ರಾಜ್ಯದ ಪ್ರಥಮ ಲೀನಿಯರ್ ಆಕ್ಸೆಲರೇಟರ್ ಯಂತ್ರ ಅನಾವರಣ

ಎಲೆಕ್ಟಾ ವಸರ್ಾ ಎಚ್ಡಿ ಲಿನ್ಯಾಕ್  ಮೆಷೀನ್ ಎಂದು ಕರೆಯಲಾಗುವ ಈ ಯಂತ್ರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ.

ಮಣಿಪಾಲ್ ಸಮಗ್ರ ಕ್ಯಾನ್ಸರ್ ರೋಗಶಾಸ್ತ್ರ ಕೇಂದ್ರದ ಆರಂಭದ ಸಂದರ್ಭ ಲಿನ್ಯಾಕ್ ಯಂತ್ರವನ್ನು ಅನಾವರಣಗೊಳಿಸಲಾಗಿದೆ. 

ಲೋಕದರ್ಶನ ವರದಿ

ಬೆಳಗಾವಿ 25:  ಆರೋಗ್ಯ  ಶುಶ್ರೂಷೆಗೆ ವೈದ್ಯಕೀಯ ಉತ್ಕೃಷ್ಟತೆ ಮತ್ತು ರೋಗಿ ಕೇಂದ್ರೀಕೃತ ಮಾರ್ಗದ ಮೇಲೆ ಒತ್ತು ನೀಡುವ ತಮ್ಮ ಯೋಜನೆಗೆ ತಕ್ಕಂತೆ, ಗೋವಾದ ಮಣಿಪಾಲ್ ಆಸ್ಪತ್ರೆ ಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದ ಮತ್ತು ತನ್ನ ರೀತಿಯ ಮೊದಲ ವಿಕಿರಣ ಚಿಕಿತ್ಸೆಯ ಯಂತ್ರವಾದ ಎಲೆಕ್ಟಾ ವಸರ್ಾ ಎಚ್ಡಿ ಲೀನಿಯರ್ ಆಕ್ಸೆಲರೇಟರ್(ಲಿನ್ಯಾಕ್)ರನ್ನು  ಮಣಿಪಾಲ್ ಸಮಗ್ರ ಕ್ಯಾನ್ಸರ್ ರೋಗಶಾಸ್ತ್ರ ಕೇಂದ್ರದ ಆರಂಭದ ಸಂದರ್ಭ ಅನಾವರಣಗೊಳಿಸಿದೆ. ಅತ್ಯಾಧುನಿಕ ಸೌಲಭ್ಯಗಳಿಂದ ಸಜ್ಜಾಗಿರುವ ಮತ್ತು ಬಹುವಿಭಾಗೀಯ ವೈದ್ಯರ ಸಮಿತಿ ಹೊಂದಿರುವ ಅಲ್ಲದೇ ಲಿನ್ಯಾಕ್ ಯಂತ್ರವನ್ನೂ ಹೊಂದಿರುವ ಕೇಂದ್ರವನ್ನು ಆರೋಗ್ಯ, ಕುಶಲಕಮರ್ಿ ತರಬೇತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ವಿಶ್ವಜಿತ್ ರಾಣೆ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಣಿಪಾಲ್ ಎಜುಕೇಷನ್ ಅಂಡ್ ಮಣಿಪಾಲ್ ಗ್ರೂಪ್(ಎಂಇಎಂಜಿ) ಚೇರ್ಮನ್ ಡಾ. ರಂಜನ್ ಪೈ ಮತ್ತು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ನ ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಅವರು ಹಾಜರಿದ್ದರು.

ಕ್ಯಾನ್ಸರ್ ನಿರ್ವಹಣೆಯ ಸ್ತಂಭಗಳಲ್ಲಿ ವಿಕಿರಣ ಚಿಕಿತ್ಸೆ ಒಂದಾಗಿದ್ದು, ಇದು ಎಕ್ಸ್ಟರ್ನಲ್ ಬೀಮ್ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಈ ಚಿಕಿತ್ಸೆ ಅಯೋನೈಸಿಂಗ್ ವಿಕಿರಣ ಬಳಸುತ್ತದೆಯಲ್ಲದೆ, ಇದು ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿದ್ದು, ಕ್ಯಾನ್ಸರ್ಕಾರಕ ಮಾಲಿಗ್ನೆಂಟ್ ಜೀವಕೋಶಗಳನ್ನು ನಿಯಂತ್ರಿಸಲು ಅಥವ ಕೊಲ್ಲಲು ಬಳಕೆಯಾಗುತ್ತದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಲೀನಿಯರ್ ಆಕ್ಸಲರೇಟರ್(ಲಿನಾಕ್) ಪೂರೈಸುತ್ತದೆ.

