ಬೈಲಹೊಂಗಲ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸ್ಪಷ್ಟ ಇರಬೇಕು

ಲೋಕದರ್ಶನ ವರದಿ

ಬೈಲಹೊಂಗಲ 08:  ವಿದ್ಯಾರ್ಥಿಗಳಿಗೆ ಜೀವನದಲ್ಲಿ  ಸ್ಪಷ್ಟ ಗುರಿ ಮತ್ತು ಆತ್ಮ ವಿಶ್ವಾಸ ಇರಬೇಕು ಎಂದು ನಿಮಾನ್ಸ್ ಯುವ ಸ್ಪಂದನ ಪರಿವರ್ತಕ ವೀರೇಶ ರಾಮದುರ್ಗ ಹೇಳಿದರು.

    ಅವರು ತಾಲೂಕಿನ ಬೆಳವಡಿ ಗ್ರಾಮದ ವೀರರಾಣಿ ಮಲ್ಲಮ ಸ್ಮಾರಕ ಸಂಯುಕ್ತ  ಪದವಿ ಪೂರ್ವ ಮಹಾ ವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತಾಶ್ರಯದಲ್ಲಿ  ಮಲ್ಲಮ್ಮ ಸ್ಮಾರಕ ಭವನದಲ್ಲಿ  ನಡೆದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮುಂದಿನ ಜೀವನ ಸುಖವಾಗಿರಬೇಕೆಂದರೆ ಈಗ ಕಷ್ಟ ಪಡಲೆಬೇಕು. ಇದು ಸಾಧ್ಯವಾಗಬೇಕಾದರೆ ನಡೆ ನುಡಿಗಳಲ್ಲಿ ಶುದ್ಧತೆ ಕಾಪಾಡಿಕೊಂಡು ಸಂಸ್ಕಾರದ ಗುಣ ಮತ್ತು ನೈತಿಕ ಮೌಲ್ಯಗಳನ್ನು  ಬೆಳೆಸಿಕೊಳ್ಳಬೇಕು. ಸ್ವ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.  ಪ್ರಾಚಾರ್ಯ ಎನ್.ಸಿ.ಯರಗಂಬಳಿಮಠ ಅಧ್ಯಕ್ಷತೆ ವಹಿಸಿದ್ದರು. 

    ಉಪನ್ಯಾಸಕರಾದ ಬಿ.ಕೆ.ಕೊಟಬಾಗಿ,ಎಮ್.ಜಿ.ಹಿರೇಮಠ ವೇದಿಕೆ ಮೇಲಿದ್ದರು. ಉಪನ್ಯಾಸಕರಾದ ಮಹಾಂತೇಶ ಉಪ್ಪಿನ ಸ್ವಾಗತಿಸಿದರು. ಬಿ.ಎಫ್.ಬಾಟನವರ ವಂದಿಸಿದರು. ಪಿಯು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.