ಮನೆಯಲ್ಲೇ ಇದ್ದು ಕೊರೊನಾ ನಿರ್ಮೂಲನೆಗೆ ಸಹಕರಿಸಿ

ಲೋಕದರ್ಶನ ವರದಿ

ಮುದ್ದೇಬಿಹಾಳ 14: ಕೊರೊನಾ ತಡೆಗಟ್ಟಲು ಪಾಲಿಸಬೇಕಾದ ನಿಯಮ, ಲಾಕ್ಡೌನ್ ಕಡ್ಡಾಯವಾಗಿ ಪಾಲಿಸುವ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹಮ್ಮಿಕೊಂಡಿರುವ ಕೊರೊನಾ ಜನಜಾಗೃತಿ ಪ್ರಚಾರ ಕಾರ್ಯಕ್ಕೆ ಶನಿವಾರ ಸಂಜೆ ತಹಸೀಲ್ದಾರ್ ಜಿ.ಎಸ್.ಮಳಗಿ ಚಾಲನೆ ನೀಡಿದರು. 

ಪತ್ರಕರ್ತರೂ ಸಹಿತ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಪತ್ರಕರ್ತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ಕೂ ಮುಂದಾಗಿ ತಾಲೂಕಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಸಾರ್ವಜನಿಕರು ಲಾಕ್ಡೌನ್ ಮುಗಿಯುವತನಕ ಮನೆಯಲ್ಲೇ ಇದ್ದು ಕೊರೊನಾ ನಿರ್ಮೂಲನೆಗೆ ಸಹಕರಿಸಬೇಕು ಎಂದರು. ಸಂಘದ ಅಧ್ಯಕ್ಷ ಎ.ಎಲ್.ಮುಲ್ಲಾ ಪ್ರಚಾರ ಕಾರ್ಯದ ಉದ್ದೇಶದ ಕುರಿತು ಮಾತನಾಡಿದರು. 

ಪಟ್ಟಣದ ಪ್ರತಿಯೊಂದು ಬಡಾವಣೆಗೆ ಸಂಚರಿಸುವ ಪ್ರಚಾರ ವಾಹನವು ಕೊರೊನಾದಿಂದ ರಕ್ಷಣೆ, ಲಾಕ್ಡೌನ್ ಪಾಲನೆಯ ಅವಶ್ಯಕತೆ, ಬೇರೆ ಜಿಲ್ಲೆಯವರು ಬಂದಲ್ಲಿ ಅಂಥವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಸೇರಿ ಹಲವು ಮಹತ್ವದ ಅಂಶಗಳನ್ನು ಅಭಿಯಾನವು ಒಳಗೊಂಡಿದೆ ಎಂದು ಸಂಘದ ಪದಾಧಿಕಾರಿ ಶಿವಕುಮಾರ ಶಾರದಳ್ಳಿ ತಿಳಿಸಿದರು. ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ ಮಾರ್ಗದರ್ಶನ ನೀಡಿದರು. ಪಶುಸಂಗೋಪನೆ ಇಲಾಖೆಯ ಸಹಾಯಕ ನಿದರ್ೇಶಕ ಡಾ. ಎಸ್.ಸಿ.ಚೌಧರಿ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕ ಎನ್.ಆರ್.ಉಂಡಿಗೇರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೀದ ನಾಯ್ಕೋಡಿ, ಸಂಘದ ಉಪಾಧ್ಯಕ್ಷ ಗುರುನಾಥ ಕತ್ತಿ, ಸದಸ್ಯ ಪತ್ರಕರ್ತರಾದ ಮುತ್ತು ವಡವಡಗಿ, ಲಾಳೇಮಶ್ಯಾಕ ನದಾಫ, ಸಾಗರ ಉಕ್ಕಲಿ, ಪರಶುರಾಮ ಕೊಣ್ಣೂರ, ನೂರೇನಬಿ ನದಾಫ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಕಾರ್ಯಕ್ರಮದ ನಂತರ ಆಟೋಕ್ಕೆ ಸ್ಪೀಕರ್ ಅಳವಡಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಲಾಯಿತು.