ಧಾರವಾಡ 16 : ತಾಲೂಕಿನ ಮರೇವಾಡ ಗ್ರಾಮದ ಬಳಿ ನಿಮರ್ಾಣ ಮಾಡಿರುವ ಟೋಲ್ ಗೇಟ್ ಮೂಲಕ ಸ್ಥಳೀಯ ಸರಕಾರಿ ಬಸ್ಗಳ ಟೋಲ್ ಶುಲ್ಕ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಿ, ಈ ಮೂಲಕ ಹೆಚ್ಚಳವಾಗಿರುವ ಬಸ್ ಪ್ರಯಾಣ ದರವನ್ನು ಕೂಡಲೇ ಇಳಿಸಬೇಕೆಂದು ಅಮ್ಮಿನಬಾವಿ ಆಝಾದ ಯುವಕ ಮಂಡಳದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಕಕರ್ಿ ಆಗ್ರಹ ಪಡಿಸಿದ್ದಾರೆ.
ಈಗಾಗಲೇ ವರದಿಯಾಗಿರುವಂತೆ ಅಮ್ಮಿನಬಾವಿ ಕ್ಷೇತ್ರದ ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ಜಿಲ್ಲಾಧಿಕಾರಿಗಳನ್ನು ಒಳಗೊಂಡಂತೆ ಇತರೇ ಸಂಬಂಧಿಸಿದ ಅಧಿಕಾರಿಗಳಿಗೆ ಟೋಲ್ ಶುಲ್ಕ ಸಂಗ್ರಹಿಸದಂತೆ ಪತ್ರ ಬರೆದಿದ್ದು, ಸಂಬಂಧಿಸಿದ ಇಲಾಖೆಗಳು ಯಾವುದೇ ಕ್ರಮವಹಿಸದೇ ಮೌನವಾಗಿರುವುದನ್ನು ಕಕರ್ಿ ಖಂಡಿಸಿದ್ದಾರೆ. ಜನಸಾಮಾನ್ಯರಿಗೆ ಆಥರ್ಿಕವಾಗಿ ಹೊರೆಯಾಗುವುದನ್ನು ತಪ್ಪಿಸಲು ಧಾರವಾಡ ನಗರದಿಂದ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಪುಡಕಲಕಟ್ಟಿ ಮುಂತಾದ ಗ್ರಾಮಗಳಿಗೆ ಸಂಚರಿಸುವ ಸಬ್ಅರ್ಬನ್ ಸಿಟಿಬಸ್ಗಳಿಗೆ ಟೋಲ್ ಶುಲ್ಕ ಸಂಗ್ರಹದಿಂದ ಎಷ್ಟು ಸಾಧ್ಯವೋ ಅಷ್ಟು ಬೇಗನೇ ವಿನಾಯತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಚೋಳನ್ ದಂಪತಿ ಗಮನಿಸಲಿ : ಜಿಲ್ಲಾ ಆಡಳಿತದ ವರಿಷ್ಠರಾಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿದರ್ೆಶಕ ರಾಜೇಂದ್ರ ಚೋಳನ್ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಜಂಟಿಯಾಗಿ ಸಂಬಂಧಿಸಿದ ಅಧಿಕಾರಿಗಳ ತುತರ್ುಸಭೆ ನಡೆಸುವ ಮೂಲಕ ಆದಷ್ಟೂ ಶೀಘ್ರವಾಗಿ ಸ್ಥಳೀಯ ಸರಕಾರಿ ಬಸ್ಗಳ ಟೋಲ್ ಶುಲ್ಕ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಬೇಕು. ಜೊತೆಗೆ ಪ್ರಸ್ತುತ ಧಾರವಾಡ-ಅಮ್ಮಿನಬಾವಿ ಹಾಗೂ ಧಾರವಾಡ-ಮರೇವಾಡ ಮಧ್ಯೆ ಹೆಚ್ಚಳವಾಗಿರುವ 3 ರೂ. ಪ್ರಯಾಣ ದರವನ್ನು ಇಳಿಕೆ ಮಾಡಿ ಈ ಹಿಂದಿನಂತೆ 15 ರೂ.ಗಳಿಗೇ ನಿಗದಿಗೊಳಿಸಬೇಕು. ಇದರಂತೆ ಇತರೇ ಗ್ರಾಮಗಳ ಪ್ರಯಾಣದರಗಳಲ್ಲಿ ಆಗಿರುವ ಹೆಚ್ಚಳವನ್ನೂ ಸಹ ಕಡಿಮೆ ಮಾಡಬೇಕೆಂದು ಪ್ರಕಾಶ ಕಕರ್ಿ ಮನವಿ ಮಾಡಿದ್ದಾರೆ.
ಜನ ದಂಗೆ ಎದ್ದಾರು ! : ಮಹಾನಗರಗಳಿಂದ 20 ಕಿ.ಮೀ. ಒಳಗಡೆ ಸ್ಥಳೀಯ ಸರಕಾರಿ ಬಸ್ಗಳಿಗೆ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹ ಮಾಡುತ್ತಿರುವುದು ಹಾಗೂ ಏಕಾಏಕಿ 3 ರೂ. ಪ್ರಯಾಣ ದರ ಹೆಚ್ಚಳವು ಪ್ರಸ್ತುತ ನಿತ್ಯವೂ ಸಾರ್ವಜನಿಕವಾಗಿ ಬಹು ಚಚರ್ಿತ ವಿಷಯವಾಗಿದ್ದು, ಯಾವುದೇ ಕ್ಷಣದಲ್ಲಿ ಹಳ್ಳಿಗಾಡಿನ ಜನ ದಂಗೆ ಏಳುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದೂ ಸಹ ಅಗತ್ಯವಾಗಿದೆ. ಬಡ ಕೃಷಿ ಕಾಮರ್ಿಕರು, ಕಟ್ಟಡ ಕಾಮರ್ಿಕರು ಹಾಗೂ ದಿನಗೂಲಿ ನೌಕರರು ನಿತ್ಯವೂ ಸುಮಾರು 10 ಸಾವಿರಕ್ಕೂ ಅಧಿಕ ಮೊತ್ತವನ್ನು ಪ್ರಯಾಣದರ ಹೆಚ್ಚಳದಿಂದ ಕಳೆದುಕೊಳ್ಳುತ್ತಿದ್ದಾರೆ ಎಂದು ಕಕರ್ಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.