ಜ.6ರಂದು ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
State-level science exhibition on January 6th
ಧಾರವಾಡ 03: ಶಾಲಾ ಶಿಕ್ಷಣ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿ, ಬೆಂಗಳೂರು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಸಹಯೋಗದೊಂದಿಗೆ 2025-26ನೇ ಸಾಲಿನ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಇದೇ ಜನವರಿ 6ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ, ರಾಯಾಪುರದಲ್ಲಿ ಆಯೋಜಿಸಲಾಗಿದೆ.ಸದರಿ ಕಾರ್ಯಕ್ರಮದಲ್ಲಿ ರಾಜ್ಯದ 35 ಜಿಲ್ಲೆಗಳಿಂದ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಗುಂಪು ವಿಭಾಗದಿಂದ ಹಾಗೂ ಶಿಕ್ಷಕರ ವಿಭಾಗದಿಂದಲೂ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ವಿಜಯಶಾಲಿಯಾದವರು ತೆಲಂಗಾಣದಲ್ಲಿ ನಡೆಯುವ ದಕ್ಷಿಣ ಭಾರತ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅರ್ಹತೆ ಪಡೆಯುವರು.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು:
ಕಾರ್ಯಕ್ರಮದ ಘನ ಉಪಸ್ಥಿತಿ ಪ್ರಲ್ಹಾದ ಜೋಶಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವರು ಭಾರತ ಸರ್ಕಾರ, ನವದೆಹಲಿ. ಬಸವರಾಜ ಹೊರಟ್ಟಿ, ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂತೋಷ.ಎಸ್.ಲಾಡ್, ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ನೆರವೇರಿಸುವರು. ಗೌರವ ಉಪಸ್ಥಿತಿ ಮಧು ಬಂಗಾರ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ವಹಿಸುವರು. ವಿಶೇಷ ಅಥಿತಿಗಳಾಗಿ ಸಲೀಂ ಅಹ್ಮದ್, ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್. ಅಬ್ಬಯ್ಯ ಪ್ರಸಾದ, ಅಧ್ಯಕ್ಷರು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರು ವಿಧಾನಸಭೆ ಹುಬ್ಬಳ್ಳಿ-ಧಾರವಾಡ(ಪೂರ್ವ), ಭರಮಗೌಡ್ರ(ರಾಜು)ಅಲಗೌಡ ಕಾಗೆ, ಅಧ್ಯಕ್ಷರು, ವಾಯುವ್ಯ ಸಾರಿಗೆ ನಿಗಮ ನಿಯಮಿತ ಹಾಗೂ ಶಾಸಕರು, ವಿಧಾನಸಭೆ, ಕಾಗವಾಡ, ಸೈಯದ್ ಅಜೀಮ್‌ಪೀರ ಎಸ್.ಖಾದ್ರಿ, ಅಧ್ಯಕ್ಷರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರವಿಂದ ಬೆಲ್ಲದ, ಶಾಸಕರು, ವಿಧಾನಸಭೆ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ವಹಿಸುವರು.