ಎಲೆಕ್ಟಾ ವಸರ್ಾ ಎಚ್ಡಿ ಲೀನಿಯರ್ ಆಕ್ಸಲರೇಟರ್-ಲಿನ್ಯಾಕ್ ಸಾಂಪ್ರದಾಯಿಕ ವಿಕಿರಣ ಚಿಕಿತ್ಸೆಯನ್ನು ವಿತರಿಸುವಲ್ಲಿ ತನ್ನ ವೈವಿಧ್ಯತೆಗೆ ಹೆಸರಾಗಿದೆ. ಹಲವಾರು ಸೂಚನೆಗಳು ಮತ್ತು ಚಿಕಿತ್ಸಾ ತಂತ್ರಗಳನ್ನು ಇದು ಒಳಗೊಂಡಿದೆ.  ಅತ್ಯಂತ ಸವಾಲಿನ ಸ್ಟಿರಿಯೊಟ್ಯಾಕ್ಟಿಕ್ ಚಿಕಿತ್ಸೆಗಳಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಗರಿಷ್ಠಮಟ್ಟದ ವೈದ್ಯಕೀಯ ಸಡಿಲತೆ ಮತ್ತು ಕಾರ್ಯಾಚರಣೆಯ ಸಾಮಥ್ರ್ಯಕ್ಕೆ ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಹೆಚ್ಚಿನ ರೋಗಿಗಳಿಗೆ ಇದರಿಂದ ಚಿಕಿತ್ಸೆ ನೀಡಬಹುದಲ್ಲದೆ, ಪ್ರತಿ ರೋಗಿಗೆ ವಿಕಿರಣ ಚಿಕಿತ್ಸೆಯ ಸಂಖ್ಯೆ ಕಡಿಮೆಯಾಗಲು ನೆರವಾಗುತ್ತದೆ.

ಲಿನ್ಯಾಕ್ನ ಅಗತ್ಯವನ್ನು ಒತ್ತಿ ಹೇಳಿದ ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ನ ಚೇರ್ಮನ್ ಡಾ. ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, ``ರೋಗಿಗಳಿಗೆ ಇತ್ತೀಚಿನ ಮತ್ತು ಅತ್ಯುತ್ತಮ ಚಿಕಿತ್ಸೆ ಸೌಕರ್ಯಗಳನ್ನು ಪೂರೈಸುವಲ್ಲಿ ಗೋವಾದ ಮಣಿಪಾಲ್ ಆಸ್ಪತ್ರೆ ಯಾವಾಗಲೂ ಮುಂಚೂಣಿಯಲ್ಲಿದೆ. ಲಿನಾಕ್ ಯಂತ್ರದ ಸೇರ್ಪಡೆಯೊಂದಿಗೆ ನಮ್ಮ ಕಿರೀಟದಲ್ಲಿ ಮತ್ತೊಂದು ಗರಿ ಮೂಡಿರುವುದಲ್ಲದೆ, ಯಾವುದೇ ರೀತಿಯ ಕ್ಯಾನ್ಸರ್ನ ಚಿಕಿತ್ಸೆಯನ್ನು ಪಡೆಯಲು ಇಚ್ಛಿಸುವ ರೋಗಿಗಳಿಗೆ ಒಂದೇ ಸೂರಿನಡಿ ಎಲ್ಲಾ ಚಿಕಿತ್ಸೆ ಪೂರೈಸುವ ಗುರಿಯಾಗಿ ಮಣಿಪಾಲ್ ಸಮಗ್ರ ಕ್ಯಾನ್ಸರ್ ರೋಗಶಾಸ್ತ್ರ ಕೇಂದ್ರ ಪಾತ್ರವಹಿಸಲಿದೆ. ಇದಲ್ಲದೆ, ಕ್ಯಾನ್ಸರ್ಗಾಗಿ ವಿಕಿರಣ ಚಿಕಿತ್ಸೆಯ ಭವಿಷ್ಯ ಹೆಚ್ಚು ವೈಯಕ್ತಿಕ ಚಿಕಿತ್ಸೆಯಲ್ಲಿದೆ. ಇದನ್ನು ಕೈಗೊಳ್ಳಲು ಎಲೆಕ್ಟಾ ವಸರ್ಾ ಎಚ್ಡಿ ಲೀನಿಯರ್ ಆಕ್ಸಲರೇಟರ್ ನಮಗೆ ಅವಕಾಶ ಮಾಡಿಕೊಡುತ್ತದೆ'' ಎಂದರು.

ಡಾ. ಬಲ್ಲಾಳ್ ಅವರು ಮಾತನಾಡಿ, ``ದೇಶದಲ್ಲಿ ಅತ್ಯುತ್ತಮ ಸಾರ್ವಜನಿಕ ಆರೋಗ್ಯ ಸೇವೆ ಸೌಲಭ್ಯಗಳಲ್ಲಿ ಒಂದನ್ನು ಗೋವಾ ಹೊಂದಿದ್ದು, ನಮ್ಮ ಈ ಸೌಲಭ್ಯವನ್ನು ಉದ್ಘಾಟಿಸಲು ಚಲನಶೀಲ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಬಂದಿರುವುದು ನಮಗೆ ಹರ್ಷ ತಂದಿದೆ. ಗೋವಾದಲ್ಲಿ ಆರೋಗ್ಯ ಶುಶ್ರೂಷೆ ಸೇವೆಗಳನ್ನು ಸ್ಥಾಪಿಸಿ ನಡೆಸಲು ಬಹಳ ನೆರವು ಮತ್ತು ಬೆಂಬಲ ನೀಡಿರುವುದಕ್ಕೆ ಅವರಿಗೆ ನಾವು ವಂದನೆ ಸಲ್ಲಿಸುತ್ತೇವೆ. ರಾಜ್ಯದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಸಾದರಪಡಿಸುವಲ್ಲಿ ಗೋವಾ ಸಕರ್ಾರದೊಂದಿಗೆ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತೇವೆ'' ಎಂದರು.