ಸತತ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಡಾ. ಮಂಜುನಾಥ್

ಲೋಕದರ್ಶನ ವರದಿ

ಬೆಳಗಾವಿ 17:  ವಸ್ತು ವಿಷಯದ ಆಳವಾದ ಅಧ್ಯಯನ, ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಅಬಕಾರಿ ಜಂಟಿ ಆಯುಕ್ತ ಡಾ. ವೈ ಮಂಜುನಾಥ ಅಭಿಮತ ವ್ಯಕ್ತ ಪಡಿಸಿದರು. ಅವರು ಇತ್ತಿಚೆಗೆ ನಗರದ ಕನರ್ಾಟಕ ಕೋಚಿಂಗ್ ಸೆಂಟರನಲ್ಲಿ ಆಯೋಜಿಸಿದ ಸ್ಪಧರ್ಾತ್ಮಕ ಪರೀಕ್ಷೆಗಳ ಮಾರ್ಗದಶರ್ಿ ಕೈಪಿಡಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸ್ಫಧರ್ಾಳುಗಳು ತಮಗೆ ಬೇಕಾದ ವಿಚಾರಗಳನ್ನು ಆಸಕ್ತಿ ಇರುವ ಸಂಗತಿಗಳನ್ನು ಪುಸ್ತಕಗಳಿಂದ ಪಡೆಯಬಹುದು. ಪುಸ್ತಕಗಳು ಜ್ಞಾನದ ಕಣಜವಿದ್ದಂತೆ ಎಂದು ಸ್ಫಧರ್ಾತ್ಮಕ ಪರೀಕ್ಷೆಯ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಕೋಚಿಂಗ್ ಸೆಂಟರನ ಅಧ್ಯಕ್ಷ ಶ್ರೀಶೈಲ ತಲ್ಲೂರ ಮಾತನಾಡಿ ಮನುಷ್ಯನ ಪ್ರಯತ್ನದಿಂದ ಯಶಸ್ಸು ಗಳಿಸಬಹುದೇ ಹೊರತು ಅದೃಷ್ಠದಿಂದಲ್ಲ ಎಂದರು ಅಲ್ಲದೆ ಅವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕನರ್ಾಟಕ ಕೋಚಿಂಗ್ ಸೆಂಟರ ನಡೆದು ಬಂದ ದಾರಿ ಕುರಿತು ವಿವರಿಸಿದರು. ವೇದಿಕೆಯ ಮೇಲೆ ಕನರ್ಾಟಕ ಕೋಚಿಂಗ್ ಸೆಂಟರನ ಪದಾಧಿಕಾರಿ ಶಿವಾನಂದ ಕಡಕೋಳ ಉಪಸ್ಥಿತರಿದ್ದರು. ಉಪನ್ಯಾಸಕ ವಿನಯ ಲಾಸೆ ಸ್ವಾಗತಿಸಿದರು, ಅಶ್ವಿನಿ ಮರಡಿ ವಂದಿಸಿದರು.