ವಿದ್ಯಾಥರ್ಿಗಳು ಪ್ರಪಂಚಕ್ಕೆ ಕೊಡುಗೆ ನೀಡುವಂತಹ ವಿಜ್ಞಾನಿಗಳಾಗಲಿ : ಪ್ರೊ. ಅವಟಿ

ಲೋಕದರ್ಶನ ವರದಿ

ಬೆಳಗಾವಿ, 28: ವಿಜ್ಞಾನವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಮುಂದುವರಿದಿದೆ ಹಾಗೂ ವಿದ್ಯಾಥರ್ಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ವಹಿಸಿ ಪ್ರಪಂಚಕ್ಕೆಕೊಡುಗೆ ನೀಡುವಂತಹ ವಿಜ್ಞಾನಿಗಳಾಗಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡೀನ್ ಆಫ್ ಸ್ಕೂಲ್ಆಫ್ ಮ್ಯಾಥಮ್ಯಾಟಿಕ್ಸ್ ಆಡ್ ಕಂಪ್ಯೂಟರ್ ಸೈನ್ಸ ಮತ್ತುಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಶ್ವನಾಥ ಬಿ.ಅವಟಿಹಳಿದರು. ಗುರುವಾರ ನಗರದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದಜರ್ೆ ಘಟಕ ಮಹಾವಿದ್ಯಾಲಯದಲ್ಲಿ ಜರುಗಿದ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರುರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಮತ್ತು ಇತಿಹಾಸವನ್ನು ತಿಳಿಸಿದರು ಜರುಗುತ್ತಿರುವ ವಿಜ್ಞಾನ ಪರ ಚಟುವಟಿಕೆಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗುತ್ತಿರುವುದು ಹೆಮ್ಮೆಯ ವಿಷಯವೆಂದರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯರಾದ ಪ್ರೊ.ಬಿ.ಎಸ್. ನಾವಿ ಅವರು ವಿಜ್ಞಾನಕ್ಕೆ ವಿಜ್ಞಾನಿಗಳ ಕೊಡುಗೆ ಹಾಗೂ ಸಾಮಾಜಕ್ಕೆ ವಿಜ್ಞಾನದಕೊಡುಗೆ ವಿವರಿಸುತ್ತಾ ವಿಜ್ಞಾನಿಗಳಾಗಿ ಬೆಳೆಯಲು ಅವಶ್ಯವಿರುವ ಗುಣಗಳನ್ನು ವಿವರಿಸಿದರು.ಕೊನೆಯದಾಗಿ ಎಲ್ಲ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯ ಕೊರಿದರು.

ವೇದಕೆಯ ಮೇಲೆ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಆದಿನಾಥ ಉಪಾಧ್ಯೆ ಮತ್ತು ಭೌತಶಸ್ತ್ರದ ವಿಭಾಗದ ಮುಖ್ಯಸ್ಥರಾದ ಬಾಲಾಜಿ ಆಳಂದೆ ಇದ್ದರು.

ಮಹಾವಿದ್ಯಾಲಯದ ಸಿಬ್ಬಂದಿಗಳಾದ ಡಾ.ಅಜರ್ುನ ಜಂಬಗಿ, ರಾಜಕುಮಾರ ಪಾಟೀಲ್,   ಶ್ರೀದೇವಿ ಚೌಗಲಾ , ಶ್ರೀಮಹೇಶಕುಮಾರ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾಥರ್ಿಯಾದ ಮೋಹನ ಹುನಕುಂಟ್ಟಿ ಪ್ರಾಥರ್ಿಸಿದರು.ಭೌತಶಾಸ್ತ್ರದ ಪ್ರಾಧ್ಯಾಪಕರಾದ ಬಾಲಾಜಿ ಆಳಂದೆಯವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಭೌತಶಾಸ್ತ್ರದ ಉಪನ್ಯಾಸಕರಾದ ಶಾಲೋಮ್ ಸುನೈನಾರವರು ನಿರೂಪಿಸಿದರು ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕರಾದ ವೀಣಾ ಉಪರಿ ವಂದಿಸಿದರು.