ಲೋಕದರ್ಶನ ವರದಿ
ವಿಜಯಪುರ 19:ವಿದ್ಯಾಥರ್ಿಗಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಜೀವನ ಶೈಲಿ ಹಾಗೂ ಪರಿಶ್ರಮದ ಅವಶ್ಯಕತೆ ಇದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಗುಂಡಬಾವಡಿ ಅವರು ಹೇಳಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳ ಕಾಯರ್ಾಲಯ ಹಾಗೂ ಎಪಿಎಂಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿಂದು ನಗರದ ಬಂಜಾರಾ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಹದಿಹರೆಯದವರ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
10-19 ವಯಸ್ಸಿನ ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಸಂಧಿಗ್ದ ಅವಧಿ ಎಂದು ಹೇಳಬಹುದು. ಪೌಷ್ಠಿಕ ಆಹಾರ, ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯ ಹಾಘೂ ಮಾನಸಿಕ ಆರೋಗ್ಯ ಕುರಿತು ಪರಿಪೂರ್ಣ ಅರಿವಿನ ಕೊರತೆಯಿಂದ ಹಲವು ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಐ.ಟಿ.ಬಾಲವತ್ತಿ ಅವರು ಮಾತನಾಡಿ, ಚಿಕ್ಕಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಉತ್ತೇಜನ ನೀಡಬೇಕು. ಆರೋಗ್ಯಕರ ಶೈಲಿ ನಮ್ಮದಾಗ ಬೇಕಾದರೆ ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಬಾಗವಾನ್ ಅವರು ಮಾತನಾಡಿ, ಕಾರ್ಯಕ್ರಮದ ಮುಖ್ಯ ಉದ್ದೇಶಾನುಸಾರ ಹದಿಹರೆಯದವರ ಮಕ್ಕಳ ಶಾರೀರಿಕ, ಮಾನಸಿಕ ಸಾಮಾಜಿಕ ಹಾಗೂ ಭಾವನಾತ್ಮಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದಾಗಿದೆ. ಜೊತೆಗೆ ಸ್ನೇಹಾ ಕ್ಲಿನಿಕ್ನಲ್ಲಿ ಒದಗುವ ಅಗತ್ಯವಾದ ಸೇವೆ ಹಾಗೂ ಉಪಯುಕ್ತ ಸಲಹೆ ಮತ್ತು ಸಮಾಲೋಚನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು ಆಪ್ತ ಸಮಾಲೋಚಕರಾದ ಗೋಪಾಲ ರಬಕವಿ ಅವರು ಮಾತನಾಡಿ, ಈಗಿನ ಹದಿಹರೆಯದವರು ಪ್ರಯೋಗಶೀಲತೆ ಮತ್ತು ಮಾಹಿತಿ ಕೊರತೆಯಿಂದ ತಮ್ಮ ಆರೋಗ್ಯ ಮತ್ತು ಬೆಳವಣಿಗೆಗೆ ಸಂಬಂಧ ಹಲವುಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಅಭಿವೃದ್ದಿಯು ಕುಂಠಿತವಾಗುತ್ತದೆ. ಹದಿಹರೆಯದವರ ಆರೋಗ್ಯ ಹಾಗೂ ಸರ್ವತೋಮುಖ ಬೆಳವಣಿಗೆ ಉದ್ದೇಶದಿಂದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹದಿಹರೆಯದವರಿಗಾಗಿ ಸ್ನೇಹಾ ಕ್ಲಿನಿಕ್ ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಮಂಜುನಾಥ ಪೋಳ, ಡಾ.ಸೋನಾಲಿ ಪೋಳ, ಬಸಪ್ಪ ಅಗ್ನಿ, ಶುಶ್ರೂಷಕಿ ಕು.ಸವಿತಾ ಕಕ್ಕಮರಿ ಉಪಸ್ಥಿತರಿದ್ದರು.