ಸೇಂಟ್ ಜೋಸೆಫ್ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್.. ಮಕ್ಕಳ ಮೇಲೆ ಪಾಲಕರ ನಿಗಾ ಅಗತ್ಯ: ಕಸಾಪ ಜಿಲ್ಲಾಧ್ಯಕ್ಷ ಕೆ.ಎ ಬಳಿಗೇರ
ಶಿರಹಟ್ಟಿ 23 : ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು, ಅವರ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ. ಪ್ರಮುಖವಾಗಿ ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎ ಬಳಿಗೇರ ಹೇಳಿದರು.ಪಟ್ಟಣದ ವಿಜಯನಗರದಲ್ಲಿರುವ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಕನಾದವನು ಅವರನ್ನು ಪ್ರಜ್ವಲಿಸುವಂತೆ ಮಾಡಬೇಕು. ಶಿಕ್ಷಕನ ಕೆಲಸ ಎಂದರೆ ಬೆಳಕನ್ನು ಎಲ್ಲೆಡೆ ಹರಡಿಸುವುದಾಗಿದೆ. ಇನ್ಯಾವ ಪಾಶ್ಚಾತ್ಯ ಶಿಕ್ಷಣವು ಕೂಡಾ ಇಂತಹ ಪ್ರಾರ್ಥನೆಯನ್ನು ಕೊಡಲು ಸಾಧ್ಯವಿಲ್ಲ ವಿವೇಕಾನಂದರು ಹೇಳುವ ಪ್ರಕಾರ ಪ್ರಯತ್ನ ಮಾಡುವವರಿಗೆ ಸಹಾಯಮಾಡುವುದು. ಅಸೂಯೆ ಪಡದೆ ಬದುಕುವುದು. ಈ ರೀತಿಯ ಜೀವನದಲ್ಲಿ ವಿದ್ಯಾರ್ಥಿಗಳು ರೂಢಿಸಿಕೊಂಡರೆ ವಿದ್ಯಾರ್ಥಿಗಳ ಜೀವನವನ್ನು ದೂರದವರೆಗೂ ಕರೆದುಕೊಂಡು ಹೋಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಗಿ ಇಲ್ಲಿಯವರೆಗೂ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದನ್ನು ಇಲ್ಲನ ಶಿಕ್ಷಕ ವೃಂದದ ಪಾತ್ರ ಅನನ್ಯವಾಗಿದೆ. ಮುಂದಿನ ದಿಮಾನಗಳಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸಿದರು.ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ದೇವಕ್ಕ ಗುಡಿಮನಿ, ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಚ್.ಡಿ ಮಾಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಸ್.ಎಸ್ ಸಾಮ್ರಾಟ, ಪಶು ಆಸ್ಪತ್ರೆ ವೈಧ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ, ಶಿಕ್ಷಣ ಇಲಾಖೆ ಸಿಆರ್‌ಪಿ ಸಾವಿರಕುದರಿ, ಬಣಜಿಗ ಸಮಾಜದ ಅಧ್ಯಕ್ಷ ಮುತ್ತು ಮಜ್ಜಗಿ, ಹುಬ್ಬಳ್ಳಿ ಪಿಎಂಪಿಬಿ ಚರ್ಚ್‌ನ ಪಾದರ್ ಸುನೀಲ್ ಬಿ, ಮಾಬುಸಾಬ ಲಕ್ಷ್ಮೇಶ್ವರ, ಎಚ್.ಆರ್ ಬೆನಹಾಳ. ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಖಲತಾ ಸಾಮ್ರಾಟ ಮತ್ತಿತರರು ಉಪಸ್ಥಿತರಿದ್ದರು.ನಂತರ ಮಕ್ಕಳಿಂದ ವಿವಿಧ ಸಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.