ವ್ಯಸನಗಳಿಂದ ದೂರವಿದ್ದು, ನೆಮ್ಮದಿಯ ಜೀವನ ನಡೆಸಿ: ಡಾ. ಹಳಿಂಗಳೆ

Stay away from addictions and live a peaceful life: Dr. Date palm

 ವ್ಯಸನಗಳಿಂದ ದೂರವಿದ್ದು, ನೆಮ್ಮದಿಯ ಜೀವನ ನಡೆಸಿ: ಡಾ. ಹಳಿಂಗಳೆ 

ಕಾಗವಾಡ: ಇಂದಿನ ಯುವ ಜನತೆ ವ್ಯಸನಗಳಿಗೆ ದಾಸರಾಗಿ ಶಾರೀರಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಯುವಕರು ವ್ಯಸನಗಳಿಂದ ದೂರವಿದ್ದು, ನೆಮ್ಮದಿಯ ಜೀವನ ತಮ್ಮದಾಗಿಸಿಕೊಳ್ಳಬೇಕೆಂದು ಮಿರಜ್‌ನ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದ್ದಾರೆ. ಅವರು ಇತ್ತಿಚಿಗೆ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಟಾಕಳಿ-ಬೋಲವಾಡದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಗುರುದೇವ ತಪೋವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಗಶಿರ ಪೊರ್ಣಿಮೆಯಂದು ಹಮ್ಮಿಕೊಂಡಿದ್ದ ಯುವಕರಲ್ಲಿ ವ್ಯಸನಮುಕ್ತಿ ಮತ್ತು ನೆಮ್ಮದಿಯ ಜೀವನದ ಕುರಿತು ನಡೆದ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.  ಕಾರ್ಯಕ್ರಮದಲ್ಲಿ ಡಾ. ಚಂದ್ರೇಶಖರ ಹಳಿಂಗಳೆ, ಡಾ. ನಿಶಾ ಹಳಿಂಗಳೆ, ಮತ್ತು ನಿರ್ಮಲಾ ಹಳಿಂಗಳೆ ಇವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರಹಳಿಂಗಳೆ, ಡಾ. ನಿಶಾ ಹಳಿಂಗಳೆ ಮತ್ತು ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುದೇವ ತಪೋವನದ ಪ.ಪೂ. ಶಿವದೇವ ಶ್ರೀಗಳು, ತಪೋವನದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.