ಬಡವರ, ಶ್ರಮಿಕರ ಕೃಷಿಕರ ಮಹಿಳೆಯರ ಮತ್ತು ಉತ್ತರ ಕರ್ನಾಟಕದ ಉನ್ನತಿಗೆ ನಾಂದಿಯಾದ ರಾಜ್ಯ ಬಜೆಟ್ : ಬರಕತ ಅಲಿ ಮುಲ್ಲಾ

State Budget is a sign of progress for the poor, working class, farmers, women and North Karnataka:

ಬಡವರ, ಶ್ರಮಿಕರ ಕೃಷಿಕರ ಮಹಿಳೆಯರ ಮತ್ತು ಉತ್ತರ ಕರ್ನಾಟಕದ ಉನ್ನತಿಗೆ ನಾಂದಿಯಾದ ರಾಜ್ಯ ಬಜೆಟ್ : ಬರಕತ ಅಲಿ ಮುಲ್ಲಾ

ಗದಗ 08: ಸಮಸ್ತ ನಾಗರಿಕರಿಗೆ ನುಡಿದಂತೆ ನಡೆದ ವಿಶ್ವಾಸಕ್ಕೆ ಪಾತ್ರವಾದ ಆಡಳಿತಾರೋಢ ಘನ್ ರಾಜ್ಯ ಸರಕಾರವು ಸನ್ 2028-26 ರ ಆರ್ಥಿಕ ವರ್ಷದ ಆಯವ್ಯೆಯದಲ್ಲಿಯೂ ತನ್ನದೇಯಾದ ಒಂದು ಭರವಸೆಯ ಬೆಳಕನ್ನು ಚಲ್ಲಿದ್ದು ಅದರ ಪ್ರತ್ಯಕ್ಷ ದೃಷ್ಟಾಂತವೇ ಕನ್ನಡ ನಾಡಿನ ಸಮಸ್ತ ನಾಗರಿಕರ ನೆಚ್ಚಿನ ನಾಯಕ, ಗ್ಯಾರಂಟಿಗಳ ಸರದಾರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಸದನದಲ್ಲಿ ಮಂಡಿಸಲಾದ ಜನಮನ್ನಣೆಯ ಬಜೆಟ್ ಸಾಕ್ಷಿಯಾಗಿರುತ್ತದೆ. ಎಂದು ಗದಗ ಬೆಟಗೇರಿ ನಗರಸಭೆಯ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ ರವರು ಜನಸ್ಪಂಧನೆಯನ್ನು ವ್ಯೆಕ್ತಪಡಿಸಿರುತ್ತಾರೆ. ಇಂದು ಸುಮಾರು 3 ಘಂಟೆಗಿಂತಲೂ ಹೆಚ್ಚಿನ ಅವಧಿಯಲ್ಲಿ ಮಂಡಿಸಿದ ಬಜೆಟನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಮಾನ್ಯತೆ ನೀಡಿದ್ದು ಅದರಲ್ಲಿ ಪ್ರಮುಖವಾಗಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ 250 ಕೋಟಿ ಅನುದಾನ,  ಜಿಲ್ಲೆಯ ಡಂಬಳ ಗ್ರಾಮದಲ್ಲಿ ತೋಟಗಾರಿಕೆ ಮಹಾವಿಧ್ಯಾಲಯ, ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರೆ​‍್ಡಗೊಳಿಸಿ, 250 ಕೋಟಿ ವಿಶೇಷ ಅನುದಾನ, ರಾಜ್ಯದ ಮಕ್ಕಳ ಸೈಕ್ಷಣಿಕ ಉನ್ನತಿಗಾಗಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದ 6 ದಿನಗಳು ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಹಾಗೂ ಉಚಿತ ಶಿಕ್ಷಣ, ರೈತರ ಶ್ರೇಯೋಭಿವೃದ್ಧಿಗಾಗಿ ಸಾಲದ ಮೇಲೆ ವಿಶೇಷ ಸಬ್ಸಿಡಿ ಘೋಷಣೆ, ಮಹಿಳೆಯರ ಉನ್ನತಿಗಾಗಿ ಅವರ ಸಬಲೀಕರಣಕ್ಕಾಗಿ ಸ್ತ್ರೀ ಸಂಘಗಳ ಮೂಲಕ ಆರ್ಥಿಕವಾಗಿ ಧನ ಸಹಾಯ, ಅತಿಥಿ ಉಪನ್ಯಾಸಕರ ಗೌರವಧನ ಮಾಸಿಕ 2000 ರೂಪಾಯಿ ಹೆಚ್ಚಳ,ರಾಜ್ಯಾದ್ಯಠ 5000 ಎಲ್ ಕೆ ಜಿ ಮತ್ತು ಯು ಕೆ ಜಿ ಶಾಲೆಗಳನ್ನು ತೆರೆಯಲು ಮುಂದಾಗಿದೆ, ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಸ್ಥಾಪನೆ, ರಾಜ್ಯದಲ್ಲಿ 500 ಪಬ್ಲಿಕ್ ಶಾಲೆಗಳ ಸ್ಥಾಪನೆ,  2000 ಉಪನ್ಯಾಸಕರ ನೇಮಕಾತಿಗೆ ಘೋಷಣೆ,ಅದರಂತೆ ರಾಜ್ಯದಲ್ಲಿ ರೈತರ ಹಿತರಕ್ಷಣೆಗೆ ಮುಂದಾಗಿ ವನ್ಯಜೀವಿಗಳ ದಾಳಿಯಿಂದ ಮೃತರಾದರೆ ಅವರ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರಧನ ಘೋಷಣೆರಾಜ್ಯದಲ್ಲಿರುವ 37 ಲಕ್ಷ ಅತೀ ಸಣ್ಣ ರೈತರಿಗೆ 28000 ಕೋಟಿ ರೂಪಾಯಿಗಳ ಸಾಲದ ಯೋಜನೆ, ಕೃಷಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಲೈಸೆನ್ಸ್‌ ಹೊಂದಿರುವವರು ಅಕಾಲಿಕ ಮೃತರಾದರೆ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ಸಹಾಯಧನ, ತೊಗರಿ ಬೆಳೆಗಾರರಿಗೆ 500 ಕೋಟಿ ರೂಪಾಯಿಗಳ ಹೆಚ್ಚುವರಿ ಪ್ರೋತ್ಸಾಹಕ ಅನುದಾನ ಮಂಜೂರಾತಿ ಮಾಡಿದೆ. ಹೀಗೆ ಆಡಳಿತಾರೋಢ ಕಾಂಗ್ರೇಸ್ ಸರಕಾರವು ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಮನ್ನಣೆಯ ಕಾರ್ಯಯೋಜನೆಯೊಂದಿಗೆ ಬಡವರ, ಶ್ರಮಿಕರ ಕೃಷಿಕರ ಮಹಿಳೆಯರ ಮತ್ತು ಉತ್ತರ ಕರ್ನಾಟಕದ ಸಮಗ್ರ ಉನ್ನತಿಗೆ ನಾಂದಿಯಾದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನ್ನು ಮಂಡಿಸಿರುವ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಸಮಸ್ತ ಉತ್ತರ ಕರ್ನಾಟಕದ ನಾಗರಿಕರ ಪರವಾಗಿ  ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ ರವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.