ವಿದ್ಯಾಥರ್ಿಗಳು ದೇಶದ ಆಸ್ತಿ: ಕನ್ನೂರ


ಲೋಕದರ್ಶನ ವರದಿ

ಶಿಗ್ಗಾವಿ 18: ವಿದ್ಯಾಥರ್ಿಗಳು ದೇಶದ ಬುನಾದಿ ಮತ್ತು ಆಸ್ತಿ, ಅವರಿಗೆ ಶಿಕ್ಷಣ ಆಟ ಪಾಠದೊಂದಿಗೆ ಕಾನೂನು ಮಾಹಿತಿಗಳನ್ನು ತಿಳಿಸಿದರೆ ಅವರು ನಾಗರೀಕ ವ್ಯವಸ್ಥೆಯಲ್ಲಿ ಉತ್ತಮ ಬದುಕು ಸಾಗಿಸಬಹುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಹೇಳಿದರು.

      ತಾಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಾನೂನು ಸಾಕ್ಷರತಾ ಕ್ಲಬ್ ಉಧ್ಘಾಟಿಸಿ ಮಾತನಾಡಿದ ಅವರು, 1987ರಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು, ಬಡವರು, ಅನಕ್ಷರಸ್ಥರಿಗೂ  ಕಾನೂನು ಅರಿವು ಮತ್ತು ನೆರವು ನೀಡಬೇಕು ಎಂಬ ಸದುದ್ಧೇಶದಿಂದ ಕಾನೂನು ಸೇವಾ ಪ್ರಾಧಿಕಾರ ಕಾನೂನು ಅರಿವು-ನೆರವು ವಿದ್ಯಾಪ್ರಸಾರ ಆರಂಭಿಸಿ ಪಟ್ಟಣ, ನಗರ, ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಾನೂನು ಅರಿವು ನೀಡುವದರೊಂದಿಗೆ ಇಂದು ವಿದ್ಯಾಥರ್ಿಗಳಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಮಾಡಿ ಕಂಪ್ಯೂಟರ್ ಹಾಗೂ ನಿತ್ಯ ಜೀವನಕ್ಕೆ ಬೇಕಾಗುವ ವಿಶೇಷ ಕಾನೂನು ಮಾಹಿತಿ ಪುಸ್ತಕಗಳನ್ನು ಒದಗಿಸಿದೆ ಶಿಕ್ಷಕರು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿ ಅವರಿಂದ ಬೇರೆ ಶಾಲೆಗಳಿಗೆ ಕಾನೂನು ಮಾಹಿತಿ ಒದಗಿಸುವ ಮೂಲಕ ಕಾನೂನು ಪ್ರಾಧಿಕಾರದ ಕಾರ್ಯಕ್ರಮ ಸದುಪಯೋಗಪಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಹೆಳವರ ಮಾತನಾಡಿ, ಮಕ್ಕಳಿಗೆ ಕಾನೂನು ಮಾಹಿತಿ ನೀಡುವ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರದ ಕಾರ್ಯಕ್ರಮ ಮಹತ್ವದ್ದಾಗಿದೆ ಆಟಪಾಠದೊಂದಿಗೆ ಮಕ್ಕಳಿಗೆ ನಿತ್ಯ ಜೀವನದಲ್ಲಿ ಉಪಯೋಗವಾಗುವ ಕಾನೂನುಗಳನ್ನು ತಿಳಿಸಿದರೆ ವಿದ್ಯಾಥರ್ಿಗಳ ಜೀವನಕ್ಕೆ ಇದು ಭದ್ರ ಬುನಾದಿಯಾಗಲಿದೆ ಎಂದರು.

ಹಿರಿಯ ನ್ಯಾಯವಾದಿ ಎನ್.ಎನ್. ಪಾಟೀಲ ಮಾತನಾಡಿ, ವಿದ್ಯಾಥರ್ಿಗಳು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಇವೆ ತಂದೆ ತಾಯಿ, ಹಿರಿಯರು, ಶಿಕ್ಷಕರನ್ನು ಗೌರವಿಸುವ ಸಂಸ್ಕಾರ ಹೊಂದಬೇಕು. ಕಾನೂನು ಪ್ರಾಧಿಕಾರದ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಶಾಂತಿಯತವಾದ ಸಹಭಾಳ್ವೆ ನಡೆಸುವಂತೆ ಸಲಹೆ ನೀಡಿದರು.

ನ್ಯಾಯವಾದಿಗಳು ಹಾಗೂ ಕಾನೂನು ಸಲಹೆಗಾರರಾದ ಜಿ.ಎನ್. ಯಲಿಗಾರ, ಕೆ.ಎನ್.ಭಾರತಿ, ಎಪ್.ಎಮ್.ಹಾದಿಮನಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ನಬಿಸಾಬ ಹರಕುಣಿ ಹಾಗೂ ಸದಸ್ಯರು ಹಾಗೂ ಎಸ್.ಸಿ.ಬಸರಿಕಟ್ಟಿ, ಶಾಲಾ ಶಿಕ್ಷಕರು ವಿದ್ಯಾಥರ್ಿಗಳು, ಗ್ರಾಮಸ್ತರು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾದ್ಯಯರಾದ ಆರ್.ಆರ್ ಓಣಿಮನಿ ಸ್ವಾಗತಿಸಿ ವಂದಿಸಿದರು,  ಶಿಕ್ಷಕರಾದ ಎನ್.ಎಚ್.ಆದ್ವಾನಿ ಕಾರ್ಯಕ್ರಮ ನಿರ್ವಹಿಸಿದರು.