ಸಂಘದ ಏಳಿಗೆಗೆ ಒಗ್ಗಟ್ಟಾಗಿ ಶ್ರಮಿಸಿ: ನಿಂಗನ್ನವರ

ಲೋಕದರ್ಶನ ವರದಿ

ಘಟಪ್ರಭಾ: ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಸಂಘದ ಏಳ್ಗೆಗೆ ದುಡಿಯಬೇಕೆಂದು ಸಂಘದ ಅಧ್ಯಕ್ಷ ದುಂಡಪ್ಪ ನಿಂಗನ್ನವರ ಹೇಳಿದರು.

ಅವರು ಶನಿವಾರದಂದು ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 42ನೇ ವಾಷರ್ಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಒಟ್ಟು 31 ಲಕ್ಷ 20 ಸಾವಿರ ರೂಗಳ ಲಾಭ ಹೊಂದಿದ್ದು ಇದಕ್ಕೆ ಸಂಘದ ಎಲ್ಲ ಸದಸ್ಯರು ಮತ್ತು ರೈತರು ಹಾಗೂ ಸಿಬ್ಬಂದಿಗಳ ಸಹಕಾರವೇ ಕಾರಣವಾಗಿದೆ. ರೈತ ಸದಸ್ಯರಿಗೆ ಶೇರ ಡಿವ್ಹಿಡೆಂಡ್ ಶೇ.10ರಷ್ಟು ನೀಡಲಾಗುವುದು. ಸಂಘವು 'ಅ' ವರ್ಗದಲ್ಲಿ ಪ್ರಗತಿ ನೋಟ ಸಾಧಿಸಿದ್ದು ತುಂಬಾ ಸಂತೋಷದಾಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದುಂಡಪ್ಪ ಚಿಗರಿತೋಟ, ಸದಸ್ಯರುಗಳಾದ ಲಕ್ಷ್ಮಣ ಕೋಳಿ, ಕೆಂಚಪ್ಪ ಮಂಟೂರ, ರಾಮಪ್ಪ ತಳವಾರ, ಲಗಮಪ್ಪ ಪೂಜೇರಿ, ಮಲ್ಲಪ್ಪ ಮಾಳ್ಯಾಗೋಳ, ಹಣಮಂತ ಚಿಪ್ಪಲಕಟ್ಟಿ, ವಿಕಾಸ ಪೂಜೇರಿ, ಸದಾಶಿವ ಅಂತರಗಟ್ಟಿ, ಇಂದ್ರವ್ವ ತಮದಡ್ಡಿ, ಶಾಂತವ್ವ ಶೀಳನವರ, ಡಿಸಿಸಿ ಬ್ಯಾಂಕ ಪ್ರತಿನಿಧಿ ಸನ್ನಿ ಅಶೋಕ ಪಾಟೀಲ ಇದ್ದರು.

ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ನಾರಾಯಣ ಜಡಕಿನ ಅವರು ವರದಿಯನ್ನು ವಾಚಿಸಿ ಸ್ವಾಗತಿಸಿದರು. ದುಂಡಪ್ಪ ಸಂಸುದ್ದಿ ನಿರೂಪಿಸಿದರು. ಲಕ್ಷ್ಮಣ ಝಲ್ಲಿ ವಂದಿಸಿದರು.