ಲೋಕದರ್ಶನ ವರದಿ
ಮುನಿರಾಬಾದ್ 28: ಸ್ಥಳೀಯ ತುಂಗಭದ್ರಾ ಕಾಡಾ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ದಿ. 26ರಂದು ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ಜರುಗಿತು.
ಸಭೆಯಲ್ಲಿ ಕನರ್ಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳು, ಮತ್ತು ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಆಗಮಿಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾಜರ್ುನ, ರಾಜ್ಯಧ್ಯಕ್ಷ ಶಿವಾನಂದ ತಗಡೂರು, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಆರ್. ತಾಳಿಕೋಟಿ ಹಾಗೂ ರಾಜ್ಯ ಪದಾಧಿಕಾರಿಗಳನ್ನು ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಗಂಗಾವತಿ ತಾಲ್ಲೂಕ ಸಮಿತಿಯವರೂ ಇವರನ್ನು ಪ್ರತ್ಯೇಕವಾಗಿ ಸನ್ಮಾನಿಸಿದರು. ಸ್ಥಳೀಯ ಪತ್ರಕರ್ತರಾದ ವೆಂಕಟೇಶ್ ಎಂ.ಆರ್., ಗುರುರಾಜ್ ಅಂಗಡಿ, ನಾರಾಯಣ್ ಇವರನ್ನು ಸುಸಜ್ಜಿತವಾಗಿ ಸಭೆ ನಡೆಯಲು ವ್ಯವಸ್ಥೆ ಮಾಡಿದ್ದಕ್ಕಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕೊಪ್ಪಳ ಜಿಲ್ಲಾ ಸಮಿತಿಯ ಅಧ್ಯಕ್ಷ ಎಂ.ಸಾದಿಕ್ ಅಲಿ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಈ ಸಭೆಯ ಆಯೋಜನೆ ಮಾಡಿತ್ತು. ರಾಜ್ಯ ಪ್ರಧಾನ ಕಾರ್ಯದಶರ್ಿ ಜಿ.ಸಿ. ಲೋಕೇಶ್, ರಾಜ್ಯ ಉಪಾಧ್ಯಕ್ಷ ಮತ್ತಿಕೇರಿ ಜಯರಾಮ್, ಗ್ರಾಮೀಣ ಉಪಾಧ್ಯಕ್ಷ ಪುಂಡಲಿಕ್ ಬಿ. ಬಾಳೋಜಿ, ಕೊಪ್ಪಳ ಜಿಲ್ಲೆಯ ರಾಜ್ಯ ಕಾರ್ಯಕಾರಿ ಸಮಿತಿಯ ನಾಮನಿದರ್ೇಶಿತ ಸದಸ್ಯ ಹೆಚ್.ಎಸ್.ಹರೀಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಆಯ-ವ್ಯಯ ಮತ್ತು ಮುಂದಿನ ರಾಜ್ಯ ಮಟ್ಟದ ಸಮ್ಮೇಳನದ ಬಗ್ಗೆ ಚಚರ್ಿಸಲಾಯಿತು. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್ ಎಂ.ಆರ್. ಸ್ವಾಗತಿಸಿದರು. ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಎಂ.ದೊಡ್ಡಮನಿ ನಿರೂಪಿಸಿದರು. ಕೊಪ್ಪಳ ಜಿಲ್ಲೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಜಿ.ಎಸ್.ಗೋನಾಳ್ ವಂದಿಸಿದರು.
ಸಭೆಯ ನಂತರ ಸಮಿತಿಯು ಸ್ಥಳೀಯ ಸುಪ್ರಸಿದ್ದ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ದೇವಸ್ಥಾನದ ಸಮಿತಿಯ ವತಿಯಿಂದ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಮಿತಿಯು ದೇವಸ್ಥಾನದ ಸಮೀಪದಲ್ಲಿದ್ದ ಇತ್ತೀಚೆಗೆ ನಿಮರ್ಿಸಲಾಗಿದ್ದ ಸುಸಜ್ಜಿತ ಆಧುನಿಕ ಶೌಚಾಲಯವನ್ನು ವೀಕ್ಷಿಸಿ, ಕೊಪ್ಪಳ ಜಿಲ್ಲ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನರ್ಾಧನ್ರ ಬಹು ಗ್ರಾಮ ಪಂಚಾಯತಿ ತ್ಯಾಜ್ಯ ನಿವರ್ಾಹಣಾ ಘಟಕಕ್ಕೆ ಭೇಟಿ ನೀಡಿತು. ಅಲ್ಲಿಯ ಎರೆಹುಳ ಘಟಕ, ಔಷದೀಯ ಸಸ್ಯಗಳ ಘಟಕ, ಗೋ ಶಾಲೆ, ಪ್ಲಾಸ್ಟಿಕ್ ಮರು ಬಳಕೆ ಘಟಕ ಹಾಗೂ ತರಬೇತಿ ಸಭಾಂಗಣವನ್ನು ವೀಕ್ಷಿಸಿ ಸಮಿತಿಯು ತನ್ನ ಮೆಚ್ಚಿಗೆಯನ್ನು ವ್ಯಕ್ತಪಡಿಸಿತು. ಟಿ.ಜನಾರ್ಧನ್ ಸಮಿತಿಯ ಎಲ್ಲರನ್ನು ಸನ್ಮಾನಿಸಿದರು. ನಂತರ ಸಮಿತಿಯು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಗವಿಮಠದ ಶ್ರೀಗಳ ದರ್ಶನ ಪಡೆದು ತೆರಳಿದರು.