ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಕಠಿಣ ಕ್ರಮ: ಶಾಸಕ ಮನಗೂಳಿ

Strict action will be taken if there is any disruption in drinking water supply during summer: MLA

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಕಠಿಣ ಕ್ರಮ: ಶಾಸಕ ಮನಗೂಳಿ  

ಸಿಂದಗಿ 27: ಪಟ್ಟಣದಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಸಿಂದಗಿ ಪಟ್ಟಣದ 23 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಬೇಕು. ಒಂದು ವೇಳೆ ಬೇಸಿಗೆ ಸಮಯದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಕಠಿಣ ಕ್ರಮ ಕೈಗೊಳ್ಳುವದಾಗಿ ಪಟ್ಟಣದ ಶುದ್ಧ ಕುಡಿಯುವ ನೀರು ಘಟಕದಲ್ಲಿನ ಮೋಟಾರ್ಗಳನ್ನು ನಿರಂತರವಾಗಿ ಪರೀಶೀಲಿಸಬೇಕು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಿಗದಿಪಡಿಸಿದ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿರಬೇಕು ಶಾಸಕ ಅಶೋಕ ಮನಗೂಳಿ ರವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ ನೀಡಿದರು.  

      ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿ, 23 ವಾರ್ಡಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ, ಒಳಚರಂಡಿ ಕಾಮಗಾರಿಯ ಬಗ್ಗೆ ಕೆರೆಯ ಅಭಿವೃದ್ಧಿ ಬಗ್ಗೆ ಹಾಗೂ 24*7 ಕುಡಿಯುವ ನೀರಿನ ಬಗ್ಗೆ ಬಳಗಾನೂರ ಕೆರೆಯಿಂದ ನಿತ್ಯ ನೀರು ಸರಬರಾಜು ಅಗುತ್ತಿರುವ ಬಗ್ಗೆ ಹಾಗೂ  ಯರಗಲ್ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ಪೈಪಲೈನ ಮೂಲಕ ಕೆರೆ ನೀರು ಸಂಗ್ರಹವಾಗುತ್ತಿರುವ ಬಗ್ಗೆ ವಿವರಣೆ ಪಡೆದು ಪಟ್ಟಣದ ಕೆರೆಯ ಸುತ್ತಮುತ್ತ ಬೆಳದಿರುವ ಗಿಡ ಗಂಟೆಗಳನ್ನು ಕೂಡಲೇ ತೆರೆವುಗೊಳಿಸಬೇಕಲ್ಲದೆ ಹಿಂಗಾರು ಮತ್ತು ಮುಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ತಲೆ ದೊರುವುದರಿಂದ ಪಟ್ಟಣದಲ್ಲಿ ನೀರು ಸರಬರಾಜು ಮಾಡುವ ಸಿಬ್ಬಂದಿ ಜಾಗೃಕತೆಯಿಂದ ಕಾರ್ಯನಿರ್ವಹಿಸಿ ಜನರಿಗೆ ಸಮಸ್ಯೆ ಅಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.  

           ಪಟ್ಟಣದಲ್ಲಿ ನಡೆಯುತ್ತಿರುವ ಯುಜುಡಿ ಕಾಮಗಾರಿಯು ವಿಳಂಬವಾಗಿ ನಡೆಯುತ್ತಿದ್ದು.  ಕೂಡಲೇ ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಿಸಿದ ಸಿಬ್ಬಂದಿಗಳು ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ನಿರಂತರವಾಗಿ ಪರೀಶೀಲಿಸಬೇಕು. ಮತ್ತು ಪಟ್ಟಣದಲ್ಲಿರುವ ಕುಡಿಯುವ ನೀರಿನ ಬೋರ್ವೆಲ್ ಮತ್ತು ಬಾವಿಗಳ ಪರಿಸ್ಥಿತಿಯನ್ನು ಗಮನಿಸುತ್ತಿರಬೇಕು. ಸಿಂದಗಿ ಪುರಸಭೆ ವತಿಯಿಂದ ನೀರು ಸರಬರಾಜು ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ನಿಮಗೆ ನಿಗದಿಪಡಿಸಿದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಿದ್ದು ನೀರು ಪೂರೈಸಬೇಕು ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು. 

      ಪುರಸಭೆಯ ಅಧ್ಯಕ್ಷ ಶಾಂತುಗೌಡ ಬಿರಾದಾರ, ಉಪಾಧಕ್ಷ ರಾಜಣ್ಣಿ ನಾರಾಯಣಕರ, ಯೋಜನಾ ನಿರ್ದೇಶಕರಾದ ಭದ್ರುದ್ದಿನ ಸೌದಾಗರ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರ ವಿದ್ಯಾದರ ನ್ಯಾಮಗೌಡ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದಸಿಂಗ್, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹಳ್ಳಿ, ಕಿರಿಯ ಅಭಿಯಂತರ ಸಚೀನ ಹೊಸಮನಿ, ವ್ಯವಸ್ಥಾಪಕ ಸಿದ್ದು ಅಂಗಡಿ, ಸಿನೇಟರಿ ಅಧಿಕಾರಿ ನಬಿರಸೂಲ ಉಸ್ತಾದ  ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.