ಶಿಕ್ಷಕನಿಂದಲೆ ವಿಧ್ಯಾರ್ಥಿನೀಯ ಮೇಲೆ ಅತ್ಯಾಚಾರ

Student raped by teacher

ಶಿಕ್ಷಕನಿಂದಲೆ  ವಿಧ್ಯಾರ್ಥಿನೀಯ ಮೇಲೆ ಅತ್ಯಾಚಾರ

ಧಾರವಾಡ 20  : ಜಿಲ್ಲೆಯ ಹುಬ್ಬಳ್ಳಿ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  14 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ  ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಗಾಮನಗಟ್ಟಿಯ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ  ಮಹೇಶ ಚಂದಾಪುರ  ಅತ್ಯಾಚಾರ ನಡೆಸಿದ ಆರೋಪಿ ಎಂದು ತಿಳಿದು ಬಂದಿದೆ  ಮನೆಪಾಠಕ್ಕೆಂದು ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ  ಆರೋಪಿ ಶಿಕ್ಷಕ, ಮನೆಯೊಳಗೆ ಕರೆದೊಯ್ದು ಅನೇಕ ಬಾರಿ ಅತ್ಯಾಚಾರ ಎಂದು ಸಂತ್ರಸ್ತೆ ಬಾಲಕಿ ಈ ಘಟನೆ ಕುರಿತು  ತನ್ನ ಮನೆಗೆ ಬಂದು ತಾಯಿಗೆ  ಮಾಹಿತಿ ನೀಡಿದಾಗ ಬಾಲಕಿಯ ತಾಯಿ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.ನವನಗರ ಪೊಲೀಸರು   ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿನಿಯರ ರಕ್ಷಣೆಗೆ ಅನೇಕ ಕಾನೂನುಗಳಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುರು ಶಿಷ್ಯರ ಸಂಬಂಧಗಳು ಏನು ಎಂಬುದು ಶಿಕ್ಷಕರಿಗೆ ಗೊತ್ತಿಲ್ಲ ಇಂಥ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು  ಸಾಧ್ಯವೇ? ಎಂಬುದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿದೆ.ಧಾರವಾಡದ ಗಾಮನಗಟ್ಟಿ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಮಹೇಶ ಚಂದಾಪುರ  ಎಂಬಾತ   ಅಲ್ಲಿಯು ಅನೇಕ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಗಳು ಕೇಳಿ ಬರುತ್ತಿವೆ.  ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಸಾಧನಾ ಮಾನವ ಹಕ್ಕುಗಳ ಕೇಂದ್ರಕ್ಕೆ  ದೂರನ್ನು ನೀಡಿದ್ದಾಳೆ. ಸಂಸ್ಥೆಯ ಅಧ್ಯಕ್ಷರಾದ ಡಾ .ಇಸಬೆಲಾ ಝೇವಿಯರ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಸಂಸ್ಥೆ ಅಧ್ಯಕ್ಷರಿಗೆ  ಅನೇಕ ಒತ್ತಡಗಳು ಬಂದರೂ ಕೂಡ  ಮುಲಾಜಿಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು  ಮುಂದಾಗಿದ್ದಾರೆ. ಧಾರವಾಡ ಜಿಲ್ಲಾ ಸಂರಕ್ಷಣಾ ಘಟಕ ಶ್ರೀಮತಿ ಜಯಶ್ರೀ ಹಾಗೂ ಬಸಲಿಂಗ ಸಂತ್ರಸ್ತೆ ವಿದ್ಯಾರ್ಥಿನಿಯೊಂದಿಗೆ ಸಮಾಲೋಚನೆ ನಡೆಸಿ ಸಖಿ ಆ ವಿದ್ಯಾರ್ಥಿಯನ್ನು ಒಪ್ಪಿಸಿ ಅಲ್ಲಿಯೂ ಕೂಡ ವಿದ್ಯಾರ್ಥಿನಿಯೊಂದಿಗೆ ಸಮಾಲೋಚನೆ ನಡೆಸಿ  ಸೂಕ್ತ ಕಾನೂನು ಕ್ರಮಕ್ಕೆ ಮುಂದಾದರು.ಆ ಶಿಕ್ಷಕನ ಹೆಂಡತಿ ಹಾಗೂ ಅದೇ ಶಾಲೆಯ ಶಿಕ್ಷಕಿ  ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಮನೆಯಲ್ಲಿ ಹೆಂಡತಿ ಇಲ್ಲದ ಸಮಯದಲ್ಲಿ ಈ ವಿದ್ಯಾರ್ಥಿನಿಯನ್ನ ಲೈಂಗಿಕ ದೌರ್ಜನಕ್ಕೆ ಬಳಸಿಕೊಂಡಿದ್ದಾನೆ.  ದೌರ್ಜನ್ಯ ವೆಸಗಿದ  ಶಿಕ್ಷಕನ ಹೆಂಡತಿ ಕೂಡ ಶಿಕ್ಷಕಿ ಅವಳಿಗೆ ಈ ವಿಷಯ ಗೊತ್ತಾದಾಗು ಕೂಡ ಮೌನವಾಗಿರುವುದು ವಿಪರ್ಯಾಸದ ಸಂಗತಿ.ಈತ ಈ ಹಿಂದೆ ಗಂಜಿಗಟ್ಟಿಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲು ಕೂಡ ಅನೇಕ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವಸಿಗಿದ್ದನೆಂಬ ತಿಳಿದು ಬಂದಿದೆ  ಒಟ್ಟರೆ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ವಿದ್ಯಾರ್ಥಿನಿಗೆ  ನ್ಯಾಯ ಕೊಡಿಸಲು ಪೋಲಿಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.