ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ

ಲೋಕದರ್ಶನ ವರದಿ

ಬೆಳಗಾವಿ 15:  ಇದೇ ದಿ.17ರಂದು ಸಂಚಾರ ದಿನದ ನಿಮಿತ್ಯ ಸಂಚಾರ ನಿಯಮ ಪಾಲನೆ ಜೀವ ರಕ್ಷಣೆ ಸಂದೇಶ ಹೊತ್ತ ಬೀದಿ ನಾಟಕವನ್ನು ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾಥರ್ಿಗಳಿಂದ ಗುರುವಾರ ಸಂಜೆ ಸಂಚಾರ ದಟ್ಟಣೆಯ ಟಿಳಕವಾಡಿಯ ದೇಶಮುಖ ಬೀದಿಯಲ್ಲಿ ಪ್ರದರ್ಶನ ನೀಡಿದರು. 

ಇರುವ ರಸ್ತೆಗಳಲ್ಲಿಯೇ ಸಂಚಾರಿ ನಿಯಮ ಪಾಲನೆಯ ಮೂಲಕ ಸುರಕ್ಷಿತ ಸಂಚಾರ ನಡೆಸುವುದು ಅಗತ್ಯವಿದೆ. ಅನ್ಯಮಸ್ಕರಾಗಿ ಅಥವಾ ನಿಸ್ಕಾಳಜಿಯಿಂದ ವಾಹನಗಳನ್ನು ಚಲಾಯಿಸಿದರೆ ಜೀವಕ್ಕೆ ಕುತ್ತು ಎದುರಾಗುತ್ತದೆ ಎಂದು ವಿದ್ಯಾರ್ಥಿಗಳು ನಾಟಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದರು. ಈ ಸುರಕ್ಷಿತ ಸಂಚಾರ ಸಂದೇಶವನ್ನು ವ್ಯಾಪಕವಾಗಿ ಸಾರುವ ಹಿನ್ನಲೆಯಲ್ಲಿ ಇದೇ 17ರಂದು ಆಚರಿಸಲಾಗುತ್ತಿರುವ ಸಂಚಾರಿ ದಿನದಂದು ಜೆಜಿಐ ಸಂಸ್ಥೆಯ ವಿವಿಧ ಕಾಲೇಜುಗಳ ಮೂಲಕ  ಭವ್ಯವಾಗಿ ಹಮ್ಮಿಕೊಳ್ಳಲಾಗಿರುವ ಸೈಕಲ್ ಮ್ಯಾರಾಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಅಂದಿನ ಸೈಕಲ್ ಮ್ಯಾರಾಥಾನದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾಲ್ಗೊಂಡು ಯಶಸ್ವಿಗೊಳಿಸಲಿದ್ದಾರೆ. ಬೀದಿ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಪಿಯು ಕಾಲೇಜಿ ಪ್ರಾಚಾಯಈ ರೋಹಿಣಿ ಕೆ.ಬಿ., ಪಲ್ಲವಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು