ಲೋಕದರ್ಶನ ವರದಿ
ಕೊಪ್ಪಳ 30: ವಿದ್ಯಾರ್ಥಿಗಳು ಕೇವಲ ತಮ್ಮ ಪಠ್ಯ ವಸ್ತುವಿನ ಕಡೆಗಷ್ಟೇ ಗಮನಹರಿಸದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿ ಗಳ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿ ಗಳು ಕಥೆ, ಕಾದಂಬರಿ, ನಾಟಕ, ಕಾವ್ಯಗಳನ್ನು ಓದಬೇಕು. ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಪುಸ್ತಕ ಶಾಶ್ವತವಾದ ಗೆಳೆಯ, ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲಿ ಹೋದರೂ ಸಂತೋಷವಾಗಿರಬಲ್ಲರು, ಪುಸ್ತಕ ಕಡಿಮೆ ಖರ್ಚಿನಲ್ಲಿ ಮನೋರಂಜನೆ ಒದಗಿಸುತ್ತದೆ. ವಿದ್ಯಾರ್ಥಿಗಳು ಮೂಲ ಜಾನಪದ ಗೀತೆಗಳು, ಭಕ್ತಿ ಗೀತೆಗಳು, ಭಾವಗೀತೆಗಳು, ದೇಶ ಭಕ್ತಿಗೀತೆಗಳನ್ನು ಹಾಡುವ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಸಮಯಪ್ರಜ್ಞೆಯನ್ನೂ ಸಹ ಹೊಂದಬೇಕು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಶುಕ್ರವಾರ ಕೊಪ್ಪಳದ ಎಸ್.ಎಫ್.ಎಸ್.ಶಾಲೆಯಲ್ಲಿ ಹಮ್ಮಿಕೊಂಡ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಪ್ರಾಚಾರ್ಯರಾದ ರೆವೆರೆಂಡ್ ಫಾದರ್ ಮಜೀಸ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿಯಾದ ರೆವೆರೆಂಡ್ ಫಾದರ್ ಜೋ ಜೋ, ವಿದ್ಯಾರ್ಥಿ ಪ್ರತಿನಿಧಿಗಳಾದ ಹರ್ಷಿತಾ ಕಾಟವಾ, ಶಿವಮಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಶಿರೇಖಾ ಕುಲಕಣರ್ಿ ಪ್ರಾರ್ಥಿ ಸಿದರು. ವೀರಣ್ಣ ಡೊಳ್ಳಿನ ನಿರೂಪಿಸಿದರು. ನಾಗವೇಣಿ ಸ್ವಾಗತಿಸಿದರು. ಆರತಿ ಪಾಟೀಲ ವಂದಿಸಿದರು.