ಕಬ್ಬಿನ ಬೆಳೆಯ ಕುರಿತು ವಿಚಾರ ಸಂಕೀರ್ಣ ಮತ್ತು ಮಣ್ಣಿನ ಆರೋಗ್ಯ ಕಾರ್ಡ್‌ಗಳ ವಿತರಣೆ ಕಾರ್ಯಕ್ರಮ
Sugarcane cultivation information complex and soil health card distribution program
ಧಾರವಾಡ 29: ಡಾ. ಎಸ್.ವಿ. ಪಾಟೀಲ ಪ್ರತಿಷ್ಠಾನ(ರಿ), ಕೃ.ವಿ.ವಿ. ಧಾರವಾಡ ಮತ್ತು ಕೆ.ಎಲ್.ಇ. ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26-01-2026 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದಿವಂಗತ ಡಾ. ಎಸ್. ವಿ. ಪಾಟೀಲ ರವರ ಜನ್ಮ ಭೂಮಿಯಾದ ಹುಲಕುಂದ ಗ್ರಾಮದ ಶ್ರೀರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ "ಕಬ್ಬಿನ ಬೆಳೆಯ ಕುರಿತು ವಿಚಾರ ಸಂಕೀರ್ಣ ಮತ್ತು ಮಣ್ಣಿನ ಆರೋಗ್ಯ ಕಾರ್ಡ್‌ಗಳ ವಿತರಣೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹುಲಕುಂದ ರೈತ ಬಾಂಧವರಿಗೆ ಕಬ್ಬಿನ ಬೆಳೆಯ ಕುರಿತು ವಿಚಾರ ಸಂಕೀರ್ಣ ನಡೆಸಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಬಾಲಚಂದ್ರ ನಾಡಗೌಡ ಪ್ರಾಧ್ಯಾಪಕರು ಮತ್ತು ಡಾ. ಸುನಿಲ್ ಕುಮಾರ್ ನೂಲಿ, ಪ್ರಿನ್ಸಿಪಾಲರು, ಡಿಪ್ಲೋಮಾ(ಕೃಷಿ) ಕಾಲೇಜ್ ಹುಕ್ಕೇರಿ ಇವರು ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
ಡಾ. ಪಿ.ಎಲ್. ಪಾಟೀಲ್. ಕುಲಪತಿಗಳು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಹುಲಕುಂದದ ರೈತರಿಗೆ ಮಣ್ಣು ಆರೋಗ್ಯ ಕಾರ್ಡಗಳನ್ನು ವಿತರಿಸಿ, ಕೃಷಿ ವಿಶ್ವವಿದ್ಯಾಲಯವು ರೈತರಿಗಾಗಿ ಸೇವೆ ಸಲ್ಲಿಸಲು ಸದಾ ಸಿದ್ದ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನು ಡಾ. ಎಚ್. ಬಿ. ಬಬಲಾದ ಮಾತನಾಡಿ ಪ್ರತಿಷ್ಠಾಣದ ಉದ್ದೇಶಗಳು, ಕಾರ್ಯಗಳ ಹಾಗೂ ಮಣ್ಣಿನ ಪರೀಕ್ಷೆಯ ಮಹತ್ವದ ಕುರಿತು ತಿಳಿಸಿದರು. ದಿವಂಗತ ಡಾ. ಎಸ್.ವಿ ಪಾಟೀಲ್ ಶಿಷ್ಯರಾದ ಡಾ.ವಿ.ಸಿ. ಪಾಟೀಲ ಮಾತನಾಡಿ ಹೊಲದಲ್ಲಿ ದುಡಿವ ರೈತನೇ ನಿಜವಾದ ರೈತ ಮತ್ತು ಕೃಷಿ ಕಾಯಕದ ಜೊತೆಗೆ ಪಶು ಸಂಗೋಪನೆ ಅತ್ಯಂತ ಮಹತ್ವಪೂರ್ಣವಾದ ಕಾರ್ಯವಾಗಿದೆ ಎಂದು ತಿಳಿಸಿದರು. ಕೃಷಿ ವಿಶ್ವವಿದ್ಯಾಲಯ ಸದಾ ಒಳಿತನ್ನು ಬಯಸುತ್ತದೆ.
ಅದರ ಸಲಹೆಯನ್ನ ಪಡೆದು ವ್ಯವಸ್ಥಿತ ಕೃಷಿಯನ್ನು ಮಾಡಿದರೆ ರೈತರು ಖುಷಿಯಾಗಿರಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾಯ್. ಎಚ್. ಮುಂಬರೆಡ್ಡಿ ಮಾತನಾಡಿ ಪ್ರತಿಷ್ಠಾನ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ಕೊಡುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ. ಬಬಲಾದ, ಡಾ. ಬಿ.ಎನ್. ಅರವಿಂದ್ ಕುಮಾರ್, ಡಾ. ವಿ.ಬಿ. ಕುಲಿಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಿವಲೀಲಾ ಅಶೋಕ್ ಉಳ್ಳೆಗಡ್ಡಿ. ಭಾಗವಹಿಸಿದ್ದರು ಆರ್ .ಎಸ್. ಪಾಟೀಲ್ ಸ್ವಾಗತಿಸಿದರು. ಡಾಕ್ಟರ್ ವಿ.ಕೆ. ಶಾನವಾಡ ವಂದಿಸಿದರು. ಆರ್.ಏ. ಕಡಪಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 