ಕೊಪ್ಪಳ 21: ನಾನು ಮಲ್ಲಿಗೆ (ಕಾಕಡ) ಬೆಳೆಯುತ್ತಿದ್ದೆ. ವಾಮನಮೂರ್ತಿ ಯವರ ಪ್ರೇರಣೆಯಿಂದ ಸುಗಂಧರಾಜ ಬೆಳೆಯಲು ಆರಂಭಿಸಿ ಒಳ್ಳೆಯ ಲಾಭ ಕಂಡುಕೊಂಡಿದ್ದೇನೆ ಹಾಗೇ ಪ್ರಸ್ತುತ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 1 ಎಕರೆ ನುಗ್ಗೆಕಾಯಿ ಬೆಳೆಯನ್ನು ಶಿವಕುಮಾರ ಗಾಂಜಿ ರವರ ಮಾರ್ಗದರ್ಶನದಲ್ಲಿ ನಾಟಿ ಮಾಡಿದ್ದೇನೆ. ಒಟ್ಟಾರೆ ತೋಟಗಾರಿಕೆ ಇಲಾಖೆಯ ಸಹಕಾರದಿಂದ ನಾನು ಒಳ್ಳೆಯ ಆದಾಯ ಪಡೆಯುತ್ತಿದ್ದೇನೆ. ಅವರಿಗೆಲ್ಲ ನಾಣು ಋಣಿ" ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ನವಲಿ ಗ್ರಾಮದ ಪಂಪಾಪತಿ ಅಮಾಜಪ್ಪ ಹಚ್ಚೊಳ್ಳಿ ಎಂಬ ರೈತನ ಹೆಮ್ಮೆ ಹಾಗೂ ಆತ್ಮ ವಿಶ್ವಾಸದ ನುಡಿ.
ಏಪ್ರಿಲ್ 2018ರಲ್ಲಿ ತಮ್ಮ ಸಂಬಂಧಿಕರಿಂದ ಸುಮಾರು 50 ಸಾವಿರ ಸುಗಂಧರಾಜ ಗಡ್ಡೆಗಳನ್ನು ಖರೀದಿಸಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿ ಸುಗಂಧರಾಜ ಬೆಳೆ ಬೆಳೆದು ಆಥರ್ಿಕ ಸ್ವಾವಲಂಬನೆ ಹೊಂದಿದ್ದಾರೆ., ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪುಷ್ಪ ಕೃಷಿ ಮಾಡಲು ಮುಂದಾಗಿ ಜೂನ್ ತಿಂಗಳಿನಲ್ಲಿ ಹನಿ ನೀರಾವರಿ ಅಳವಡಿಸಿದ್ದು ಇಲಾಖೆಯಿಂದ ಶೇ.90 ರಷ್ಟು ಸಹಾಯಧನ ಪಡೆದಿದ್ದಾರೆ. ಅಲ್ಲದೇ 2017-18 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೂ. 12000.00 ಸಹಾಯಧನ ಪಡೆದಿದ್ದಾರೆೆ. ಕಳೆದ ವರ್ಷ ಜುಲೈನಿಂದ ಇಳುವರಿ ಆರಂಭವಾಗಿದ್ದು ಪ್ರತಿ ದಿನ ಸರಾಸರಿ 10 ಕಿ.ಗ್ರಾಂ ಇಳುವರಿ ಪಡೆಯುತ್ತಾರೆ. ಪ್ರತಿ ಕಿ.ಗ್ರಾಂ.ಗೆ ರೂ. 60 ರಂತೆ ಮಾರಾಟ ಮಾಡುತ್ತಾರೆ.
ಕಳೆದ ವರ್ಷ ಜುಲೈನಿಂದ ನವೆಂಬರ್ ವರೆಗೂ ಸರಾಸರಿ 12 ಕಿ.ಗ್ರಾಂ. ಇಳುವರಿ ಬಂದಿದ್ದು ಇತ್ತೀಚೆಗೆ ಮಳೆ ಕೊರತೆಯಿಂದ ಇಳುವರಿ ಸ್ವಲ್ಪ ಕಡಿಮೆಯಾಗಿತ್ತು. ಇನ್ನು ಮೇಲೆ ಮತ್ತೆ ಇಳುವರಿ ಜಾಸ್ತಿಯಾಗುವ ನಿರೀಕ್ಷೆ ಅವರಲ್ಲಿ ಇದೆ. ಖರ್ಚೆಲ್ಲಾ ಹೋಗಿ ಪ್ರತಿ ತಿಂಗಳೂ ರೂ.10-12 ಸಾವಿರ ನಿವ್ವಳ ಲಾಭ ಪಡೆಯುತ್ತಿದ್ದಾರೆ. "ಸುಗಂಧರಾಜ 6 ತಿಂಗಳು ಚೆನ್ನಾಗಿ ಇಳುವರಿ ಕೊಡುತ್ತದೆ. ನಂತರ ಇಳುವರಿ ಕಡಿಮೆಯಾಗುತ್ತದೆ. ಆದರೂ ದಿನಾಲೂ ಕೈಯಲ್ಲಿ ಹಣ ದೊರೆಯುವ ನಿರಂತರ ಆದಾಯ ಕೊಡುವ ಬೆಳೆಯಾಗಿದೆ" ಎನ್ನುತ್ತಾರೆ ಪ್ರಗತಿಪರ ರೈತ ಪಂಪಾಪತಿ.
ಬೇರೆ ರೈತರು ಕೂಡ ವೈವಿಧ್ಯಮಯ ಬೆಳೆ ಬೆಳೆದು ಆದಾಯ ಮಾಡಿಕೊಳ್ಳಬೇಕೆಂದು ಅವರು ಸಲಹೆ ನೀಡುತ್ತಾರೆ. ಇವರ ಸಲಹೆಯಂತೆ ಇವರ ಸಂಬಂಧಿ ಬಸವರಾಜ ಕುಣಿಕೇರಿ, ಚಿಲವಾಡಗಿರವರು ಸುಗಂಧರಾಜ ಬೆಳೆಯಲು ಆಸಕ್ತರಾಗಿದ್ದು, 1/2 ಎಕರೆ ಜಾಗದಲ್ಲಿ ಸುಗಂಧರಾಜ ಬೆಳೆಯಲು ತೋಟಗಾರಿಕೆ ಇಲಾಖೆ ಸಂಪಕರ್ಿಸಿ ಬೇಸಾಯ ಕ್ರಮಗಳ ಬಗ್ಗೆ ತಿಳಿದುಕೊಂಡು ಗಡ್ಡೆಗಳನ್ನು ಇದೇ ತಿಂಗಳು ನಾಟಿ ಮಾಡಲು ಸಿದ್ದರಾಗಿದ್ದಾರೆ.
ಒಟ್ಟಾರೆ ತೋಟಗಾರಿಕೆ ಬೆಳೆಗಳಿಂದ ಉತ್ತಮ ಆದಾಯ ನಿರೀಕ್ಷಿಸಿರುವ ಇವರು ತರಕಾರಿ, ತೆಂಗು ಬೆಳೆಯುತ್ತಿದ್ದಾರೆ. "ತೋಟಗಾರಿಕೆ ಬೆಳೆಗಳಿಂದ ಬರಗಾಲದಲ್ಲೂ ಉತ್ತಮ ಆದಾಯ ಮಾಡಿಕೊಳ್ಳುವ ಅವಕಾಶವಿದ್ದು, ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಬರಗಾಲದಲ್ಲಿಯೂ ಉತ್ತಮ ಬೆಳೆ ಬೆಳೆದು ಆದಾಯ ಮಾಡಿಕೊಂಡಿರುವ ಸದರಿ ರೈತರು ಒಬ್ಬ ಮಾದರಿ ರೈತರಾಗಿದ್ದಾರೆ" ಎನ್ನುತ್ತಾರೆ ನವಲಿ ರೈತ ಸಂಘದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ರವರು.
ಹೆಚ್ಚಿನ ಮಾಹಿತಿಗಾಗಿ ನವಲಿ ಗ್ರಾಮದ ಪಂಪಾಪತಿ, ಅಮಾಜಪ್ಪ ಹಚ್ಚೊಳ್ಳಿ ಮೊ.ಸಂ-9901467655 ಹಾಗೂ ನವಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ ಗಾಂಜಿ ಮೊ.ಸಂ-8147397531 ಇವರನ್ನು ಸಂಪಕರ್ಿಸಬಹುದು.