ರಾಜ್ಯ ಸರ್ಕಾರ ಜನಸಾಮಾನ್ಯರ ಜೀವನದೊಂದಿಗೆ ಚೈಲಾಟ : ನರಹರಿ ಕಟ್ಟಿ

State government playing with the lives of common people: Narhari Katti

ರಾಜ್ಯ ಸರ್ಕಾರ ಜನಸಾಮಾನ್ಯರ ಜೀವನದೊಂದಿಗೆ ಚೈಲಾಟ : ನರಹರಿ ಕಟ್ಟಿ

 ಶಿಗ್ಗಾವಿ 18 : ರಾಜ್ಯ ಸರ್ಕಾರ ಜನಸಾಮಾನ್ಯರ ಜೀವನದೊಂದಿಗೆ ಆಟವಾಡುವಂತಾಗಿದೆ. ಜನರ ಶ್ರೇಯಸ್ಸಿಗಾಗಿ ಸರ್ಕಾರಗಳು ತಮ್ಮ ಜವಾಬ್ದಾರಿಗಳನ್ನುಸಮರ​‍್ಕವಾಗಿ ನಿರ್ವಹಿಸಬೇಕು ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಸದಸ್ಯ ನರಹರಿ ಕಟ್ಟಿ ಹೇಳಿದರು.  ಪಟ್ಟಣದ ವರದಿಗಾರರೊಂದಿಗೆ  ಮಾತನಾಡಿದ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಬಡ ಕುಟುಂಬಗಳ ಆರ್ಥಿಕ ಸಹಾಯಕ್ಕೆ ಜಾರಿಗೆ ತಂದಿದ್ದರೂ ಫಲಾನುಭವಿಗಳಿಗೆ ಹಣವನ್ನು ಸರಿಯಾದ ಸಮಯಕ್ಕೆ ನೀಡಿಲ್ಲದ ಕಾರಣ ಲಕ್ಷಾಂತರ ಮಹಿಳೆಯರು ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಮಾತ್ರವಲ್ಲದೆ, ಅಕ್ಕಿ ವಿತರಣೆ ವಿಷಯದಲ್ಲೂ ಗೊಂದಲಗಳು ಉಂಟಾಗಿವೆ. ರಾಜ್ಯ ಸರ್ಕಾರ ಅಕ್ಕಿ ನೀಡುವುದಾಗಿ ಘೋಷಿಸಿದರೂ, ಅದು ಫಲಾನುಭವಿಗಳ ಕೈಗೆ ತಲುಪಿಲ್ಲ. ಕೇಂದ್ರ ಸರ್ಕಾರದಿಂದ ಅಗತ್ಯ ಅಕ್ಕಿ ಖರೀದಿ ಮಾಡಿಲ್ಲ, ಮತ್ತು ರಾಜ್ಯ ಸರ್ಕಾರವೂ ಅಕ್ಕಿ ಪೂರೈಕೆಯಲ್ಲಿ ವಿಫಲವಾಗಿದೆ. ಇದರಿಂದ ಬಡ ಕುಟುಂಬಗಳು ಅಗತ್ಯ ಆಹಾರದ ಕೊರತೆಯನ್ನು ಎದುರಿಸುತ್ತಿದೆ ಅಲ್ಲದೇ ಸರ್ಕಾರದ ನಡೆ ಜನರಿಗೆ ನಿರಾಸೆಯನ್ನು ಉಂಟುಮಾಡಿದ್ದು ದೈನಂದಿನ ಜೀವನಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ. ಸರ್ಕಾರ ನೀಡಿದ ಭರವಸೆಗಳನ್ನು ಸರಿಯಾದ ಸಮಯಕ್ಕೆ ಕೊಡದೆ ಇರುವುದು ಖಂಡನೀಯ ಎಂದರು.