ರಾಜ್ಯ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಾಗಿ ಶ್ರೀನಿವಾಸ್ ಓಕಾ ಪ್ರಮಾಣ ವಚನ


ಬೆಂಗಳೂರು, ಮೇ 6  ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಬಾಂಬೆ ಹೈ ಕೋರ್ಟ್  ಹಿರಿಯ ನ್ಯಾಯಮೂರ್ತಿ  ಅಭಯ್ ಶ್ರೀನಿವಾಸ್ ಓಕಾ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 10 ರ ಬೆ.10 ರಂದು ರಾಜಭವನ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಅಂದು ಓಕಾ ಅವರು ರಾಜ್ಯ ಹೈಕೋಟರ್್ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಓಕಾ ಅವರನ್ನು ಹೈಕೋಟರ್್ ಮುಖ್ಯ ನ್ಯಾಯಮೂರ್ತಿ ಗಳನ್ನಾಗಿ ನೇಮಕ ಮಾಡುವಂತೆಸರ್ವೋಚ್ಛ ನ್ಯಾಯಾಲಯದ ಕೊಲಿಜಿಯಂ ಕೇಂದ್ರ ಕಾನೂನು ಸಚಿವಾಲಯ ರಾಷ್ಟ್ರಪತಿ ಭವನಕ್ಕೆ ಶಿಫಾರಸು ಮಾಡಿತ್ತು.  ಕೆಲವು ದಿನಗಳ ಹಿಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಓಕಾ ಅವರ ನೇಮಕ ಮಾಡಿ ಆದೇಶ ಹೊರಡಿಸಿದ್ದರು.  1960  ಮೇ 25 ರಂದು ಜನಿಸಿದ ಓಕಾ ಅವರು, ಬಾಂಬೆ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ, ಕಾನೂನು ಹಾಗೂ ಎಲ್ಎಲ್ಎಂ ಪದವಿ ಗಳಿಸಿದ್ದಾರೆ. ತಂದೆ ಶ್ರೀನಿವಾಸ ಓಕಾ ಸಹ ವಕೀಲರಾಗಿದ್ದು, ತಂದೆಯವರ ಕೈಕೆಳಗೆ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2003 ರಲ್ಲಿ ಬಾಂಬೆ ಹೈಕೋರ್ಟ್  ಹೆಚ್ಚುವರಿ ನ್ಯಾಯಮೂರ್ತಿ ಯಾಗಿ ನೇಮಕವಾಗಿದ್ದ ಓಕಾ ಅವರು 2005 ರಿಂದ ಖಾಯಂ ನ್ಯಾಯಮೂತರ್ಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.