ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಶ್ರೀನಿವಾಸ್ ಮೋತ್ಕರ್ ಪದಗ್ರಹಣ

ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಶ್ರೀನಿವಾಸ್ ಮೋತ್ಕರ್ ಪದಗ್ರಹಣ Srinivas Motkar takes oath as Leader of Opposition in the Municipal Corporation


ಬಳ್ಳಾರಿ 12:  ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಅವರು ಶುಕ್ರವಾರ ಅಧಿಕೃತವಾಗಿ ಪದಗ್ರಹಣ ಮಾಡಿದರು. ಪಾಲಿಕೆಯ ಸಭಾಂಗಣದಲ್ಲಿ ಸರಳ ಕಾರ್ಯಕ್ರಮದ ಮೂಲಕ ನಡೆದ ಪದಗ್ರಹಣಕ್ಕೆ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಹಾಜರಾತಿ ಸೊಬಗು ತಂದಿತು.ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣ (ಕಿಟ್ಟು), ಮೇಘನಾಥ್, ಪ್ರೇಮ್ ಕುಮಾರ್, ರಮೇಶ್, ದರ್ಶನ್, ಹೇಮಂತ್ ರಾಜ್ ಮತ್ತು ಅಮರ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿ ಶ್ರೀನಿವಾಸ್ ಅವರಿಗೆ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.  

ಇದೇ ವೇಳೆಯಲ್ಲಿ  ಮಾತನಾಡಿದ ಮೋತ್ಕರ್ ಶ್ರೀನಿವಾಸ್, “ನಗರದ ಅಭಿವೃದ್ಧಿ, ಪೌರಸೌಕರ್ಯಗಳ ಸುಧಾರಣೆ ಮತ್ತು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ನನ್ನ ಆದ್ಯತೆ. ಆಡಳಿತದ ಉತ್ತಮ ಕಾರ್ಯಗಳಿಗೆ ಬೆಂಬಲ ನೀಡುತ್ತೇವೆ, ಆದರೆ ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ಕೆಲಸಗಳನ್ನು ಗಟ್ಟಿಯಾಗಿ ಪ್ರಶ್ನಿಸುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.ನಗರದಲ್ಲಿ ನೀರು, ಸ್ವಚ್ಛತೆ, ರಸ್ತೆಪಾಲನೆ ಮತ್ತು ಗೃಹನಿರ್ಮಾಣ ಸೇರಿದಂತೆ ಹಲವು ಬಗೆಗಿನ ಸಮಸ್ಯೆಗಳು ಎದುರಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಮಹಾನಗರ ಪಾಲಿಕೆಯ ಕಾರ್ಯಪದ್ಧತಿಯಲ್ಲಿ ಪಾರದರ್ಶಕತೆ ತರಲು ಹಾಗೂ ನಾಗರಿಕರ ಧ್ವನಿಯನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸಲು ವಿರೋಧ ಪಕ್ಷದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.  

ಪದಗ್ರಹಣದ ನಂತರ ನಾಯಕರು ಉಪಸ್ಥಿತರಿದ್ದವರಿಗೆ ಧನ್ಯವಾದ ಅರ​‍್ಿಸಿ, ಎಲ್ಲರ ಸಹಕಾರದಿಂದ ಬಳ್ಳಾರಿ ನಗರವನ್ನು ಮುಂದಿನ ದಶಕದ ಮಾದರಿ ನಗರವನ್ನಾಗಿ ರೂಪಿಸುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾಜಿನಗರ ಶಾಸಕರಾದ ಜಿ ಸೋಮಶೇಖರ ರೆಡ್ಡಿ, ಹನುಮಂತಪ್ಪ ಹುಲುಗಪ್ಪ, ಷಣ್ಮುಖ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು.