧಿಕಾರಿಗಳು ಮತ್ತು ಸಂಘ, ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಕೆಲಗೇರಿ ಕೆರೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ, ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ನೀಡಿರುವಂತೆ ಮತ್ತು ಜನೇವರಿ 4,5 ಹಾಗೂ 6 ರಂದು ಧಾರವಾಡ ನಗರದಲ್ಲಿ ನಡೆಯಲ್ಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೊರ ಜಿಲ್ಲೆ, ಹೊರ ರಾಜ್ಯದ ಜನರು ಭಾಗವಹಿಸುವದರಿಂದ ನಗರದ ಸ್ವಚ್ಛತೆ, ಸೌಂದಯರ್ಿಕರಣಕ್ಕೆ ಆದ್ಯತೆ ನೀಡಿದ್ದು, ನಿರಂತರವಾಗಿ ನಗರದ ಬೇರೆ ಬೇರೆ ಸ್ಥಳದಲ್ಲಿ ಪ್ರತಿ ದಿನ ಸ್ವಚ್ಛತಾ ಕಾರ್ಯಕೈಗೊಳ್ಳಲಾಗುತ್ತಿದೆ.

ಅದರಂತೆ ಇಂದು ವಿವಿಧ ಶಾಲಾ ಕಾಲೇಜು ವಿದ್ಯಾಥರ್ಿಗಳು ಮತ್ತು ಪಾಲಿಕೆ ಸಿಬ್ಬಂದಿ, ವಿವಿಧ ಇಲಾಖೆ ಆಧಿಕಾರಿಗಳ ಸಹಯೋಗದಲ್ಲಿ ಕೆಲಗೇರಿ ಕೆರೆ ಸ್ವಚ್ಛತಾ ಹಮ್ಮಿಕೊಳ್ಳಲಾಗಿದೆ. ಕೆರೆ ಸ್ವಚ್ಛತೆ ಮತ್ತು ಸುಂದರತೆ ಕಾಪಾಡಲು ಸ್ಥಳೀಯ ನಿವಾಸಿಗಳ ಸಹಕಾರವು ಬೇಕು. ಅವರನ್ನು ಸೇರಿಸಿಕೊಂಡು ಆಸಕ್ತರ ತಂಡ ರಚಿಸಿ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಸಾಹಿತ್ಯ ಸಮ್ಮೇಳನ ಮುಗಿದ ತಕ್ಷಣ ಈ ಕುರಿತು ಸಭೆ ಜರುಗಿಸಿ, ಕೆರೆ ಸ್ವಚ್ಛತೆ, ದುರಸ್ತಿ ಹಾಗೂ ಅಗತ್ಯವಿರುವ ಹೊಸ ಕಾಮಗಾರಿಗಳಿಗೆ ಸೂಕ್ತ ಕ್ರೀಯಾಯೋಜನೆ ರೂಪಿಸಿ ಸಲ್ಲಿಸುವಂತೆ ಪಾಲಿಕೆ, ಲೋಕೋಪಯೋಗಿ ಹಾಗೂ ಕೃ.ವಿ.ವಿ ಅಧಿಕಾರಿಗಳಿಗೆ ಸೂಚಿಸುತ್ತೇನೆ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳುವಿಕೆಯಿಂದ ಮಾತ್ರ ಕೆರೆ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.

ಇಂದಿನ ಕೆಲಗೇರಿ ಕೆರೆ ಸ್ವಚ್ಛತಾ ಅಭಿಯಾನದಲ್ಲಿ ಹಿರಿಯ ಅಧಿಕಾರಿಗಳಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಬಿ.ಸಿ.ಸತೀಶ, ಪಾಲಿಕೆ ಆಯುಕ್ತ ಶಕೀಲ ಅಹ್ಮದ, ಡಾ.ಸದಾಶಿವ ಮಜರ್ಿ, ಮಹ್ಮದ ಜುಬೇರ, ಪ್ರಕಾಶ ಕುದರಿ, ವಿರೂಪಾಕ್ಷ ಯಮಕನಮರಡಿ,  ಡಾ.ವಿಶಾಲ ಅಡಹಳ್ಳಿಕರ, ಬಸವರಾಜ ವರವಟ್ಟಿ, ಬಿ.ಆರ್.ಹಿರೇಮಠ, ನಿಸಾರ ಅಹ್ಮದ, ಪಾಲಿಕೆ ಸಹಾಯಕ ಆಯುಕ್ತ ಎಂ.ಬಿ.ಸಬರದ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಶರಣ್ಣಪ್ಪ ಕೊಟಬಾಗಿ, ಬಸಲಿಂಗಯ್ಯ ಹಿರೇಮಠ, ಡಾ.ಬಸವರಾಜ ಡೋಣುರ, ಪ್ರಕಾಶ ಉಡಕೇರಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ಡಾ. ರಾಮು ಮೂಲಗಿ, ದೇವಾನಂದ ರತ್ನಾಕರ, ಡಾ.ವಿಶ್ವನಾಥ ಚಿಂತಾಮಣಿ, ಹಾಗೂ ಡಾ.ಡಿ.ಬಿ.ಕರಡೊಣಿ ನೇತೃತ್ವದಲ್ಲಿ ಕೆ.ಸಿ.ಡಿ ವಿದ್ಯಾಥರ್ಿಗಳು, ಪ್ರಾಚಾರ್ಯ ಎ.ಜಿ.ಶಿಂಗೆ ನೇತೃತ್ವದಲ್ಲಿ ಆರ್.ಎಲ್.ಎಸ್ ಕಾಲೇಜು ವಿದ್ಯಾಥರ್ಿಗಳು, ಪ್ರಾ.ಹಡಪದ ನೇತೃತ್ವದಲ್ಲಿ ಮದಿನಾ ಪಿ.ಯು ಕಾಲೇಜು, ಎಸ್.ಎಸ್.ದೊಡಮನಿ ನೇತೃತ್ವದಲ್ಲಿ ಶಿವಾಜಿ ಪಿ.ಯು.ಕಾಲೇಜು, ಕೆ.ಎಚ್.ಮಡಿವಾಳರ ನೇತೃತ್ವದಲ್ಲಿ ಕೆ.ಪಿ.ಎಸ್.ಸಿ. ಪಿಯು ಕಾಲೇಜು,  ಪ್ರಾ. ಕೊಟಬಾಗಿ ನೇತೃತ್ವದಲ್ಲಿ ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜು ವಿದ್ಯಾಥರ್ಿಗಳು, ಕಸಾಪ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.