ವೀರಯೋಧ ದಿ.ಚಂದ್ರು ಡವಗಿ ಅವರ ಪುಥ್ಥಳಿ ಅನಾವರಣ
ಶಿಗ್ಗಾವಿ 23: ನಮ್ಮ ಯೋಧರು ದೇಶ ಸೇವೆಯ ಸಲುವಾಗಿ ತನ್ನ ತಂದೆ ತಾಯಿ ಮಡದಿ ಮಕ್ಕಳನ್ನದೇ ಇಡೀ ಕುಟುಂಬವನ್ನೆ ತೊರೆದು ದೇಶದ ಭದ್ರತೆಗೆಂದು ತಮ್ಮ ಜೀವನವನ್ನು ಮುಡುಪಾಗಿಟ್ಟು ಕೆಲಸ ಮಾಡುತ್ತಾರೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದ ಹುತಾತ್ಮ ವೀರಯೋಧ ದಿ.ಚಂದ್ರು ಡವಗಿರವರ ಪುಥ್ಥಳಿ ಅನಾವರಣ ಮಾಡಿ ಮಾತನಾಡಿದ ದುಂಡಿಗೌಡ್ರ ಅವರು ಸೈನಿಕರು ಅಪ್ರತಿಮ ದೇಶಭಕ್ತರು ಅನೇಕ ಯೋಧರು ಅಲ್ಲಿಯೇ ವೀರಮರಣವನ್ನು ಹೊಂದುತ್ತಾರೆ.ಅಂತಹ ವೀರಯೋಧರಿಗೆ ನಮ್ಮ ಸಮಾಜ ಹೆಚ್ಚಿನ ಗೌರವವನ್ನು ಮತ್ತು ಅವರನ್ನು ದೇಶಸೇವೆಗೆಂದು ಕಳುಹಿಸಿ ಕೊಟ್ಟಂತಹ ಅವರ ಕುಟುಂಬಸ್ಥರಿಗೂ ಸಹ ಗೌರವವನ್ನು ನೀಡಬೇಕು. ಸರ್ಕಾರ ಅವರಿಗೆ ವಿಶೇಷ ಸೌಲಭ್ಯವನ್ನೂ ಕಲ್ಪಿಸಿ ಕೊಡಬೇಕು ಎಂದರು. ಈಶ್ವರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿಶಿವಾನಂದ ರಾಮಗೇರಿ,ಮಾಲತೇಶ ಬಿಜ್ಜೂರ, ಈಶ್ವರಗೌಡ ಪಾಟೀಲಬಸನಗೌಡ ಮೂಲಿಮನಿ, ಶಂಬಣ್ಣ ರಾಮಗೇರಿ, ಉಳವಣಗೌಡ ಪಾಟೀಲ,ಬಸಪ್ಪ ಬದ್ರಶೆಟ್ಟಿನಿವೃತ್ತ ಯೋಧ ಎಂ ಯು ಭರಮಗೌಡ್ರ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ದುಂಡಪ್ಪನವರ, ಮಹದೇವಪ್ಪ ತಳವಾರ, ಶಂಕರ ಗೊಬ್ಬಿ,ರೇಣವ್ವ ಬಿಷೆಟ್ಟಿ, ಶಿವಾನಂದ ಬಿಷೆಟ್ಟಿ, ಶಿವಪ್ಪ ದುಂಡಪ್ಪನವರಬಸವಣ್ಣೆವ್ವ ಡವಗಿ, ಹುತಾತ್ಮ ಯೋಧನ ಪತ್ನಿ ಶಿಲ್ಪಾ ಡವಗಿ ಹಾಗೂ ಗ್ರಾಮದ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದ್ದರು.ಮಂಜುನಾಥ ಬಿಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಭಾಕ್ಸ ಸುದ್ದಿ : ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದ ಹುತಾತ್ಮ ವೀರಯೋಧ ದಿ. ಚಂದ್ರು ಡವಗಿರವರ ಪುಥ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪುಥ್ಥಳಿ ಅನಾವರಣ ಮಾಡಿ ಶಿಗ್ಗಾವಿ ಐಟಿಐ ಕಾಲೇಜಿಗೆ ಹುತಾತ್ಮ ಯೋಧ ಚಂದ್ರು ಡವಗಿರವರ ಹೆಸರಿಡಲು ಆಗ್ರಹಿಸಿದರು.