ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಬೆಳಗಾವಿಯ ಮಹಾವೀರ ಮಿರ್ಜಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ
ಕಾಗವಾಡ 12 : ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ನಗರದ ಮಹಾವೀರ ಪಿ.ಮಿರ್ಜಿ ವಾಣಿಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿ ಭೂಮಿಕಾ ಪಾರಿಶ್ವಾಡ ಇವಳು ಕರ್ನಾಟಕ ಸರ್ಕಾರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಎನ್‌ಎಸ್‌ಎಸ್ ನಿರ್ದೇಶನಾಲಯ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಬೆಂಗಳೂರು ಇವರ ಸಹಯೋಗದಲ್ಲಿ ಫೆ. 11 ರಿಂದ ಫೆ. 17 ರ ವರೆಗೆ ಬೆಂಗಳೂರಿನಲ್ಲಿ ಜರಗುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ. ಮತ್ತು ಸಂದೀಪ ಸಾವಗಾರ ಇತನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ, ಎಸ್‌ಓಎ ವಿಶ್ವ ವಿದ್ಯಾಲಯ ಭುವನೇಶ್ವರ, ಒಡಿಶಾ ಇವರ ಸಹಯೋಗದಲ್ಲಿ ಫೆ. 21 ರಿಂದ ಫೆ. 27 ವರೆಗೆ ಭುವನೇಶ್ವರದಲ್ಲಿ ಜರಗುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆಯಾಗಿದ್ದಾನೆ. ಇಬ್ಬರೂ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯವರು ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.