ಪರಿಸರ ಸಂಜೀವಿನಿ ಮೊಬೈಲ್ ಕ್ಯಾಂಟೀನ್ ಆರಂಭ
ಬಳ್ಳಾರಿ 03 : ನಗರದ ಕೊಟೆ ಪ್ರದೇಶದ ತಾಲೂಕು ಪಂಚಾಯಿತಿ, ಕಛೇರಿ ಮುಂಭಾಗದಲ್ಲಿ ಸಂಜೀವಿನಿ ಮೊಬೈಲ್ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕು ಪಂಚಾಯತ್ ಬಳ್ಳಾರಿ ವ್ಯಾಪ್ತಿಯಲ್ಲಿನ ಪರಿಸರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ನಾಗಲಾಂಬಿಕೆ ಸ್ವ-ಸಹಾಯ ಸಂಘ ಶ್ರೀಧರ ಗಡ್ಡೆ, ಸದಸ್ಯರ ವತಿಯಿಂದ ಪರಿಸರ ಸಂಜೀವಿನಿ ಮೊಬೈಲ್ ಕ್ಯಾಂಟೀನ್ ಗೆ ಆರಂಭಿಸಲಾಗಿದೆ.ಪರಿಸರ ಸಂಜೀವಿನಿ ಮೊಬೈಲ್ ಕ್ಯಾಂಟೀನ್ ಉದ್ಘಾಟನೆಯನ್ನು ಜಿಲ್ಲಾಪಂಚಾಯತಿಯ ಜಿಲ್ಲಾ ಉಪ ಕಾರ್ಯದರ್ಶಿಗಳಾದ ಗಿರಿಜಾ ಶಂಕರ್ ಅವರು ನೆರವೆರಿಸಿದರು.ಈ ಸಂದರ್ಭದಲ್ಲಿ ಮುಖ್ಯಯೋಜನಾಧಿಕಾರಿಗಳಾದ ವಾಗೀಶ್ , ಯೋಜನಾ ನಿರ್ದೇಶಕ ವಿನೋದ್ ಕುಮಾರ್ , ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕರಾದ ಬಸವರಾಜ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ, ಕಂಪ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ್, ತಾಲೂಕು ಪಂಚಾಯಿತಿ ಬಳ್ಳಾರಿ ಸಹಾಯಕ ನಿರ್ದೇಶಕರು(ನರೇಗಾ) ಬಸವರಾಜ್, (ಪಂ.ರಾಜ್) ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಕುಮಾರಿ ಸಂಧ್ಯಾರಾಣಿ, ತಾಲೂಕು ಪಂಚಾಯಿತಿ ಸಂಡೂರು, ಸಹಾಯಕ ನಿರ್ದೇಶಕರು (ನರೇಗಾ) ರೇಣುಕಾಚಾರಿ ಸ್ವಾಮಿ,( ನರೇಗಾ) ತಾಲೂಕು ಪಂಚಾಯಿತಿ,ಕಂಪ್ಲಿ ಸಹಾಯಕ ನಿರ್ದೇಶಕ ಮಲ್ಲನಗೌಡ, ಕುರುಗೋಡು (ನರೇಗಾ) ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ, ತಾ.ಪಂ ಬಳ್ಳಾರಿ ಸಹಾಯಕ ಲೆಕ್ಕಾಧಿಕಾರಿ ಶರಣಪ್ಪ, ತಾಲೂಕು ಪಂಚಾಯಿತಿ ಬಳ್ಳಾರಿ ವ್ಯವಸ್ಥಾಪಕ ಬಚಲಪ್ಪ , ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳು, ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಹಾಗೂ ಓಖಐಒ ಯೋಜನೆಯ ರಾಜೇಂದ್ರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಆಒ ,ಆಒಋ, ಠಜಿಛಿಜ ಣಚಿಟಿಣ ಜಿಲ್ಲಾ ಪಂಚಾಯತ್ ಬಳ್ಳಾರಿ, ತಾಲೂಕು ಸಂಜೀವಿನಿ ಯೋಜನೆಯ ವಿ ಗಂಗಾಧರ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಃಒ,ಅಖ,ಃಖಕ-ಇಕ,ಃಖಕ-ಕಖಋ , ಖಿಒಋ, ಒಏಕಅ ಯ ಅಇಓ ಹಾಗೂ ಂಛಿಛಿಠಟಿಣಚಿಟಿಣ ಹಾಗೂ ತಾಲೂಕಿನ ಎಲ್ಲಾ ಒಕ್ಕೂಟದ ಸಿಬ್ಬಂದಿಗಳು ಸದಸ್ಯರು ಇತರರು ಭಾಗವಹಿಸಿದ್ದರು.