ಧಾರವಾಡ 21: ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಕ್ಕಳಲ್ಲಿ ಮತದಾನದ ಮಹತ್ವ ಮತ್ತು ಅರಿವು ಉಂಟಾಗುವುದರಿಂದ ಸಮರ್ಥವಾದ ಪ್ರಜಾಪ್ರಭುತ್ವ ರಾಷ್ಟ್ರವನ್ನು ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಗಳಲ್ಲಿ ಮತದಾನ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು.
ಅವರು ನಿನ್ನೆ (ನವೆಂಬರ್ 20) ಯಂದು ಧಾರವಾಡದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ರಾಷ್ಟ್ರದ ಬದಲಾವಣೆ ಮತ್ತು ಅಭಿವೃದ್ಧಿಗೆ ಎಲ್ಲ ವಯಸ್ಕ ಮತದಾರರು ಮತದಾನದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದು ಅವಶ್ಯವಾಗಿದೆ. ತಮ್ಮ ಕುಟುಂಬ, ನೆರೆಹೊರೆಯವರು ಮತ್ತು ಬಂಧುಗಳಲ್ಲಿ ಮತದಾನದ ಮಹತ್ವ ಕುರಿತು ವಿದ್ಯಾರ್ಥಿ ಗಳು ತಿಳುವಳಿಕೆ ನೀಡಬೇಕು. ಮತ್ತು ಅವರು ಪ್ರತಿಯೊಂದು ಹಂತದಲ್ಲೂ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು. ಭವಿಷ್ಯದಲ್ಲಿ ಭಾರತದ ಸದೃಢತೆ ಮತ್ತು ಭಾರತ ಅಭಿವೃದ್ಧಿತ ರಾಷ್ಟ್ರವಾಗಿ ನಿಮರ್ಿಸುವಲ್ಲಿ ವಿದ್ಯಾರ್ಥಿ ಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರ ತರುವಲ್ಲಿ ಮತದಾರರ ದಿನಾಚರಣೆಯ ಸ್ಪಧರ್ೆಗಳು ಪೂರಕವಾಗಿವೆ. ಮತದಾನ ಜಾಗೃತಿ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಕಿರುನಾಟಕ, ಪ್ರಬಂಧ, ರಸಪ್ರಶ್ನೆ ಮತ್ತು ಜಾಗೃತಿ ಗೀತೆಗಳ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆ ಗಳಲ್ಲಿ ಆಯ್ಕೆಯಾಗುವ ಮಕ್ಕಳನ್ನು ಬಹುಮಾನ ನೀಡಿ ಸತ್ಕರಿಸಲಾಗುವುದು ಮತ್ತು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಎಂ.ಎ. ಮುಲ್ಲಾ, ಪ್ರಕಾಶ್ ಬೂತಾಳೆ, ಸಂಜಯ್ ಮಾಳಿ, ಕೆ.ಎಂ. ಶೇಕ್, ಬಿ.ವೈ.ಭಜಂತ್ರಿ, ಶಿವಲೀಲಾ ಕಳಸಣ್ಣವರ ಹಾಗೂ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವಿದ್ಯಾರ್ಥಿ ಗಳು ರಸಪ್ರಶ್ನೆ, ಪ್ರಬಂಧ ಹಾಗೂ ನಾಟಕಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಬಿ.ಬಿ.ದುಬ್ಬನಮರಡಿ ನಿರೂಪಿಸಿದರು.