ಲೋಕದರ್ಶನ ವರದಿ
ಕೊಪ್ಪಳ 03: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಸ್ಪೂತರ್ಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಮೈನಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್. 29ರ ಗುರುವಾರ ಸಂಜೆ ಹಮ್ಮಿಕೊಳ್ಳಲಾದ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹಿರೇಮ್ಯಾಗೇರಿ ಗ್ರಾ.ಪಂ ಅಧ್ಯಕ್ಷೆ ಸುಧಾ ರಾಜಶೇಖರ ಸುಬೇದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಹನುಮಂತಪ್ಪ ಪೂಚಾರ, ತಾ.ಪಂ. ಸದಸ್ಯೆ ಶಾರದ ಎಸ್. ರಾಮಶೆಟ್ಟಿ, ಗ್ರಾ.ಪಂ. ಸದಸ್ಯ ವಿರೇಶ ಗುರಿಕಾರ ಮುಖ್ಯ ಅತಿಗಳಾಗಿ ಪಾಲ್ಗೊಂಡಿದ್ದು, ವೇದಮೂತರ್ಿ ಬೆಟದಯ್ಯ ಶಾಸ್ತ್ರಿ ಹಿರೇಮಠ ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ದ್ಯಾಮಣ್ಣ ಬಡಿಗೇರ ಹಾಳಕೇರಿ ರವರು ತಬಲಾ ಸಾತ ನೀಡಿದರು. ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಸದ್ಭಕ್ತರು, ಗ್ರಾಮದ ಹಿರಿಯ ನಾಗರೀಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದು ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನಮನ ರಂಜಿಸಿತು.