ತೇಲಂಗಾರಿನಲ್ಲಿ ಯಶಸ್ವೀಯಾದ ಕೃಷ್ಣಾಜರ್ುನ ತಾಳಮದ್ದಳೆ


ತೇಲಂಗಾರಿ26: ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ತೇಲಂಗಾರ ಮತ್ತು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬಳಗ ತೇಲಂಗಾರ ಇವರ ಸಂಯುಕ್ತಾಶ್ರಯದಲ್ಲಿ ತೇಲಂಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಾರದಲ್ಲಿ ಶ್ರೀ ಕೃಷ್ಣಾಜರ್ುನ ತಾಳಮದ್ದಲೆ ನಡೆಯಿತು. 

ತಾಳಮದ್ದಲೆ ಕಾರ್ಯಕ್ರಮವನ್ನು ವಿದ್ವಾನ ಕೃಷ್ಣ ಭಟ್ಟ ಗಿಡಗಾರಿ ಉದ್ಘಾಟನೆ ಮಾಡಿ  ತಾಳಮದ್ದಲೆಯ  ಶ್ರವಣದಿಂದ ವೇದ ಪಾರಾಯಣ ಭಾಗವತ ಪುರಾಣಗಳ ಶ್ರವಣ ಮಾಡಿದ ಫಲ ದೊರಕುವದೆಂದು  ನುಡಿದರು. ಅತಿಥಿಗಳಾದ ಶ್ರೀ ಜಿ.ಆರ್.ಭಾಗ್ವತ, ಶ್ರೀ ಸಂತೋಷ ಕೊಳಗೇರಿ, ಶ್ರೀಮತಿ ಲಕ್ಷೀ ಅನಂತ ಗಾಂವ್ಕರ ಶ್ರೀ ನಾಗೇಂದ್ರ ಭಟ್ಟ ಶ್ರೀ ನಾರಾಯಣ ನಾಯಕ, ಪ್ರಕಾಶ ನಾಯಕ, ಶ್ರೀ ಆರ್.ಆರ್.ಭಟ್ಟ  ತಾಳಮದ್ದಲೆಯ ಮಹತ್ವದ ಕುರಿತು ಮಾತನಾಡಿದರು .ಅಧ್ಯಕ್ಷತೆ ವಹಿಸಿದ ಶ್ರೀ ಗಜಾನನ ಭಟ್ಟ ಈ ದಿನ ಗಳಲ್ಲಿ ಟಿವಿ ಮೋಬೈಲ್  ಮಾದ್ಯಮ ಆಕರ್ಷಣೆಗಳಿಂದಾಗಿ ತಾಳಮದ್ದಲೆ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ.

ಈ ದುಭಾರಿ ಕಾಲದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕಲಾವಿದರನ್ನು ಕರೆಯಿಸಿ  ಸರಕಾರದ ಆಥರ್ಿಕ ನೆರವು ಪಡೆಯದೇ ಸಮಾನ ಮನಸ್ಕರು ಸೇರಿ ತಾಳಮದ್ದಲೆ ಯಕ್ಷಗಾನ ಏರ್ಪಡಿಸಿರುವ ಸಂಘಟನೆಯ  ಕಾರ್ಯ ನಿಜಕ್ಕೂ  ಶ್ಲಾಘನೀಯ ಎಂದರು.ನಂತರ ನಡೆದ ಕೃಷ್ಣಾಜರ್ುನ ಪ್ರಸಂಗದ ಹಿಮ್ಮೇಳದಲ್ಲಿ ಶ್ರೀ ಅನಂತ ಹೆಗಡೆ ದಂತಳಿಗೆಯವರ  ಸುಶ್ರಾವ್ಯ ಕಂಠದ ಗಾಯನಕ್ಕೆ  ಶ್ರೀ ನರಸಿಂಹ ಹಂಡ್ರಮನೆ ಮದ್ದಲೆಯ ಸಾಥ್ ನೀಡಿದರು. 

ಮುಮ್ಮೇಳದಲ್ಲಿ  ಕೃಷ್ಣನಾಗಿ ಶ್ರೀ ವಾಸುದೇವ ರಂಗಾ ಭಟ್ಟ  ಅಜರ್ುನನಾಗಿ ಶ್ರೀ ಸುಣ್ಣಂಬಳ  ವಿಶ್ವೇಶ್ವರ ಭಟ್ಟ ಮತ್ತು  ಸುಭದ್ರೆ ಪಾತ್ರದಲ್ಲಿ  ಶ್ರೀ ಗಣಪತಿ ಭಟ್ಟ ಸಂಕದಗುಂಡಿರವರ ಮಾತಿನ ಮೋಡಿಗೆ ಪ್ರೇಕ್ಷರ ಕರತಾಡನವೆ ಸಾಕ್ಷಿಯಾಗಿತ್ತು. ನಾರದನ ಪಾತ್ರವನ್ನು ಡಾ.ದತ್ತಾತ್ರಯ  ಗಾಂವ್ಕರ ಸಮರ್ಥವಾಗಿ ನಿರ್ವಹಿಸಿದರು . ಉದಯೋನ್ಮುಖ ಕಲಾವಿದ ಶ್ರೀ ಪ್ರಸನ್ನ ಭಟ್ಟ ಮಾಗೋಡರವರು  ಅಭಿಮನ್ಯು ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದರು.

ಕಲಾವಿದರಿಗೆ ಸಂಘಟನೆಯ ಮುಖ್ಯಸ್ಥರಾದ ಶ್ರೀ ಎಮ್ .ಆರ್. ಭಟ್ಟ ಹಾಗೂ ಶ್ರೀ ಮಂಜುನಾಥ ಗಾಂವ್ಕರ ಕಲ್ಮನೆಯವರು ಗೌರವಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ವಿ.ಎಸ್.ಭಟ್ಟ ಮಾಡಿದರು , ಶ್ರೀ ವಿ.ಕೆ.ಗಾಂವ್ಕರ ಸ್ವಾಗತ ಕೋರಿದರೆ ಶ್ರೀ ನಾಗರಾಜ ಹೆಗಡೆ ವಂದಿಸಿದರು.ಕಾರ್ಯಕ್ರಮಕ್ಕೆ ತನು ಮನ ಧನ ಸಹಾಯ ನೀಡಿದ ಸರ್ವರಿಗೂ ಸಂಘಟಕರು ಧನ್ಯವಾದಗಳನ್ನು ಸಮಪರ್ಿಸಿದ್ದಾರೆ.