ಶ್ರೀರಾಮುಲು ಪ್ರಚಾರದಲ್ಲಿ ವರಷ್ಟರಂತೆ ನಡೆದುಕೊಳ್ಳುವೆ: ಜನಾರ್ಧನರೆಡ್ಡಿ

Sriramulu will act like a rich man in the campaign: Janardhana Reddy

ಶ್ರೀರಾಮುಲು ಪ್ರಚಾರದಲ್ಲಿ ವರಷ್ಟರಂತೆ ನಡೆದುಕೊಳ್ಳುವೆ: ಜನಾರ್ಧನರೆಡ್ಡಿ  

ಬಳ್ಳಾರಿ 25: ನಗರದ ಶ್ರೀರಾಮುಲು ವಿಚಾರದಲ್ಲಿ ಪಕ್ಷದ ವರಿಷ್ಟರು ಏನು ಮಾತನಾಡಬೇಡಿ ಎಂದಿದ್ದಾರೆ. ಎಲ್ಲಾ ವಿಷಯ ವರಿಷ್ಟರಿಗೆ ತಿಳಿಸಿದೆ ಅವರು ಏನ ಹೇಳುತ್ತಾರೆ ಅವರಂತೆ ನಡೆದುಕೊಳ್ಳಲಿದೆ. ಏನೇ ಇದ್ದರು ಪಕ್ಷದ ಚೌಕಟ್ಟಿನಲ್ಲಿ ಪ್ರಸ್ತಾಪ ಮಾಡುವೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಇಂದು ಅಪಹರಣಕ್ಕೆ ಒಳಗಾದ ವೈದ್ಯರ ಮನೆಗೆ ಭೇಟಿ ನೀಡಿ ಅವರಿಗೆ ದೈರ್ಯ ತುಂಬಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಶ್ರೀರಾಮುಲು ಬಗ್ಗೆ ನಿವು ಅವಹೇಳನವಾಗಿ ಮಾತನಾಡಿದ್ದೀರಿ ಎಂದು ವಾಲ್ಮೀಕಿ ಸಮುದಾಯ ನಿಮಗಮ ವಿರುದ್ದ ದೂರು ನೀಡಿದ್ದಾರೆಂಬ ಪ್ರಶ್ನೆಗೆ ಸಿಬಿಐ ತನಿಖೆ ಎದುರಿಸಿರುವ ನಾನು ಏನೇ ದೂರು ನೀಡಿದರೂ ಫೇಸ್ ಮಾಡುವೆ ಎಂದರು. ರಾಜ್ಯದಲ್ಲಿ ಅಪರಾದ ಹೆಚ್ಚಾಗುತ್ತಿದೆ, ಬೀದರ್, ಮಗಳೂರಿನಲ್ಲಿ ದರೋಡೆ, ಹಲವಡೆ ಹತ್ಯೆ, ಅಸನ್ ಲೈನ್ ವಂಚನೆ ಹೀಗೆ ಅಪರಾದ ಹೆಚ್ಚಳವಾಗುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದರು