ಧಾರವಾಡ 26: ನಮ್ಮ ಸುತ್ತಮುತ್ತಲಿನ ಜನರ ಜೀವನವನ್ನು ಸ್ವಲ್ಪ ಲಕ್ಷ್ಯಕೊಟ್ಟು ನೋಡಿದಾಗ, ಹೆಚ್ಚಿನ ಜನರು ದಿನನಿತ್ಯದ ಕೆಲಸಕಾರ್ಯಗಳಲ್ಲಿ ಒತ್ತಡ ಅನುಭವಿಸುವುದು, ಮಾನಸಿಕ ನೆಮ್ಮದಿ ಹಾಳುಮಾಡಿಕೊಂಡಿರುವುದು ಮತ್ತು ವಿಚಲಿತರಾಗಿರುವುದನ್ನು ಕಾಣುತ್ತೇವೆ. . ನಮ್ಮ ಪೂರ್ವಜರು ನಮಗಿಂತ ಕಷ್ಟದ ಕೆಲಸಗಳನ್ನು ಬಿಸಿಲು, ಮಳೆ, ಚಳಿ ಎನ್ನದೇ ಮಾಡಿ ಸಂತುಷ್ಟರಾಗಿರುವುದನ್ನು ನಾವು ಕೇಳುತ್ತಿದ್ದೇವೆ ಮತ್ತು ಕೆಲವರು ನೋಡಿದ್ದೇವೆ., ಮೈಬಗ್ಗಿಸಿ ಕಠಿಣ ಕೆಲಸ ಮಾಡಿದಾಗ್ಯೂ ಕೂಡಾ ನಮ್ಮ ಪೂರ್ವಜರು ಇಂತಹ ಕೆಲಸದ ಒತ್ತಡವನ್ನು ಅನುಭವಿಸದೇ ಜೀವನವನ್ನು ಆನಂದಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಈಗಿನಂತೆ ಸಮೂಹ ಮಾಧ್ಯಮಗಳು ಅಥವಾ ಸಂಪರ್ಕ ಮಾಧ್ಯಮಗಳು ಇಲ್ಲದೇ ಇದ್ದರೂ ಕೂಡಾ ಇರುವ ಇತಿಮಿತಿಗಳಲ್ಲಿ ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಮನರಂಜನೆಯ ಸಾಧನಗಳ ಮೂಲಕ, ನಮ್ಮ ಹಿರಿಯರು ತಮ್ಮ ಜೀವನದ ಆನಂದವನ್ನು ಆಸ್ವಾದಿಸಿದ್ದನ್ನು ಕಾಣುತ್ತೇವೆ. ಅಧುನಿಕ ಭರಾಟೆಯ ಜೀವನ ಶೈಲಿಯ ಹೆಸರಿನಲ್ಲಿ ನಾವು ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಿಂದ ವಿಮುಖರಾಗುತ್ತಿದ್ದೇವೆ. ಆದ್ದರಿಂದ ಇಂತಹ ಗೊಂದಲದ ಜೀವನವನ್ನು ಅನುಭವಿಸುತ್ತಿದ್ದೇವೆ. ಸಂಗೀತ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕ ಇಂತಹ ಜಂಜಡಗಳಿಂದ ನಮಗೆ ಮುಕ್ತಿ ನೀಡಿ ಆನಂದದಾಯಕ ಜೀವನವನ್ನು ನೀಡುತ್ತದೆ. ಆದ್ದರಿಂದ ಇವುಗಳನ್ನು ನಾವು ಮೈಗೂಡಿಸಿಕೊಳ್ಳಬೇಕೆಂದು ಖ್ಯಾತ ನ್ಯಾಯವಾದಿ ರಾಜಶೇಖರ ಎಚ್. ಅಂಗಡಿಯವರು ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘವು 63 ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ 15 ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಇಂದು `ಸಿತಾರ ಸಂಜೆ' ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿತಾರ ತಂತಿವಾದ್ಯ ಪ್ರಕಾರವಾಗಿದ್ದು, ಭಾರತೀಯ ಸಂಸ್ಕೃತಿಯ ಮೂಲ ಶಾಸ್ತ್ರೀಯ ಸಂಗೀತವಾಗಿದೆ, ಸಿತಾರ ನುಡಿಸಿದಾಗ ಹೊರಹೊಮ್ಮುವ ಸಂಗೀತವಾಹಿನಿಗಳು ಮತ್ತು ತರಂಗಗಳು ಮನುಷ್ಯನ ಮೆದುಳನ್ನು ಚುರುಕುಗೊಳಿಸುತ್ತವೆ ಎಂದು ವೈದ್ಯಕೀಯ ಶಾಸ್ತ್ರದ ಅಧ್ಯಯನ ಹೇಳುತ್ತಿರುವುದು ಸಿತಾರವಾದನದ ಮಹತ್ವವನ್ನು ಎತ್ತಿತೋರಿಸುತ್ತದೆ ಎಂದರು.
ಸಂಘದ ಹಿರಿಯ ಸದಸ್ಯರಾದ ಪ್ರೊ. ಆರ್. ಎಸ್. ಹಿರೇಮಠ, ಎಂ. ಟಿ. ಮಲ್ಲಾಡದ, ಡಾ. ಚಂದ್ರಮೌಳಿ ನಾಯ್ಕರ, ನಿಂಗಣ್ಣ ಕುಂಟಿ(ಇಟಗಿ) ಹಾಗೂ ಅರುಣ ಹುಯಿಲಗೋಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ, ಡಾ. ಚಂದ್ರಮೌಳಿ ನಾಯ್ಕರ, ಸಂಘದ ಜೊತೆಗಿನ ತಮ್ಮ ಒಡನಾಟ ಹಾಗೂ ಸಂಘದ ಗ್ರಂಥಾಲಯದಲ್ಲಿ ತಾವು ಪುಸ್ತಕ ಎರವಲು ಪಡೆಯುತ್ತಾ ಓದಿ ಬೆಳೆದದ್ದನ್ನು ಮೆಲುಕು ಹಾಕಿ, ಗ್ರಂಥಾಲಯಕ್ಕೆ ತಮ್ಮ ಹಲವು ಗ್ರಂಥಗಳನ್ನು ಕಾಣಿಕೆ ನೀಡಿ, ಇಂದು ನಾವು ಏನಾದರೂ ಆಗಿದ್ದರೆ ಅದು ಸಂಘದ ಪ್ರೇರಣೆಯಿಂದ. ಸಂಘವು ಇಂದು ನಮ್ಮನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದು ನಮಗೆಲ್ಲ ಸಂತಸ ತಂದಿದೆ ಎಂದು ಹೇಳಿದರು.
ವೇದಿಕೆ ಮೇಲೆ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ, ಶಾಂತೇಶ ಗಾಮನಗಟ್ಟಿ ಉಪಸ್ಥಿತರಿದ್ದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ಸ್ವಾಗತಿಸಿದರು. ಪ್ರಫುಲ್ಲಾ ನಾಯಕ ಸನ್ಮಾನಿತರನ್ನು ಪರಿಚಯಿಸಿದರು. ಶಂಕರ ಕುಂಬಿ ವಂದಿಸಿದರು. ಕದಳಿ ಮಹಿಳಾ ವೇದಿಕೆಯ ಸದಸ್ಯರಾದ ಶಾರದಾ ಕೌದಿ ಹಾಗೂ ಸಂಗಡಿಗರು ಕನ್ನಡ ಗೀತೆ ಹಾಡಿದರು.
ಖ್ಯಾತ ಸಿತಾರವಾದಕ ಧಾರವಾಡದ ಪಂ. ಮೊಹಸಿನ್ ಖಾನ್ ಹಾಗೂ ಇಟಲಿಯ ಫುಲ್ವಿಯೋ ಕೊರೆನ್ ಅವರು ಸೊಗಸಾಗಿ ಸೀತಾರವಾದನ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರ ಮನಸೂರೆಗೊಂಡರು. ಇವರಿಗೆ ನಿಸಾರ ಅಹ್ಮದ ಹಾಗೂ ಕಾಶಿನಾಥ ಗಾಯಕವಾಡ ತಬಲಾ ಸಾಥ್ ನೀಡಿದರು.
ಪ್ರಭಾ ದತ್ತ ನೀರಲಗಿ ದಂಪತಿಗಳು, ಎಚ್. ಡಿ. ನದಾಫ್, ಕೆ. ಎಂ. ಕೊಪ್ಪದ, ಬಿ. ಕೆ. ಹೊಂಗಲ, ಚನಬಸಪ್ಪ ಅವರಾದಿ, ಚಂದ್ರಶೇಖರ ಅಮಿನಗಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.