ಅಂಬೇಡ್ಕರ್ ಕುರಿತ ಹೇಳಿಕೆ ವಿವಾದ: ಅಮಿತ್ ಷಾ ರಾಜೀನಾಮೆ ನೀಡಿ: ನಾಗರಾಜ

Statement controversy on Ambedkar: Amit Shah resigns: Nagaraj

ಅಂಬೇಡ್ಕರ್ ಕುರಿತ ಹೇಳಿಕೆ ವಿವಾದ: ಅಮಿತ್ ಷಾ ರಾಜೀನಾಮೆ ನೀಡಿ: ನಾಗರಾಜ

ಬಳ್ಳಾರಿ 20: ಸಂವಿಧಾನದತ್ತವಾದ  ಕೇಂದ್ರ ಗೃಹ ಸಚಿವ ಸ್ಥಾನದಲ್ಲಿದ್ದುಕೊಂಡು, ಸಂವಿಧಾನದ ನಿರ್ಮಾತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆ ಕಲಾಪದಲ್ಲಿ ಕೀಳಾಗಿ ಮಾತನಾಡುವ ಮೂಲಕ ಅಮಿತ್ ಷಾ ಅವರು ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಇವರ ಮೇಲೆ ಕೂಡಲೇ ಕೇಸ್ ದಾಖಲಿಸಬೇಕು ಎಂದು ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಆಗ್ರಹಿಸಿದ್ದಾರೆ.   

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಂಬೇಡ್ಕರ್ ಅವರ ಹೆಸರು ಹೇಳುವುದು ಶೋಕಿ ಆಗಿಬಿಟ್ಟಿದೆ, ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಅಮಿತ್ ಷಾ ಅವರು ಹೀಯಾಳಿಸಿರುವುದು ಅವರ ಮನುವಾದವನ್ನು ಬಿಂಬಿಸುತ್ತದೆ. ‘ಮನುಸ್ಮೃತಿ’ಗೆ ಬೆಲೆ ನೀಡುವ ಬಿಜೆಪಿಯವರಿಗೆ ಭಾರತೀಯ ಸಂವಿಧಾನ ಮತ್ತು ಅದನ್ನು ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ ಅಂಬೇಡ್ಕರ್ ಅವರ ಬಗ್ಗೆ ಇರುವ ನಿಜವಾದ ಅಭಿಪ್ರಾಯವನ್ನು ಷಾ ಅವರು ಹೊರಹಾಕಿದ್ದಾರೆ ಎಂದು ಕಟು ಮಾತುಗಳಲ್ಲಿ ಅವರು ಟೀಕಿಸಿದ್ದಾರೆ. “ಅಂಬೇಡ್ಕರ್ ಅವರು, ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡವರ ದಾರಿ ದೀಪವಾಗಿದ್ದಾರೆ. ಬಿಜೆಪಿಯು ಭಾರತೀಯ ಸಂವಿಧಾನಕ್ಕಿಂತ ಆರ್‌ಎಸ್‌ಎಸ್ ಮನುವಾದಕ್ಕೆ ಆದ್ಯತೆ ನೀಡಿದೆ. ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿದ ಷಾ, ಈ ಹಿಂದೆ ಗುಜರಾತ್ ರಾಜ್ಯದಿಂದ ಗಡಿಪಾರು ಆದವರು. ಇವರಿಗೆ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆಯೇ ಇಲ್ಲ. ಗಡಿಪಾರಾಗಿ ಬಂದಂತಹ ವ್ಯಕ್ತಿಗೆ ಕೇಂದ್ರ ಸಚಿವ ಸ್ಥಾನ ನೀಡಿರುವುದೇ ತಪ್ಪು” ಎಂದು ಕಿಡಿ ಕಾರಿದ್ದಾರೆ.   

   ಮನುಸ್ಮೃತಿಯನ್ನು ಸುಟ್ಟುಹಾಕಿ ಮನುವಾದದ ವಿರುದ್ಧ ರಣ ಕಹಳೆ ಊದಿದ್ದ ಅಂಬೇಡ್ಕರ್ ಎಂದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ನವರಿಗೆ ಕನಸಿನಲ್ಲಿಯೂ ಭಯ ಕಾಡುತ್ತದೆ. ಕಾರ​‍್ೋರೇಟ್ ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ತರುತ್ತಿರುವ ಹೊಸ ಹೊಸ ಕಾಯ್ದೆ, ಕಾನೂನುಗಳಿಗೆ ಅಂಬೇಡ್ಕರ್ವಾದಿಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಜ್ಞೆ ಹಾಗೂ ಇಡೀ ದೇಶದ ಶೋಷಿತ ಸಮುದಾಯಗಳು ತಡೆಯೊಡ್ಡುತ್ತಿರುವುದರಿಂದ ಒತ್ತಡಕ್ಕೊಳಗಾಗಿರುವ ಆಮಿತ್ ಷಾ ಅವರು ಈ ರೀತಿ ಕಲಾಪದಲ್ಲಿಯೇ ಬಹಿರಂಗವಾಗಿ ಅಂಬೇಡ್ಕರ್ ಅವರ ಬಗ್ಗೆ ಹೀಯಾಳಿಕೆಯ ಮಾತುಗಳನ್ನಾಡಿದ್ದಾರೆ.    ಸಂವಿಧಾನ ಮತ್ತು ಡಾ.ಬಾಬಾ ಸಾಹೇಬರ ಆಶಯಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವುದು ಖಂಡನಾರ್ಹ. ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಮುಂಡರಗಿ ನಾಗರಾಜ ತಿಳಿಸಿದ್ದಾರೆ.