ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಾಲೂಕಿಗೆ ಕೀರ್ತಿ ತರಬೇಕು : ಟಿ. ವೈ ದಾಸನಕೊಪ್ಪ

Students should study well and bring glory to the taluk: T. Y Dasanakoppa

ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಾಲೂಕಿಗೆ ಕೀರ್ತಿ ತರಬೇಕು : ಟಿ. ವೈ ದಾಸನಕೊಪ್ಪ   

 ಮುಂಡಗೋಡ 07 : ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ವತಿಯಿಂದ ಮಂಡಗೋಡ ತಾಲೂಕಿನ ವಿವಿಧ ವಸತಿ ನಿಲಯಗಳಲ್ಲಿ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಪೂರ್ವ ತಯಾರಿ ಕುರಿತು ವಿಷಯ ಪರಿಣಿತರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.   ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಟಿ. ವೈ ದಾಸನಕೊಪ್ಪ  ಅವರು ಉದ್ಘಾಟನೆ ಮಾಡಿ ಮಾತನಾಡುತ್ತಾ  ಪರೀಕ್ಷೆಯ ಸಮಯ ಮಕ್ಕಳು ಚೆನ್ನಾಗಿ ಓದಿ ತಾಲೂಕಿಗೆ ಒಳ್ಳೆಯ ಕೀರ್ತಿಯನ್ನು ಮತ್ತು ಪಾಲಕರಿಗೆ ಹಾಗೂ ನಿಲಯ ಪಾಲಕರಿಗೆ ಮತ್ತು ನಿಮ್ಮ ತಂದೆ ತಾಯಂದಿರಿಗೆ  ಗೌರವ ಹೆಚ್ಚಿಸಲು ತಾವೆಲ್ಲರೂ ಆತ್ಮದ ಅರಿವನ್ನು ಅರಿತುಕೊಂಡು ಎಲ್ಲ ವಿದ್ಯಾರ್ಥಿಗಳು  ಅಭ್ಯಾಸ ಮಾಡಬೇಕು , ಸರ್ಕಾರ  ವಸತಿ ಸೌಲಭ್ಯವನ್ನು ನೀಡಿದ್ದು. ಅದರ ಸದುಪಯೋಗಪಡಿಸಿಕೊಳ್ಳಬೇಕು,  ನಿಮ್ಮ ಪಲಿತಾಂಶದ ಗುರಿಯನ್ನು ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವಂತೆ ತಾವೆಲ್ಲರೂ ಓದಬೇಕು. ಸರ್ಕಾರ ಹಲವಾರು ಯೋಜನೆಗಳನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು.ಅದರ ಉಪಯೋಗವನ್ನು ವಿದ್ಯಾರ್ಥಿಗಳು ತಮ್ಮ ಆತ್ಮದ ಅರಿವನ್ನು ಅರಿತುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು  ಉತ್ತಮವಾಗಿ ಅಭ್ಯಾಸ ಮಾಡಿ ಪಾಸ್ ಮಾಡಬೇಕು ಎಂದರು.   ಮಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶ್ರೀಮತಿ ಸುಮಾ ಜಿ ಮಾತನಾಡುತ್ತಾ  ಇಂದು ಕನ್ನಡ ಸಾಹಿತ್ಯ ಪರಿಷತ್ ಮುಂಡಗೋಡ ಘಟಕದವರು ವಿಶೇಷ ಕಾರ್ಯಕ್ರಮವನ್ನು ನಮ್ಮ ಮಕ್ಕಳಿಗಾಗಿ ಹಮ್ಮಿಕೊಂಡಿದ್ದು ಅವರಿಗೆ ಅಭಿನಂದಗಳನ್ನು ನಮ್ಮ ಇಲಾಖೆ ಪರವಾಗಿ ಸಲ್ಲಿಸುತ್ತದೆ. ಎಲ್ಲ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಬರುವಲ್ಲಿ ತಾವುಗಳು ಶ್ರಮಿಸಬೇಕು. ನಾವು ಕಲಿಯುವ ಸಂದರ್ಭದಲ್ಲಿ ಇಷ್ಟೆಲ್ಲ ಸೌಲಭ್ಯಗಳು ಇರಲಿಲ್ಲ ಆದರೆ ಇಂದು ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದು ಅದರ ಸದುಪಯೋಗವಾಗಲಿ ಅಂದಾಗ ಮಾತ್ರ ಸಾರ್ಥಕ ಬದುಕು ನಡೆಸಲಿಕ್ಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ವಯಕ್ತಿಕ ವೇಳಾಪಟ್ಟಿಯನ್ನು ಬಳಸಿಕೊಂಡು ಹೆಚ್ಚು ಅಂಕಗಳನ್ನು ಮತ್ತು ಹೇಗೆ ಉತ್ತೀರ್ಣರಾವುದಂಬದನ್ನ ಅರಿತುಕೊಂಡು ಅಭ್ಯಾಸ ಮಾಡಬೇಕು. ಇಂತಹ ಸುವರ್ಣ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ ಅದರ ಉಪಯೋಗ ಮಾಡಿಕೊಳ್ಳಿ ಚೆನ್ನಾಗಿ ಎಕ್ಸಾಮ್ ಬರಿ ನಿಮಗೆ ಶುಭವಾಗಲಿ ಎಂದರು.    ಮುಖ್ಯ ಅತಿಥಿಗಳಾದ ಶ್ರೀ ಆರ್ ಜೆ ಮಿರಾನಾಯಕ  ಅವರು ಮಾತನಾಡುತ್ತಾ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿಮ್ಮ ಪಲಿತಾಂಶ ಹೆಚ್ಚು ವೃದ್ಧಿಸಲು ಇಂತಹ ಕಾರ್ಯಕ್ರಮಗಳು ನಿಮಗೆ ಸಹಕಾರ ನೀಡುತ್ತವೆ. ಈ ನಿಟ್ಟಿನಲ್ಲಿ ತಾವೆಲ್ಲ ಉತ್ತಮ್ ಫಲಿತಾಂಶ ಪಡೆಯುವ ನೀರೀಕ್ಷೆಯನ್ನು ಹಸಿಗೊಳಿಸದೆ, ಹೆಚ್ಚು ಅಂಕಗಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇಂದು ಈ ವಿಶೇಷ ಕಾರ್ಯಕ್ರಮನ ಹಮ್ಮಿಕೊಂಡಿದ್ದು ಶ್ಲಾಘನೀಯ  ಮತ್ತು ಅವರು ಮುಖ್ಯ ಶಿಕ್ಷಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಕೆಲವು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹೇಗೆ ನಾವು ಹೆಚ್ಚು ಅಂಕಗಳನ್ನು ಪಡೆಯುವುದು ಪಡೆಯಬೇಕು* ಎಂಬುದನ್ನು ತಿಳಿಸಿದರು.    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರನ್ನು ಶ್ರೀ ವಸಂತ ಕೋಣಸಾಲಿ  ಅವರು ಮಾತನಾಡುತ್ತಾ ಇಂದು ವಸತಿ ನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 2024 25 ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕವನ್ನು ಗಳಿಸುವ ಮೂಲಕ  ಜೀವನ ರೂಪಿಸಿಕೊಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುತ್ತಾ ಬಂದಿದ್ದೇವೆ ಹಾಗೆಯೇ ಈ ವರ್ಷ ಕೂಡ ನೂರಕ್ಕೆ ನೂರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ನಗದು ಬಹುಮಾನ ನೀಡಲಾಗುವುದು ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶಿಕ್ಷಕರ ಪಾಠಗಳನ್ನು ಆಸಕ್ತಿ ಕೇಳಿ ಬಂದಂತ ನಾಲ್ಕು ವಿಷಯ ಪರಿಣಿತರು ಹೇಳುವಂತಹ ಓಷಧವನ್ನು ನಿಮ್ಮ ಪರೀಕ್ಷೆಯಲ್ಲಿ ಅಳವಡಿಸಿಕೊಂಡು ಉತ್ತಮ ಅಂಕವನ್ನು ಗಳಿಸುವಲ್ಲಿ ತಾವು ಯಶಸ್ವಿಯಾಗಲಿ ಎಂದು ಈ ಮೂಲಕ ನಮ್ಮ ಸಾಹಿತ್ಯ ಪರಿಷತ್ ವತಿಯಿಂದ ನಿಮಗೆ ಶುಭವನ್ನು ಕೋರುತ್ತಿದ್ದೇವೆ.    ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್ ಡಿ ಮುಡೆಣ್ಣವರ ಪ್ರಾಸ್ತಾವಿಕ ಮಾತನಾಡುತ್ತಾ  ಇಂದು ಮುಂಡಗೋಡ್  ಪಟ್ಟಣದಲ್ಲಿ ಇರುವ ವಸತಿ ನಿಲಯದಲ್ಲಿ ಎಸ್ ಎಸ್ ಎಲ್ ಸಿ ಓದುವ ವಿದ್ಯಾರ್ಥಿಗಳಿಗೆ ವಿಭಿನ್ನವಾದ ಕಾರ್ಯಕ್ರಮವಾದ ಸಾಹಿತ್ಯ ಪರಿಷತ್ತಿನ ನಡೆ ವಿದ್ಯಾರ್ಥಿಗಳ ಫಲಿತಾಂಶದ ಕಡೆ ಎಂಬುವ ವಿಭಿನ್ನ ಮತ್ತು ವಿಶೇಷ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದು. ಎಲ್ಲಾ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ನಾವು ಏರಿ​‍್ಡಸಿದ್ದು, ಎಲ್ಲ ವಿದ್ಯಾರ್ಥಿಗಳು ವಿಷಯ ಪರಿಣಿತರ ವಿಷಯಗಳನ್ನು ಕರಗತ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಈ ಕಾರ್ಯಕ್ರಮದ ಯಶಸ್ಸನ್ನು ಎತ್ತಿ ಹಿಡಿಯಬೇಕೆಂದು ಹೇಳಿದರು.   ಈ ಕಾರ್ಯಕ್ರಮದಲ್ಲಿ ಡಾ. ರಮೇಶ. ಅಂಬಿಗೇರಬಿ ಆರ್ ಸಿ ಸಮನ್ವಯಾದಿಕಾರಿಗಳು ಮುಂಡಗೋಡ,ರೋಟರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾದ ಶ್ರೀ ಜಿ ಎನ್ ಕುಲಕರ್ಣಿ, ಕುಮಾರಿ ವಾಣಿಶ್ರೀ ನಾಗಮ್ಮನವರ್, ಶ್ರೀ ಗಜಾನನ ಶೆಟ್ಟಿ, ಇಂದುರ್ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀ ಕೃಷ್ಣ ಗುಜಮಾಗಡಿ, ನಿಲಯ ಪಾಲಕರಾದ ಶ್ರೀ ಕೃಷ್ಣ ನಾಯಕ, ಶ್ರೀ ಎಸ್ ಬಿ ಹೂಗಾರ್, ಶ್ರೀ ಸಂಗಪ್ಪ ಕೋಳೂರು, ಶ್ರೀ ಮಂಜುನಾಥ ಕಲಾಲ, ಶ್ರೀ ರಮೇಶ್ ಪವಾರ, ಬಿಸಿಎಂ ವಸತಿ ನಿಲಯದ ನಿಲಯ ಪಾಲಕರಾದ ಕರೆಪ್ಪ ಹರಿಜನ, ವಸತಿ ನಿಲಯ ವಿದ್ಯಾರ್ಥಿಗಳು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಮುಂಡಗೋಡ್ ತಾಲೂಕು ನೂತನವಾಗಿ ಆಗಮಿಸಿದ ಶ್ರೀಮತಿ ಸುಮಾ ಜಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಡಗೋಡರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮುಂಡಗೋಡ ಘಟಕದಿಂದ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್ ಡಿ. ಮುಡೆಣ್ಣವರ ಸ್ವಾಗತಿಸಿದರು.  ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ  ಶೇಟ್  ನಿರೂಪಣೆ ಮಾಡಿದರು. ಶ್ರೀ.ರಮೇಶ ಪವಾರ ವಂದಿಸಿದರು.