ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

ಲೋಕದರ್ಶನ ವರದಿ

ಶಿಗ್ಗಾವಿ 28: ತಾಲೂಕಿನ ಗೋಟಗೋಡಿಯ ರಾಕ್ ಗಾರ್ಡನಲ್ಲಿ ನೆಡೆದ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ ಹುಬ್ಬಳ್ಳಿ ಏರ್ಪಡಿಸಿದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಆಶಾದೇವಿಯವರ "ನಾರಿಕೇಳಾ ಪುಸ್ತಕಕ್ಕೆ" ಅಕ್ಕ ಪ್ರಶಸ್ತಿ, ಡಾ. ಸಿ.ಕೆ.ನಾವಲಗಿಯವರು ರಚಿಸಿದ "ದೇಶಿ ಸಂಭ್ರಮ ಕೃತಿಗೆ" ಜಾನಪದ ಸಿರಿ ಪ್ರಶಸ್ತಿ, ಕುಮಾರ ಅಂತ:ಕರಣರವರು ರಚಿಸಿದ "ಮಿಂಚಿನ ಚಿಲುಮೆ ಕೃತಿಗೆ" ಅರಳುಮೊಗ್ಗು ಪ್ರಶಸ್ತಿಯನ್ನು ಟ್ರಸ್ಟನ ಅಧ್ಯಕ್ಷರಾದ ಶಾಸಕ ಬಸವರಾಜ ಬೊಮ್ಮಾಯಿಯವರು ವಿತರಿಸಿದರು. ರಾಕ್ ಗಾರ್ಡನ ರೂವಾರಿಗಳಾದ ಡಾ.ಟಿ.ಬಿ.ಸೊಲಬಕ್ಕನವರ, ಖ್ಯಾತ ತಜ್ಞ ವೈದ್ಯರು ಹಾಗೂ ಸಾಹಿತಿಗಳಾದ ಡಾ|| ವಿಜಯಲಕ್ಷ್ಮೀ ಬಾಳೆಕುಂದ್ರಿ , ಚಂದ್ರಶೇಖರ ವಸ್ತ್ರದ ಉಪಸ್ಥಿರಿದ್ದರು.