ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು : ಪ್ರಕಾಶ ಮಂಗಳೂರ

Students should have a hunger for knowledge: Prakash Mangalore

 ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು : ಪ್ರಕಾಶ ಮಂಗಳೂರ 

ಗದಗ  : ಮಕ್ಕಳ ಭವಿಷ್ಯಕ್ಕಾಗಿ ತಂದೆ-ತಾಯಿಗಳು ಪಡುತ್ತಿರುವ ಕಷ್ಟಗಳನ್ನು ಅರ್ಥ ಮಾಡಿಕೊಂಡು,  ಕಷ್ಟಪಟ್ಟು ಜ್ಞಾನ ಸಂಪಾದಿಸಿ ತಂದೆ-ತಾಯಿಗಳ ಹೆಸರನ್ನು ಹಾಗೂ ಕಲಿತ ಶಾಲೆಗೆ ಕೀರ್ತೀಯನ್ನು ತರಬೇಕು ಎಂದು ಬಿಆರ್‌ಪಿ ಪ್ರಕಾಶ ಮಂಗಳೂರ ಅವರು  ಮಕ್ಕಳಿಗೆ ಕರೆ ನೀಡಿದರು. 

ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ ಹಮ್ಮಿಕೊಂಡ 5 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಹಾಗೂ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳು ಈಗಿನಿಂದಲೆ ಕಷ್ಟಪಟ್ಟು ಓದಿದರೆ ಮುಂದೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಕಿಯರು ಮಕ್ಕಳ ಭವಿಷ್ಯಕ್ಕಾಗಿ ಶ್ರಮ ಪಡುತ್ತಾರೆ. ಅವರ ಭರವಸೆಗೆ ಚ್ಯುತಿ ಬಾರದಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಹೇಳಿದರು.  

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಸಿಆರ್‌ಪಿ ಕೆ.ಎ.ಜಲಗೇರಿ ಅವರು ಮಾತನಾಡಿ, ಇಂದಿನ ಮಕ್ಕಳು ಭವಿಷ್ಯದಲ್ಲಿ  ದೇಶದ ಆಸ್ತಿಯಾಗಿರುವದರಿಂದ  ವಿದ್ಯಾರ್ಥಿಗಳಲ್ಲಿ  ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ಮತ್ತು ಸಂಸ್ಕಾರದ ಕುರಿತು ಭದ್ರ ಬುನಾಧಿ ಹಾಕಬೇಕು. ಒಳ್ಳೆಯ ಶಿಕ್ಷಣ ಕಲಿತ ಮಕ್ಕಳು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.  

 ಈ ಸಂದರ್ಭದಲ್ಲಿ   ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕರಾದ ಮೋಹನ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಲೋಕೇಶ ಮಲ್ಲಿಗವಾಡ, ಸವಿತಾ ಇಮರಾಪೂರ, ಕವಿತಾ ಇಮರಾಪೂರ, ಶೋಭಾ ಕುರಿಯವರ, ಮುಖ್ಯೋಪಾದ್ಯಾಯನಿ ಎಚ್‌.ಎಂ.ನದಾಫ್, ಸಹಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ವಂದನಾ ಕಲ್ಮನಿ, ಮಂಜುಳಾ ದಾಸರ, ರೂಪಾ ಅಸೂಟಿ, ಶಿಬ್ಬಂದಿ ಶೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.