ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯ ಬೇಡ: ಸಾಧನೆ ಮಾಡಿಯೇ ಮಾಡುತ್ತೇನೆಂಬ ಆತ್ಮವಿಶ್ವಾಸ ಬೇಕು

Students should not be afraid of exams: they should be confident that they will succeed

ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯ ಬೇಡ: ಸಾಧನೆ ಮಾಡಿಯೇ ಮಾಡುತ್ತೇನೆಂಬ ಆತ್ಮವಿಶ್ವಾಸ ಬೇಕು 

ಧಾರವಾಡ 08: ಏಕಾಗ್ರತೆಯಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಶ್ರದ್ಧೆ ಬದ್ಧತೆಯಿಂದ ಆತ್ಮ ಸಾಕ್ಷಿಗೆ ಅನುಗುಣವಾಗಿ ಓದಬೇಕು. ಕಾಟಾಚಾರದ ಓದು ನಿರರ್ಥಕ ಎಂದು ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಇನಾಮ ಹೊಂಗಲ್‌ದ ಸಿದ್ಧಲಿಂಗೇಶ್ವರ ಪ್ರೌಢಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.  ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ವಿನಾಕಾರಣ ಭಯಪಡಬಾರದು. ನಾನು ಸಾಧನೆ ಮಾಡಿಯೇ ಮಾಡುತ್ತೇನೆಂಬ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳಲ್ಲಿರುವ ಶಕ್ತಿಯ ಬಗ್ಗೆ ನಂಬಿಕೆ ಬಹಳ ಮುಖ್ಯ. ತಂದೆ ತಾಯಿಗಳು ಮಕ್ಕಳಿಗಾಗಿ ಏನೆಲ್ಲ ತ್ಯಾಗ ಮಾಡುತ್ತಿದ್ದು ಅವರ ಶ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ಹಾಳು ಹರಟೆ ಬಿಟ್ಟು ಸಮಯದ ಸದ್ಬಳಕೆ ಮಾಡಿಕೊಂಡು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣಒಡ್ಡೀನಉಪನ್ಯಾಸ ನೀಡುತ್ತಾ, ಪರೀಕ್ಷೆಗಾಗಿಓದುವುದು ಎಷ್ಟು ಮುಖ್ಯವೋ ಬರವಣಿಗೆಯೂ ಅಷ್ಟೇ ಮುಖ್ಯ.ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ತಮ್ಮದೇಆದಯೋಜನೆ ಹಾಕಿಕೊಳ್ಳಬೇಕು.ಸುಮ್ಮನೆಓದುವುದರ ಬದಲಾಗಿಅರ್ಥ ಮಾಡಿಕೊಂಡುಓದಬೇಕು.ನಿರಂತರಅಧ್ಯಯನಆರೋಗ್ಯ ಸಮಸ್ಯೆಉಂಟುಮಾಡುವುದು.ಅಲ್ಪ ವಿಶ್ರಾಂತಿಯು ಮುಖ್ಯ. ಪಠ್ಯಪುಸ್ತಕ ಹೊರತುಪಡಿಸಿ ಇನ್ಯಾವುದೊಗೈಡ್, ಡೈಜೆಸ್ಟ್‌ಓದಬಾರದು.ಓದಿದ್ದನ್ನು ಮುಚ್ಚಿಟ್ಟು ಬರೆದುತೆಗೆಯಬೇಕು.ಕಂಠ ಪಾಠ ಮಾಡುವ ಬದಲುಅರ್ಥ ಮಾಡಿಕೊಂಡುಓದಬೇಕು.ಗುಂಪು ಚರ್ಚೆ.ವಿಚಾರ ವಿನಿಮಯದ ಮೂಲಕ ಅಭ್ಯಾಸ ಮಾಡಬೇಕು.ಕರಿದ ಪದಾರ್ಥ ಸೇವನೆ ಸರಿಯಲ್ಲ. ಬದಲಾಗಿ ಸಾತ್ವಿಕಆಹಾರ ಸೇವಿಸಬೇಕು ಎಂದರು. ಪ್ರೌಢ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷಆಯ್‌.ಎಸ್‌. ಹಿರೇಮಠಅಧ್ಯಕ್ಷತೆ ವಹಿಸಿದ್ದರು.ಆರ್‌.ಎಲ್‌. ಸರದೇಸಾಯಿಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಮುಖ್ಯಾಧ್ಯಾಪಕರಾದಎಚ್‌.ಆರ್ ನಾಯ್ಕರ ಸ್ವಾಗತಿಸಿದರು.ಎಸ್‌.ಆರ್‌.ದೇಸಾಯಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್‌.ಆರ್‌.ಆಶಿ ನಿರೂಪಿಸಿದರು.ಎಸ್‌.ಎಂ. ಹಡಪದ ವಂದಿಸಿದರು. ಮಹಾದೇವಪ್ಪಕುಂಬಾರ, ಪಿ.ಆರ್‌.ಅಳಗವಾಡಿ, ಬಸವರಾಜ ಮೇಟಿ, ಸಂಗಪ್ಪ ಲಕ್ಕಣ್ಣನವರ, ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳಿದ್ದರು.