ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆ: ವೈಷ್ಣವಿ-ಆವಂತಿಗೆ ಪ್ರಶಸ್ತಿ

ಧಾರವಾಡ, 31: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿರುವ 'ಮುಕ್ತ ಗಂಗೋತ್ರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ವೈಷ್ಣವಿ ಅಜ್ಜೆವಡೆಯರಮಠ ಹಾಗೂ ಆವಂತಿ ಹೆಗಡೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಲಭಿಸಿವೆ. 

'ಸಾವಯವ ಕೃಷಿಯ ಮಹತ್ವ ಎಂಬ ವಿಷಯವಾಗಿ ನಗರದ ಪ್ರಜಂಟೇಷನ್ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾಥರ್ಿನಿ ವೈಷ್ಣವಿ ಜಯಪ್ರಕಾಶ ಅಜ್ಜೆವಡೆಯರಮಠ ಅವಳು ಸಂಸ್ಕೃತ ಭಾಷಣ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಳು. 5 ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ಪ್ರಶಸ್ತಿಪತ್ರ ಲಭಿಸಿದೆ. ಪ್ರಜಂಟೇಷನ್ ಬಾಲಕಿಯರ ಪ್ರೌಢ ಶಾಲೆಯ ಇನ್ನೊಬ್ಬ ವಿದ್ಯಾಥರ್ಿನಿ ಆವಂತಿ ಸುಬ್ರಾಯ ಹೆಗಡೆ ಅವಳು ಗಜಲ್ ಹಾಡುಗಾರಿಕೆ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದು, 3 ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ಪ್ರಶಸ್ತಿಪತ್ರ ಪಡೆದುಕೊಂಡಳು. ರಾಜ್ಯದ 34 ಜಿಲ್ಲೆಗಳ ವಿದ್ಯಾಥರ್ಿನಿಯರು ಈ ರಾಜ್ಯ ಮಟ್ಟದ ಸ್ಪಧರ್ೆಗಳಲ್ಲಿ ಪಾಲ್ಗೊಂಡಿದ್ದರು. 

ಅಭಿನಂದನೆ : ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದ ಈ ಉಭಯ ವಿದ್ಯಾಥರ್ಿನಿಯರನ್ನು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪನಿದರ್ೆಶಕ ಆರ್.ಎಸ್. ಮುಳ್ಳೂರ, ಅಭಿವೃದ್ಧಿ ಉಪನಿದರ್ೆಶಕ ಅಬ್ದುಲ್ ವಾಜೀದ್ ಖಾಜಿ, ಪ್ರಜಂಟೇಷನ್ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಸ್ಯಾಲಿ ಸಿಸ್ಟರ್, ಸಂಸ್ಕೃತ ಶಿಕ್ಷಕ ಎನ್.ಎನ್. ಭಟ್ ಹಾಗೂ ಪಾಲಕರು ಅಭಿನಂದಿಸಿದ್ದಾರೆ.