ಹಾವೇರಿ 18: ವಿದ್ಯಾಥರ್ಿಗಳ ಸವರ್ಾಂಗೀಣ ವ್ಯಕ್ತಿತ್ವ ವಿಕಸನವಾಗಬೇಕಾದರೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಪರಿಪೂರ್ಣ ವಿದ್ಯಾಥರ್ಿಯಾಗಲು ಸಾಧ್ಯ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಗಾಂಧೀಪುರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸಾಂಸ್ಕ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ರೆಡ್ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗಗಳ ಉದ್ಘಾಟನೆ ನೆರವೇರಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳು ಅಧಿಕ ಪ್ರಮಾಣದಲ್ಲಿ ಅಧ್ಯಯನ ಮಾಡುತ್ತಿದ್ದು, ಸಕರ್ಾರದಿಂದ ನೀಡಲಾಗುತ್ತಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಅತ್ತ್ಯುತ್ತಮ ವಿದ್ಯಾಥರ್ಿಗಳಾಗಿ ಹೊರಹೊಮ್ಮಬೇಕು. ಬಹುತೇಕ ವಿದ್ಯಾಥರ್ಿಗಳು ಬಡತನದ ಮಧ್ಯ ಶಿಕ್ಷಣ ಪಡೆಯುತ್ತಿದ್ದು, ಅಂತಹ ವಿದ್ಯಾಥರ್ಿಗಳು ಆತಂಕಗೊಳಗಾಗದೇ ಆತ್ಮಸ್ಥೈರ್ಯದಿಂದ ಶಿಕ್ಷಣ ಪಡೆಯುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ಯಾಡಗಿ ಬಿ.ಇ.ಎಸ್.ಎಮ್. ಕಾಲೇಜ್ ಸಹ ಪ್ರಾಧ್ಯಾಪಕ ಪ್ರೊ. ಎಸ್.ಡಿ. ಬಾಲಾಜಿರಾವ್ ಮಾತನಾಡಿ ವಿದ್ಯಾಥರ್ಿಗಳು ಕೇವಲ ಪದವಿ ಪ್ರಮಾಣಕ್ಕಾಗಿ ಕಲಿಯದೇ ತಮ್ಮ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಕಲಿಯಬೇಕು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ನೀವು ಸ್ಪಧರ್ಿಸಬೇಕಾದರೆ ನಿರಂತರವಾದ ಅಧ್ಯಯನ ಹಾಗೂ ಪರಿಶ್ರಮದ ಅಗತ್ಯ ಇದೆ. ಕೇವಲ ತರಗತಿಗಳಿಗೆ ಸೀಮಿತವಾಗದೆ ಪಠ್ಯೇತರ ಚಟುವತಿಕೆಗಳಲ್ಲಿ ಭಾಗವಹಿಸಬೇಕು. ಕಾಲಹರಣ ಮಾಡಿ ವಿದ್ಯಾಥರ್ಿ ಬದುಕನ್ನು ಹಾಳುಮಾಡಿಕೊಳ್ಳುವುದಕ್ಕಿಂತ ದಿನದ ಪ್ರತಿ ನಿಮಿಷವನ್ನು ಅಮೂಲ್ಯ ಸಮಯವೆಂದು ಭಾವಿಸಿ ಅಧ್ಯಯನದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಟಿ. ಲಮಾಣಿ ವಹಿಸಿದ್ದರು. ಡಾ. ಎಂ.ಎಂ. ಪಾಟೀಲ ಉಪಸ್ಥಿತರಿದ್ದರು. ಮಂದಾಕಿನಿ ಎಂ. ಪಾಟೀಲ ಸ್ವಾಗತಿಸಿದರು ಹಾಗೂ ಡಾ. ರಮೇಶ ತೆವರಿ ಕಾರ್ಯಕ್ರಮ ನಿರೂಪಿಸಿದರು.