ಗದಗ 11: ದಿ. 7ರಿಂದ 9ರವರೆಗೆ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ನಟವರಿ ಕಲಾ ಪರಿಷತ್, ಗದಗ ಇವರು ಭಾಗವಹಿಸಿ ಏಕಾಂಕ ನಾಟಕದಲ್ಲಿ ಪ್ರಥಮ ಸ್ಥಾನ, ಕಥಕ್ ನೃತ್ಯದಲ್ಲಿ ಶ್ವೇತಾ ಪ್ರಥಮ ಸ್ಥಾನ, ಓಡಿಸ್ಸಿ ನೃತ್ಯದಲ್ಲಿ ಕು.ಪೂನಂ ಬಸವಾ ತೃತೀಯ ಸ್ಥಾನ ಗಳಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳಾದಎಂ.ಜಿ. ಹಿರೇಮಠ, ಐ.ಎ.ಎಸ್. ಮಾನ್ಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ್ ಆರ್. ಚವ್ಹಾಣ, ಐ.ಎಫ್.ಎಸ್. ಇವರುಗಳು ಅಭಿನಂದಿಸಿದರು. ಸಹಾಯಕ ನಿದರ್ೆಶಕರಾದ ಬಿ.ಬಿ. ವಿಶ್ವನಾಥ್ ಹಾಗೂ ನಟವರಿ ಕಲಾ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸ್ಪಧರ್ಾಳುಗಳು ಉಪಸ್ಥಿತರಿದ್ದರು.