ರಾಣೇಬೆನ್ನೂರು17: ಇಲ್ಲಿನ ವಾಗೀಶ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಬಹು ವಿಜ್ರಂಭಣೆಯಿಂದ ಜರುಗಿದವು. ವಾಧಿರಾಜ ಆಚಾರ್ಯ ಗುಡಿ ಮತ್ತು ಗೋವಿಂದ ಚಿಮ್ಮಲಗಿ, ಪ್ರಾಣೇಶಾಚಾರ್ ಮುಂಡರಗಿ, ಆಚಾರ್ಯರು ಕಲ್ಯಾಣೋತ್ಸವವನ್ನು ಧಾಮರ್ಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ವರಪೂಜೆ, ವಜ್ನಾಂಶ್ಚಯ, ಶ್ರೀನಿವಾಸ, ಲಕ್ಷ್ಮೀ ಮತ್ತು ಪದ್ಮಾವತಿ ದೇವರಿಗೆ ಸುರಗಿ, ಪುಣ್ಯಾಹ, ನಾಂದೀ, ಮಾಂಗಲ್ಯ ಧಾರಣ, ಅಕ್ಷತಾರೋಪಣ, ಕನ್ಯಾದಾನ, ಲಾಜ ಹೋಮ, ಸಪ್ತಪದೀ, ಶ್ರೀನಿವಾಸ, ಲಕ್ಷ್ಮೀ ಮತ್ತು ಪದ್ಮಾವತಿ ದೇವರ ಪಾಲಕಿ ಮೆರವಣಿಗೆ ನಡೆದವು. ಆನಂತರ ಮಹಾಪ್ರಸಾದ ಜರುಗಿತು
. ಆನಂತರ ರಜನಿ ಕರಿಗಾರರಿಂದ ಸಂಗೀತ ಸೇವೆ ನಡೆಯಿತು. ರಾತ್ರಿ ತೊಟ್ಟಿಲ ಪೂಜೆನೆರವೇರಿತು.
ದೇವಸ್ಥಾನದ ಆಡಳಿತ ಮಂಡಳಿಯ ನಾಗರಾಜ ರಾಯಚೂರ, ವೆಂಕಟೇಶ ಬಸ್ಸಿಪಾಡ, ಕೃಷ್ಣಪ್ಪ, ವೆಂಕಟೇಶ ಮೇಡ್ಲೇರಿ, ಗುರುರಾಜ, ಚಂದ್ರು, ಹನುಮಂತಪ್ಪ, ಮಲ್ಲೇಶ, ಸುಭ್ರಹ್ಮ್ಯಂ, ಶ್ರೀಕಾಂತ, ಡಾ. ಆರ್. ಎಂ. ಕುಬೇರಪ್ಪ, ತಿಮ್ಮಜ್ಜ ಪಾಟೀಲ, ಏಕನಾಥ ಭಾನುವಳ್ಳಿ, ರವಿ ಕಿರಿಗೇರಿ, ಶ್ರೀಮತಿ ಪುಷ್ಪಾ ಏಕಬೋಟೆ, ಕೆ. ಡಿ. ಸಾವಕಾರ ಸೇರಿದಂತೆ ಮತ್ತಿತರರು ಇದ್ದರು.