ಲೋಕದರ್ಶನ ವರದಿ
ವಿಜಯಪುರ 14: ಹಾಸನದ ಬಿಜೆಪಿ ಶಾಸಕ ಪ್ರೀತಮ್ಗೌಡ ಅವರ ನಿವಾಸದ ಮೇಲೆ ಅಲ್ಲಿನ ಜೆಡಿಎಸ್ ಕಾರ್ಯಕರ್ತರು ನಡೆಸಿರುವ ದಬ್ಬಾಳಿಕೆ ಹಾಗೂ ಗುಂಡಾ ವರ್ತನೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದ ಗಾಂಧೀ ವೃತ್ತದ ಬಳಿ ಪ್ರತಿಭಟನೆ ನಡೆಸಿ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಬಿಜೆಪಿ ಶಾಸಕ ಪ್ರಿತಮ್ಗೌಡ ಅವರ ಮನೆಯ ಮೇಲೆ ದಾಳಿ ಮಾಡಿರುವುದು ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾಗಿದೆ. ಮುಖ್ಯಮಮತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್.ಡಿ. ರೇವಣ್ಣ ಇವರ ಕುಮ್ಮಕ್ಕಿನಿಂದ ಪ್ರಿತಮ ಗೌಡರ ಮನೆಯ ಮೇಲೆ ದಾಳಿ ನಡೆದಿದೆ. ಗುಂಡಾವರ್ತನೆ ನಡೆಸಿದ ಜೆಡಿಎಸ್ ಕಾರ್ಯಕರ್ತರ ವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಬಿರಾದಾರ ಮಾತನಾಡಿ, ಬಿಜೆಪಿ ಶಾಸಕ ಪ್ರಿತಮ್ಗೌಡ ಅವರ ಮನೆ ಮೇಲೆ ಕಲ್ಲು ತೋರಾಟ ಮಾಡಿದ್ದು ಗುಂಡಾಗೀರಿ ವರ್ತನೆಯಾಗಿದೆ. ಒಬ್ಬ ಶಾಕಸರ ಮನೆಗೆ ಕಲ್ಲು ಎಸಗಿರುವುದು ಖಂಡನೀಯ. ಇದು ಯಾರಿಗೂ ಶೋಭೆ ತರುವುದಲ್ಲ ಎಂದು ರಾಜ್ಯ ಸಕರ್ಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದಲ್ಲಿ ಸಮ್ಮಿಶ್ರ ಸಕರ್ಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲಗೊಂಡಿದೆ. ಎಂದರು.
ಬಿಜೆಪಿ ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು. ಬಿಜೆಪಿ ಶಾಸಕರಿಗೆ, ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಎಂದು ಸರಕಾರವನ್ನು ಒತ್ತಾಯಿಸಿದರು.
ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದಶರ್ಿಗಳಾದ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ರವಿಕಾಂತ ಬಗಲಿ, ಭೀಮಾಶಂಕರ ಹದನೂರ, ಚಿದಾನಂದ ಚಲವಾದಿ, ಮಳುಗೌಡ ಪಾಟೀಲ, ರಾಜು ವಾಲಿ, ಸಂಜು ಪಾಟೀಲ ಕನಮಡಿ, ವಿಜಯ ಜೋಶಿ, ರಾಜೇಶ ತೌಸೆ, ಸಿದ್ದು ಮಲ್ಲಿಕಾಜರ್ುನ ಮಠ, ವಿನಾಯಕ ದಹಿಂಡೆ, ರಮೇಶ ದೇವಕರ, ಭರತ ಕೋಳಿ, ಶ್ರೀನಿವಾಸ ಬೆಟಗೇರಿ, ಕೃಷ್ಣಾ ಗುಣಾಳಕರ, ವಿಠ್ಠಲ ನಡುವಿನಕೇರಿ, ಬಸವರಾಜ ಬಿರಾದಾರ, ಬಸವರಾಜ ಬೈಚಬಾಳ, ಬಸವರಾಜ ಕುರುವಿನಶೆಟ್ಟಿ, ಪಾಪುಸಿಂಗ್ ರಜಪೂತ, ಉಮೇಶ ವೀರಕರ, ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಮಹೇಶ ಒಡೆಯರ, ಸತೀಶ ಜೊಬಳೆ, ರಾಜು ಹೊನ್ನೂರ, ಶಿವು ಸಿಂದಗಿ, ಸೋಮು ಮಠ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.