ವಿದ್ಯಾರ್ಥಿಗಳಲ್ಲಿ ನಿರಂತರ ಓದುವ ದಾಹವಿರಲಿ: ಡಾ.ಸರೋಜಿನಿ
Students should have a constant thirst for reading: Dr. Sarojini
ಮಹಾಲಿಂಗಪುರ 19: ವಿದ್ಯಾರ್ಥಿಗಳು ನಿರಂತರ ಓದುವ ದಾಹವನ್ನು ಬೆಳೆಸಿಕೊಳ್ಳಬೇಕು. ಶ್ರಮವಹಿಸಿ ಓದಿ ಉತ್ತಮ ಅಂಕ ಪಡೆದರೆ ಉತ್ತಮ ಸ್ಥಾನಕ್ಕೇರಲು ಅವಕಾಶಗಳು ಕಾಲಡಿಯೇ ಬರುತ್ತವೆ. ಜೊತೆಗೆ ಸಮಯವನ್ನು ಹಾಳು ಮಾಡದೆ ಕಲಿಕೆಯಲ್ಲಿ ತೊಡಗಿ ತಂದೆ-ತಾಯಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಕಲಾದಗಿಯ ಇತಿಹಾಸ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಸರೋಜಿನಿ ಹೊಸಕೇರಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್ .ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳ ಸಂಘದ ಸಂಯೋಗದಲ್ಲಿ ನಡೆದ ಬಿಎ, ಬಿಕಾಂ, ಬಿಎಸ್ಸಿ 1 ವಿದ್ಯಾರ್ಥಿಗಳ ಪಾಲಕರ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಜ್ಞಾನವ ಶಾಲೆಗೆ ಬೆಳೆಯಬೇಕು ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸ್ಥಾನ ಪಡೆದು ಪಾಲಕರಿಗೆ ಆದರ್ಶ ಮಕ್ಕಳಾಗಿರಬೇಕು ಎಂದರು.
ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಮನೆಯಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡಿದರೆ ಅದೇ ಒಳ್ಳೆಯ ಮಾರ್ಗದರ್ಶನ. ಜೊತೆಗೆ ಸದ್ಗುಣ ಮೌಲ್ಯಗಳನ್ನು ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು. ಪ್ರಾಚಾರ್ಯ ಎನ್ ಬಿ ಪಾಟೀಲ ಮತ್ತು ಪಾಲಕ ಪ್ರತಿನಿಧಿ ಶಶಿಧರ ಉಳ್ಳಾಗಡ್ಡಿ ಮಾತನಾಡಿದರು. ನೂತನ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಸಂಯೋಜಕ ಎ ಎಮ್ ಉಗಾರೆ, ಜೆ ಆರ್ ಪಾಟೀಲ, ಎಸ್ ಸಿ ಮುಗಳ್ಯಾಳ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಗನ್ನವರ, ಉಪಾಧ್ಯಕ್ಷ ಮಹೇಶ ಮನ್ನಯ್ಯನವರಮಠ, ಸದಸ್ಯರಾದ ಶಶಿಧರ ಉಳ್ಳಾಗಡ್ಡಿ, ರಾಜೇಂದ್ರ ನಾವಿ, ಪ್ರಶಾಂತ ಹವಾಲ್ದಾರ, ಪ್ರೀತಿ ಕಲ್ಯಾಣಿ, ಕು.ದೀಪಾ ಅಮ್ಮಣಗಿ, ಉಪನ್ಯಾಸಕರಾದ ಟಿ ಡಿ ಡಂಗಿ, ಸಿ ಎಂ ಐಗಳಿ, ಸಿ ಎಂ ಗೆಣ್ಣೂರ, ಎ ಎಲ್ ಲಟ್ಟಿ, ಎಸ್ ಎ ಪಾಟೀಲ, ಟಿ ಎಂ ಗೌಳಿ, ಎಸ್ ಸಿ ಬಿರಾಜಿನವರ, ಪತ್ರಿಕೋದ್ಯಮ ವಿಭಾಗದ ರಾಜು ಚೌಗಲಾ, ಬಸವರಾಜ ಪಾಗದ ಸೇರಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 