ವಿಜಯಪುರ 23: ಕೋವಿಡ್-19 ನಿಯಂತ್ರಿಸಲು ಸಕರ್ಾರ ಘೋಷಿಸಿದ್ದ ಲಾಕ್ಡೌನ್ ನಿಯಮದಲ್ಲಿ ಕೆಲವು ವಿನಾಯಿತಿ ನೀಡಿದ್ದು, ಸದ್ಯಕ್ಕೆ ಜಾರಿಯಲ್ಲಿರುವ ಲಾಕ್ಡೌನ್ ನಿಯಮ ಮತ್ತು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ದಿ. 23ರಂದು ವಿಡಿಯೋ ಸಂವಾದ ನಡೆಸಿದ ಅವರು ಕಂಟೇನ್ಮೆಂಟ್ ವಲಯ (ನಿಯಂತ್ರಿತ ಪ್ರದೇಶ) ಹೊರತು ಪಡಿಸಿ ವಿವಿಧ ಕಡೆ ಲಾಕ್ಡೌನ್ ನಿಯಮಗಳನ್ನು ಮತ್ತು ನಿರ್ಬಂಧಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಬೇಕು. ಯಾವುದೇ ದೂರುಗಳಿಗೆ ಅವಕಾಶ ನೀಡದೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದಾರೆ.
ಕೋವಿಡ್-19ಗೆ ಸಂಬಂಧಪಟ್ಟಂತೆ ತೀವ್ರತರ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರಕ್ಕೆ ಸಂಬಂಧಪಟ್ಟಂತೆ ಲಕ್ಷಣಗಳನ್ನು ಹೊಂದಿರುವವರನ್ನು ಗುರುತಿಸಲು ಈಗಾಗಲೇ ಆಶಾ ಕಾರ್ಯಕತರ್ೆಯರು, ಎಎನ್ಎಮ್, ಬಿಎಲ್ಒ ಗಳು ಮನೆಮೆನೆಗೆ ಭೇಟಿ ನೀಡುತ್ತಿದ್ದು, ಅವರ ಸಮೀಕ್ಷಾ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ತೊಡಕು ಆಗದಂತೆ ನೋಡಿಕೊಳ್ಳಬೇಕು. ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕೂಡ ಈ ಕುರಿತು ನಿಗಾ ಇಟ್ಟು ಇಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ ಆಯಾ ಪ್ರಾಥಮಿಕ ಮತ್ತು ತಾಲೂಕಾ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.
ಈ ಸಮೀಕ್ಷೆ ಅಂಗವಾಗಿ ಹಿರಿಯ ನಾಗರೀಕರು, ಡಯಾಬಿಟಿಸ್, ಎಚ್ಐವಿ, ಗಭರ್ಿಣಿ ಮಹಿಳೆಯರು, ಅಸ್ತಮಾ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರ ಬಗ್ಗೆ ಕಂಡುಬಂದಲ್ಲಿ ಅವಧಿ ಮೀರುವ ಮುಂಚೆಯೇ ಮಾಹಿತಿ ಒದಗಿಸಲು ಸೂಚಿಸಿರುವ ಅವರು ತಮ್ಮ ಅಧೀನ ಅಧಿಕಾರಿಗಳನ್ನು ಇನ್ನಷ್ಟು ಚುರುಕುಗೊಳಿಸುವಂತೆ ಸಲಹೆ ನೀಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಕರ್ಾರ ಕೆಲವು ವಿನಾಯಿತಿ ನೀಡಿದ್ದರೂ ಕೂಡ ಪ್ರತಿದಿನ, ಕಾರಣವಿಲ್ಲದೆ ಓಡಾಡುವವರ ಬಗ್ಗೆ ತೀವ್ರ ನಿಗಾ ಇಡಬೇಕು. ಕೃಷಿ, ತೋಟಗಾರಿಕೆ, ಉದ್ಯಮ ವಲಯಕ್ಕೆ, ಲೋಕೋಪಯೋಗಿ, ಹೆದ್ದಾರಿ ನಿಮರ್ಾಣ ಚಟುವಟಿಕೆಗಳನ್ನು ನಿರ್ವಹಿಸುವವರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಅನುಮತಿ ನೀಡಬೇಕು. ಕಾಮರ್ಿಕರಿಗೆ ದಿನನಿತ್ಯ ಓಡಾಡುವುದಕ್ಕೆ ಅವಕಾಶ ನೀಡದೆ, ಆಯಾ ಉದ್ಯಮ ಮಾಲೀಕರು ಮತ್ತು ಗುತ್ತಿಗೆದಾರರು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಜರ್ಗಳನ್ನು ಒದಗಿಸುವ ಮೂಲಕ ತಮ್ಮ ವಲಯದಲ್ಲಿಯೇ ಇಟ್ಟುಕೊಂಡು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಂಟಿ ಕೃಷಿ ನಿದರ್ೇಶಕರು, ಗ್ರಾಮಾಂತರ ಪ್ರದೇಶದಲ್ಲಿ ಆಯಾ ಕೃಷಿ ಸಹಾಯಕ ನಿದರ್ೇಶಕರು ನೋಡಲ್ ಅಧಿಕಾರಿಗಳಾಗಿದ್ದು, ಗುರುತಿನ ಚೀಟಿಯನ್ನು ಅರ್ಹರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಈ ನಿಯಮ ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ವ್ಯಾಪ್ತಿಯಲ್ಲಿಯೂ ಪಾಲಿಸುವಂತೆ ಮತ್ತು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ನಿಯಮಾವಳಿಯನ್ವಯ ಕಾಮರ್ಿಕರನ್ನು ಒಯ್ಯುವ ವಾಹನಗಳಿಗೆ ಗುರುತಿನ ಚೀಟಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಯಾ ತಾಲೂಕಾ ತಹಶೀಲ್ದಾರರು, ಇನ್ಸ್ಪೆಕ್ಟರ್ಗಳು, ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿ ಗಳು ಜವಾಬ್ದಾರರಾಗಿದ್ದು, ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಜಿಲ್ಲೆಯಿಂದ ಹೊರಗೆ ಹೋಗಲು ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತ್ರ ಇದ್ದು, ಜಿಲ್ಲೆಯೊಳಗೆ ಸಕರ್ಾರದ ನಿಯಮಾವಳಿಗಳಂತೆ ಅನುಮತಿ ಮತ್ತು ಪಾಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಮದುವೆಗಳಿಗೆ 10 ಜನರಿಗೆ ಮಾತ್ರ ಮತ್ತು ಶವಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಈ ಕುರಿತು ಜನನ-ಮರಣ ನೋಂದಣಿ ಅಧಿಕಾರಿಗಳು ಮತ್ತು ಪಿ.ಡಿ.ಓ, ಗ್ರಾಮ ಲೆಕ್ಕಾಧಿಕಾರಿಗಳು ಜವಾಬ್ದಾರರಾಗಿದ್ದು, ಯಾವದೇ ಲೋಪವೆಸಗಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿ 188 ರನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದರಂತೆ ಜಿಲ್ಲೆಯಾದ್ಯಂತ ಯಾವುದೇ ಜಾತ್ರೆಗಳಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಆಯಾ ತಹಶೀಲ್ದಾರರು, ಪೊಲೀಸ್ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇಡಬೇಕು. ಹೊಟೇಲ್, ಡ್ರೈಫ್ರೂಟ್ಸ್, ಐಸ್ ಕ್ರಿಂ, ಜ್ಯೂಸ್ ಅಂಗಡಿಗಳ ಮೂಲಕ ಯಾರಾದರೂ ಮನೆಮನೆಗೆ ಡಿಲೇವರಿ ಮಾಡಬಯಿಸಿದ್ದಲ್ಲಿ ಈ ಕುರಿತು ಪಾಸ್ನ್ನು ಸಹ ನೀಡಲಾಗುವುದು. ಒಟ್ಟಾರೆ ಲಾಕ್ಡೌನ್ ಜಾರಿಯ ಜೊತೆಗೆ ಸಾಂಕ್ರಾಮಿಕ ರೋಗ ನಿವಾರಣಾ ಸಿಬ್ಬಂದಿಗಳಿಗೆ ರಕ್ಷಣೆ ಸಾಮಾಜಿಕ ಕ್ಷೇತ್ರ, ನರೇಗಾ, ಸಾರ್ವಜನಿಕ ಕ್ಷೇತ್ರ, ಸರಕು ಸಾಗಣೆ, ವಾಣಿಜ್ಯ ಚಟುವಟಿಕೆ, ಉದ್ಯಮ ಚಟುವಟಿಕೆ ಹಾಗೂ ನಿಮರ್ಾಣ ಚಟುವಟಿಕರಗಳ ಬಗ್ಗೆ ರಾಜ್ಯ ಸಕರ್ಾರದ ನಿದರ್ೇಶನದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದು, ಮಹಾನಗರ ಪಾಲಿಕೆ, ಆಯಾ ನಗರ ಸ್ಥಳಿಯ ವ್ಯಾಪ್ತಿಯಲ್ಲಿ ಸೂಕ್ತ ನಿದರ್ೇಶನ ಸಹ ಪಾಲಿಸುವಂತೆ ಅವರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.