ಮುಖ್ಯ ಅತಿಥಿಗಳಾಗಿ ವಿನಯ ಕುಲಕರ್ಣಿ ಶಾಸಕರು, ವಿಧಾನಸಭೆ, ಧಾರವಾಡ (ಗ್ರಾ), ಎನ್‌ಹೆಚ್ ಕೋನರಡ್ಡಿ, ಶಾಸಕರು, ವಿಧಾನಸಭೆ, ನವಲಗುಂದ, ಎಸ್‌ವಿ ಸಂಕನೂರ, ಶಾಸಕರು, ವಿಧಾನ ಪರಿಷತ್, ಪ್ರದೀಪ ಶೆಟ್ಟರ, ಶಾಸಕರು, ವಿಧಾನ ಪರಿಷತ್, ಮಹೇಶ ಟೆಂಗಿನಕಾಯಿ, ಶಾಸಕರು, ವಿಧಾನ ಸಭೆ, ಹುಬ್ಬಳ್ಳಿ-ಧಾರವಾಡ(ಕೇಂದ್ರ), ಎಂ.ಆರ್ ಪಾಟೀಲ, ಶಾಸಕರು, ವಿಧಾನಸಭೆ, ಕುಂದಗೋಳ, ಎಫ್‌ಎಚ್ ಜಕ್ಕಪ್ಪನವರ, ಶಾಸಕರು, ವಿಧಾನ ಪರಿಷತ್, ಸಂಗಮೇಶ ಅಪ್ಪಾಜಿ ಬಬಲೇಶ್ವರ, ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ, ಶಿವಲೀಲಾ ಕುಲಕರ್ಣಿ ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಾಗೇಂದ್ರ ಕುಮಾರ, ಅಧ್ಯಕ್ಷರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ, ಜ್ಯೋತಿ ಪಾಟೀಲ, ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಶಾಕಿನ್ ಸವದಿ, ಅಧ್ಯಕ್ಷರು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ನವನಗರ, ಹುಬ್ಬಳ್ಳಿ, ಎಸ್‌ಆರ್ ಪಾಟೀಲ, ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಧಾರವಾಡ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಡಾ.ರಾಮಪ್ರಸಾತ್ ಮನೋಹರ ವಿ, ಅಧ್ಯಕ್ಷರು ಬೆಂಗಳೂರು ಜಲಮಂಡಳಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಧಾರವಾಡ ಜಿಲ್ಲೆ, ಜಾನಕಿ ಕೆ ಎಂ, ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ದಿವ್ಯ ಪ್ರಭು ಜಿಆರ್‌ಜೆ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಧಾರವಾಡ, ಎನ್ ಶಶಿಕುಮಾರ, ಪೋಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ, ಪಾಟೀಲ ಭುವನೇಶ ದೇವಿದಾಸ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಧಾರವಾಡ, ರುದ್ರೇಶ ಘಾಳಿ, ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಡಾ. ಈಶ್ವರ ಉಳ್ಳಾಗಡ್ಡಿ, ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ, ಗೋಪಾಲಕೃಷ್ಣ ಎಚ್‌ಎನ್, ನಿರ್ದೇಶಕರು, ಡಿಎಸ್‌ಇಆರ್‌ಟಿ, ಬೆಂಗಳೂರು, ಡಾ.ಬಿಕೆಎಸ್ ವರ್ಧನ್, ನಿರ್ದೇಶಕರು, ಸಿಸ್ಲೆಪ್, ಧಾರವಾಡ, ಭಾರತಿ, ನಿರ್ದೇಶಕರು, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಆಯುಕ್ತರ ಕಚೇರಿ, ಬೆಂಗಳೂರು, ಈಶ್ವರ ನಾಯಕ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಚೇರಿ, ಧಾರವಾಡ, ಜಯಶ್ರೀ ಕಾರೇಕರ, ಸಹನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಚೇರಿ, ಧಾರವಾಡ, ಸಾಬೂ ಭಾಸ್ಕರನ್, ನಿರ್ದೇಶಕರು, ವಿಐಟಿಎಂ, ಬೆಂಗಳೂರು, ಎಸ್.ಶಂಕರ, ಪ್ರಾಂಶುಪಾಲರು(ಸಿಟಿಇ) ಹಾಗೂ ಸಹನಿರ್ದೇಶಕರು, ಬೆಳಗಾವಿ ಭಾಗವಹಿಸಲಿದ್ದಾರೆ ಎಂದು ಉಪನಿರ್ದೇಶಕರು(ಅಭಿವೃದ್ಧಿ) ಹಾಗೂ ಡಯಟ್ ಪ್ರಾಚಾರ್ಯರಾದ ಬಸವರಾಜ ನಾಲತವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 