ಲೋಕದರ್ಶನ ವರದಿ
ಬೆಳಗಾವಿ, 16: ವಿದ್ಯಾಥರ್ಿಗಳಿಗೆ ಪಿ.ಯು.ಸಿ. ಹಂತವು ಭವಿಷ್ಯವನ್ನು ನಿರ್ಧರಿಸುವ ಹಂತವಾಗಿದೆ. ವಿದ್ಯಾಥರ್ಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವೆಂದು ಪೋಲೀಸ ಅಧೀಕ್ಷಕರಾದ ಸಿ.ಎಚ್. ಸುಧೀರಕುಮಾರ ರೆಡ್ಡಿ
ಹೇಳಿದರು.
ನಗರದ ಎಸ್.ಕೆ.ಇ. ಸಂಸ್ಥೆಯ ರಾಣಿ ಪಾರ್ವತಿ ದೇವಿ ಪದವಿ ಪೂರ್ವ ಮಹಾವಿದ್ಯಾಲಯ ವತಿಯಿಂದ ಬುಧವಾರ ಕೆ.ಎಂ.ಗಿರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಾಷರ್ಿಕ ಸ್ನೇಹ ಸಮ್ಮೇಳನ, ಪಾರಿತೋಷಕ ವಿತರಣಾ ಸಮಾರಂಭದ ಕುರಿತು ಅವರು ಮಾತನಾಡಿದರು.
2018-19 ನೇ ಸಾಲಿನ ಅತ್ಯುತ್ತಮ ವಿದ್ಯಾಥರ್ಿ ಶಿವಾಜಿ ತಿಬಿಲೆ ಮತ್ತು ಅತ್ಯುತ್ತಮ ವಿದ್ಯಾಥರ್ಿನಿ ರಿಯಾ ನಾಡಕಣರ್ಿ ಎಂದು ಘೋಷಿಸಲಾಯಿತು.
ವಿಧಧ ಸ್ಪಧರ್ೆಗಳಲ್ಲಿ ಭಾಗವಹಿಸಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾದ ಡಿ.ಬಿ. ಕಲಘಟಗಿ ಹಾಗೂ ಜಿ.ಎಂ. ಗಣಾಚಾರಿ, ಉಪನಿದರ್ೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪಿ.ಎಂ. ಶಿವಳಕರ ವಹಿಸಿ ಅಧ್ಯಕ್ಷೆಯ ನುಡಿಗಳನ್ನು
ಆಡಿದರು.
ಪ್ರಾಚಾರ್ಯರಾದ ಕೆ.ಬಿ.ಮೇಳೇದ ವಾಷರ್ಿಕ ವರದಿ ವಾಚನ ಮತ್ತು ದೈಹಿಕ ಶಿಕ್ಷಣ ನಿದರ್ೇಶಕರಾದ ದೇವೇಂದ್ರ ಕುಡಚಿ ವಾಷರ್ಿಕ ಕ್ರೀಡಾ ವಾಚನ ಮಾಡಿದರು. ಸುಜಾತಾ ಬಿಜಾಪುರೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಗ್ಲಾಡಿಸ್ ಗೋನ್ಸಾಲ್ವಿಸ, ಜಿಯಾನಾ ಜಾಜರ್್ ನಿರೂಪಿಸಿದರು. ಸರಸ್ವತಿ ಧರನಗುತ್ತಿ ವಂದಿಸಿದರು.