ಆತ್ಮ ವಿಶ್ವಾಸದಿಂದ ಅಧ್ಯಯನ ಮಾಡಿ- ಡಿ. ಎಸ್‌. ರಾಜಪುರೋಹಿತ

ಆತ್ಮ ವಿಶ್ವಾಸದಿಂದ ಅಧ್ಯಯನ ಮಾಡಿ- ಡಿ. ಎಸ್‌. ರಾಜಪುರೋಹಿತ Study with confidence- D. S. Rajapurohita

        ಧಾರವಾಡ 09: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನದ ಗುರಿಯನ್ನು ಸಾಧಿಸಲು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿಬೇಕೆಂದು ಕರ್ನಾಡಕ ಎಜ್ಯುಕೆಶನ್ ಬೋರ್ಡಿನ ಕಾರ್ಯದರ್ಶಿ ದತ್ತಾತ್ರೇಯ ಎಸ್‌. ರಾಜಪುರೋಹಿತ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಮಾಳಮಡ್ಡಿಯ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಾಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ  ಚಟುವಟಿಕೆಗಳ ಮುಕ್ತಾಯ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲನ್ನು ಅಧ್ಯಯನದ ಸಲುವಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬಳಸಿಕೊಂಡು ಜೀವನದ ಗುರಿಯನ್ನು ಸಾಧಿಸಬೇಕು. ಗುರು, ಪಾಲಕರು ಹಾಗೂ ಹಿರಿಯರ ಮೇಲೆ ವಿಶ್ವಾಸ ಇಟ್ಟು ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಸಂಸ್ಥೆಯ ಖಜಾಂಚಿ ಎನ್‌.ಎಸ್‌. ಕುಲಕರ್ಣಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ವಿಫಲವಾದ 

         ಉದ್ಯೋಗ ಅವಕಾಶಗಳಿವೆ. ವಿದ್ಯಾರ್ಥಿನಿಯರು ವಿಶ್ವದ ಎಲ್ಲಾ ಅರ್ಥಿಕ,ಕೈಗಾರಿಕೆ,ರಾಜಕೀಯ,ಆಡಳಿತ ಮಿಲಿಟರಿ, ವಿಜ್ಞಾನ,ವೈದ್ಯಕೀಯ,ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಿಂಹಪಾಲನ್ನು ಹೊಂದಿದ್ದಾರೆ,ವಿದ್ಯಾರ್ಥಿನಿಯರು ಸಾಧನೆಗೈದ ಮಹಿಳಾ ಸಾಧಕೀಯರ ಆದರ್ಶಗಳನ್ನು ಪಾಲಿಸಬೇಕು.ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮ ಅಧ್ಯಯನ ಮಾಡದೆ ಸಾಮಾನ್ಯ ಜ್ಞಾನ, ಜಾಗತಿಕ,ರಾಷ್ಟ್ರೀಯ ಹಾಗೂ ರಾಜ್ಯದ ಪ್ರಚಲಿತ ವಿಷಯಗಳನ್ನು ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ನೀಡಿದರು. ವಿವಿಧ ಸಾಂಸ್ಕ್ರುತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ  ವೀಜೆತರಾದ 40 ವಿದ್ಯಾರ್ಥಿನಿಯರಿಗೆ ಪ್ರಶಸ್ತಿಗಳನ್ನು ನೀಡಲಾಯಿತು .

        ಕೆ.ಇ. ಬೋರ್ಡಿನ ಕಾರ್ಯಾಧ್ಯಕ್ಷರಾದ ಶ್ರೀಕಾಂತ. ಟಿ.ಪಾಟೀಲ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಚಾರ್ಯರಾದ ಡಾ.ಸುನಿತಾ ಕಡಪಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಸಿ.ಕುಲಕರ್ಣಿ ಹಾಗೂ ಸಂತೋಷ ವಕ್ಕುಂದ ಕಾರ್ಯಕ್ರಮ ನಿರೂಪಿಸಿದರು,ಲಕ್ಷ್ಮೀ  ಮುಗಳಿ ವಂದಿಸಿದರು. ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಎನ್‌.ಎಸ್‌.ಗೋವಿಂದರೆಡ್ಡಿ ,ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಕರಿಗಾರ, ಉಪಾಧ್ಯಕ್ಷ ಅರುಣ ಗಂಜಿಗಟ್ಟಿ , ವಿದ್ಯಾರ್ಥಿ ಪ್ರತಿನಿಧಿ ಆಶ್ಲೇಷ ಮಮದಾಪುರ, ಗುರುರಾಜ ಜಮಖಂಡಿ, ಎಸ್‌.ಎಲ್‌.ಶೇಖರಗೋಳ, ಡಾ.ಸುಜಾತಾ ನಲವಡಿ, ಹನುಮಂತಪ್ಪ ಕಳಸಪ್ಪನವರ, ಆರತಿ ನಾಯಕ, ನಾಗರಾಜ ಇಟಗಿ, ಸಮೀನಾ ಶೇಖ, ಅಂಕಿತಾ ಕಲಾಲ, ಚಿತ್ರಾ ಮುರಾಳ, ಭುವನಾ ಪೂಜಾರ, ಸುಪ್ರೀಯಾ ಶಿಂಧೆ, ಬಸಲಿಂಗಯ್ಯಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.