ವಿದ್ಯಾರ್ಥಿ ಕಲ್ಯಾಣ ಒಕ್ಕೂಟ- ಕಲಾ ವಿಭಾಗದ ಮೂರು ದಿನಗಳ ಕಾರ್ಯಾಗಾರ
ಧಾರವಾಡ 13: ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಶಿವಪ್ಪ ಜಿಗಳೂರು ಕಲಾ ಹಾಗೂ ಡಾ ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಧಾರವಾಡದ ವಿದ್ಯಾರ್ಥಿ ಕಲ್ಯಾಣ ಒಕ್ಕೂಟ, ಸಾಂಸ್ಕೃತಿಕ ಮತ್ತು ಲಲಿತ ಕಲಾ ವಿಭಾಗದ ವತಿಯಿಂದ ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು,ದಿನಾಂಕ 10,11,12 ಮಾರ್ಚ್ 2025 ರಂದು ಅದರ ಉದ್ದೇಶವು ಸೃಜನಾತ್ಮಕವಾಗಿ ವಿದ್ಯಾರ್ಥಿನಿಯರು ಬೆಳೆಯಲಿ, ಸ್ವ ಉದ್ಯೋಗವನ್ನು ಆರಂಭಿಸಲಿ ಎನ್ನುವುದಾಗಿತ್ತು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಂಸ್ಥೆಯ ಪ್ರಾಚಾರ್ಯರಾದ ಮಂಜುಳಾ ಶಿಂಧೆ ಅವರು 11 ಮತ್ತು 12ನೇ ತಾರೀಖಿನಂದು ಆಗಮಿಸಿದ್ದು, 12ನೇ ತಾರೀಖಿನಂದು ಬ್ಯೂಟೀಶೀಯನ್ ಆಗಿರುವ ಶ್ವೇತಾ ಪವಾರ್ ಅವರು ,ಕೊನೆಯ ದಿನದಂದು ಆರೀ ಕಲೆಯನ್ನು ತಿಳಿಸಿದ ಮಾಧುರಿ ಕುರ್ಡೇಕರ್ ಹಾಗೂ ಶ್ರೀ ಚೇತನ್ ಎಲಿಗಾರ್ ಅವರು ಸಂಗೀತ ವಾದ್ಯಗಳನ್ನು ನುಡಿಸುವುದನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಪ್ರಾಚಾರ್ಯರಾದ ಡಾಕ್ಟರ್ ರಾಜೇಶ್ವರಿ ಎಂ .ಶೆಟ್ಟರ್ ಹಾಗೂ ಸಂಸ್ಕೃತಿಕ ವಿಭಾಗದ ಸಂಚಾಲಕರಾದ ಶಕುಂತಲಾ ಬಿರಾದರ್ ಮತ್ತು ಮಹದೇವ್ ಸುಳ್ಳದ ಉಪಸ್ಥಿತರಿದ್ದರು.