ವಿದ್ಯಾಥರ್ಿಗಳಿಗೆ ಕಾನೂನಿನ ಅರಿವು ಅವಶ್ಯ: ನ್ಯಾ. ಸದಾನಂದಸ್ವಾಮಿ




ಹಾವೇರಿ 18:  ಶಾಲಾ ಹಂತದಲ್ಲಿ ವಿದ್ಯಾಥರ್ಿಗಳಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಪ್ರಭಾರ ಅಧ್ಯಕ್ಷರು ಹಾಗೂ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಅವರು ಹೇಳಿದರು.

ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಾಗೇಂದ್ರನಮನಮಟ್ಟಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರಲ್ಲಿ ಮಕ್ಕಳಿಗೆ ಮೂಲಭೂತ ಕಾನೂನುಗಳು ಹಾಗೂ ಶಾಲೆಯಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಸ್ಥಾಪನೆ ಕುರಿತಂತೆ ಆಯೋಜಿಸಿದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ನಮ್ಮ ಹಕ್ಕುಗಳಿಗೆ ಮಾತ್ರ ಹೋರಾಟ ಮಾಡದೆ ನಮ್ಮ ಕರ್ತವ್ಯಗಳನ್ನು ಅರಿತು ಪಾಲನೆ ಮಾಡಿದಲ್ಲಿ ನಾವು, ನಮ್ಮ ಮನೆಯವರು, ನಮ್ಮ ಗ್ರಾಮ ಹಾಗೂ ನಮ್ಮ ಸಮಾಜ ಶಾಂತಿ ಹಾಗೂ ನೆಮ್ಮದಿಯಿಂದ ಬಾಳಬಹುದು. ವಿದ್ಯಾಥರ್ಿ ದೆಶೆಯಿಂದಲೇ ಸಾಮಾಜಿಕ ಜವಾಬ್ದಾರಿಗಳು, ಕಾನೂನಿನ ಅರಿವು ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆ ಮುಖ್ಯ ಪರವೀಕ್ಷಣಾಧಿಕಾರಿ ಎಸ್.ಜಿ.ಕೋಟಿ ಅವರು ಮಾತನಾಡಿ, ಈ ಹಿಂದೆ ನಾವು ನ್ಯಾಯಾಲಯದ ಹೊರಗೆ ನ್ಯಾಯಾಧೀಶರನ್ನು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ದಿನಮಾನಗಳಲ್ಲಿ ಶಾಲಾ-ಕಾಲೇಜು ಸೆರಿದಂತೆ ನಮ್ಮೊಂದಿಗೆ ಬೆರೆತು ಕಾನೂನಿನ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿ ನಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ವೈ.ಎಲ್.ಲಾಡಖಾನ್ ಅವರು ಮಾತನಾಡಿ, ಭಾರತದ ಸಂವಿಧಾನವು ನಮ್ಮ ಎಲ್ಲ ಕಾನೂನುಗಳ ತಾಯಿಯಾಗಿದೆ. ಭಾರತೀಯರಾದ ನಾವು ಈ ನೆಲದ ಕಾನೂನುಗಳನ್ನು ಅರಿತು ಗೌರವಿಸಿದಲ್ಲಿ ಮಾತ್ರ ನಮ್ಮನ್ನು ಕಾನೂನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ಕಾನೂನಿನ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಹೇಳಿದರು.

ಮಹಿಳೆಯರು, ಮಕ್ಕಳು ಯಾವುದೇ ರೀತಿಯಿಂದ ದೌರ್ಜನ್ಯಕ್ಕೆ ಒಳಗಾದರೆ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದರೆ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ನೆರವು ಪಡೆಯಬಹುದಾಗಿದೆ. ಈ ಕಾರಣಕ್ಕಾಗಿ ನುರಿತ ಪೆನಲ್ ವಕೀಲರನ್ನು ನೇಮಕ ಮಾಡಿ ಉಚಿತವಾಗಿ ಕಾನೂನಿನ ನೆರವನ್ನು ಅಗತ್ಯವಿದ್ದವರಿಗೆ ನೀಡುವ ಕೆಲವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಶಾಲಾ ವಿದ್ಯಾಥರ್ಿಗಳಿಗೆ ಕಾನೂನಿನ ಅರಿವನ್ನು ಮೂಡಿಸಲು ಶಾಲೆಗಳಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಸ್ಥಾಪನೆ ಮಾಡಲಾಗುತ್ತಿದೆ. ಈ ಕಬ್ಲ್ನ ಚಟುವಟಿಕೆ ಮುಖಾಂತರ ವಿದ್ಯಾಥರ್ಿಗಳಿಗೆ ವಿವಿಧ ಕಾನೂನಿಗಳ ಮಾಹಿತಿ ಒದಗಿಸುವ ಪುಸ್ತಕಗಳು, ಕಂಪ್ಯೂಟರ್, ಕಪಾಟ್ನ್ನು ಉಚಿತವಾಗಿ ಒದಗಿಸಲಾಗುತ್ತದೆ. ಶಾಲಾ ವಿದ್ಯಾಥರ್ಿಗಳು ಹಾಗೂ ಶಿಕ್ಷಕರು ಇದರ ಸದುಪಯೋಗ ಪಡೆದುಕೊಲ್ಳುವಂತೆ ಮನವಿ ಮಾಡಿಕೊಂಡರು.

ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕುಮಾರಿ ರೇಹನಾ ಐ.ಚನ್ನಪಟ್ಟಣ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಸಿ.ನೀರಲಗಿ, ಕಾರ್ಯದಶರ್ಿ ದೇವರಾಜ ನಾಯ್ಡು, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎನ್.ಐ.ಇಚ್ಚಂಗಿ, ಶಾಲಾ ಮುಖ್ಯೋಪಾಧ್ಯಾಯ ಅಶೋಕ ಹಾವನೂರ, ಅಶೋಕಕುಮಾರ ಲಮಾಣಿ, ಗೋವಿಂದಪ್ಪ ದೊಡ್ಡಮನಿ ಉಪಸ್ಥಿತರಿದ್ದರು.