ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆ: ಜೆ.ಎಸ್‌.ಎಸ್ ವಿದ್ಯಾರ್ಥಿನಿಯರ ಸಾಧನೆ

State level gymnastics competition: Achievement of J.S.S

ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆ: ಜೆ.ಎಸ್‌.ಎಸ್ ವಿದ್ಯಾರ್ಥಿನಿಯರ ಸಾಧನೆ 

ಧಾರವಾಡ 21: ಮಂಗಳೂರಿನ ಆತಿಥ್ಯದಲ್ಲಿ ಬೆಂಗಳೂರಿನ ಕಂಠಿರವ ಸ್ಟೇಡಿಯಂನಲ್ಲಿ ಜರುಗಿದ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ವಿದ್ಯಾರ್ಥಿನಿ ಕು. ರಕ್ಷಿತಾ ಗೊರವರ ಸಿಂಗಲ್ ರಿದಮಿಕ್, ಏರೋಬಿಕ್ಸ್‌ ಗ್ರುಪ್, ರಿದಮಿಕ್ ಗ್ರುಪ್ ನಲ್ಲಿ 3 ಬೆಳ್ಳಿಯ ಪದಕ ಮತ್ತು ಹೂಪ್ ವಯಕ್ತಿಕ ಸ್ಪರ್ಧೆ, ಕ್ಲಬ್, ರಿಬ್ಬನ್, ವಯಕ್ತಿಕ ವೀರಾಗ್ರಣಿ, ಏರೋಬಿಕ್ ಟ್ರೇಯೋದಲ್ಲಿ ಒಟ್ಟಾರೆ 5 ಕಂಚಿನ ಪದಕ ಪಡೆದಿದ್ದಾಳೆ. 

ಜೆ.ಎಸ್‌.ಎಸ್ ಆರ್‌.ಎಸ್ ಹುಕ್ಕೆರಿಕರ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಮಾನೆ ರಿದಮಿಕ್ ಗ್ರುಪ್ ಮತ್ತು ಏರೋಬಿಕ್ ಗ್ರುಪ್‌ನಲ್ಲಿ 2 ಬೆಳ್ಳಿಯ ಪದಕ ಮತ್ತು ಪ್ಲೋರ್ ಇವೆಂಟ್, ಏರೋಬಿಕ್ಸ್‌ ಟ್ರೇಯೋ, ಟೀಂ ಚಾಂಪಿಯನ್‌ನಲ್ಲಿ 3 ಕಂಚಿನ ಪದಕ ಪಡೆದಿದ್ದಾಳೆ. 

ಸಾಧನೆಗೈದ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಪ್ರಾಚಾರ್ಯೆ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.